ಕ್ವಾರ್ಟರ್‌ ಫೈನಲ್‌ನಲ್ಲಿ  ಕೇಯ್ಸ ವಾಯ್ಸ


Team Udayavani, Jun 4, 2018, 8:59 AM IST

29.jpg

ಪ್ಯಾರಿಸ್‌: ಅಮೆರಿಕದ ಮ್ಯಾಡಿಸನ್‌ ಕೇಯ್ಸ ಪ್ರಸಕ್ತ ಫ್ರೆಂಚ್‌ ಓಪನ್‌ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಏರಿದ ಮೊದಲ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಕೇಯ್ಸ ಕಾಣುತ್ತಿರುವ ಮೊದಲ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ ಕೂಡ ಹೌದು.

ಆರಂಭದಿಂದಲೇ ಮೇಲುಗೈ
ರವಿವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ 13ನೇ ಶ್ರೇಯಾಂಕದ ಮ್ಯಾಡಿಸನ್‌ ಕೇಯ್ಸ 6-1, 6-4 ಅಂತರದಿಂದ ರೊಮೇನಿಯಾದ ಮಿಹೆಲ ಬುಝರ್ನೆಸ್ಕಾ ಅವರನ್ನು ಹಿಮ್ಮೆಟ್ಟಿಸಿದರು. “ಬಿಗ್‌ ಸರ್ವರ್‌’ಗೆ ಹೆಸರುವಾಸಿಯಾದ ಕೇಯ್ಸ ಮೊದಲ ಸೆಟ್‌ನಲ್ಲಿ ಎದುರಾಳಿಯ ಮೇಲುಗೈಗೆ ಯಾವುದೇ ಅವಕಾಶ ಒದಗಿಸಲಿಲ್ಲ. ದ್ವಿತೀಯ ಸೆಟ್‌ನಲ್ಲೂ ಇದೇ ರೀತಿಯಲ್ಲಿ ರಭಸದ ಆಟವಾಡಿ 5-1 ಅಂತರದ ಮುನ್ನಡೆಯೊಂದಿಗೆ ದಾಪುಗಾಲಿಕ್ಕಿದರು. ಆದರೆ ಈ ಹಂತದಲ್ಲಿ ರೊಮೇನಿಯನ್‌ ಆಟಗಾರ್ತಿ ತಿರುಗಿ ಬಿದ್ದರು. ಸತತ 3 ಅಂಕಗಳನ್ನು ಸಂಪಾದಿ ಸಿದರು. ಆದರೆ ಕೇಯ್ಸ ಪರಾಕ್ರಮದ ಮುಂದೆ ಬುಝರ್ನೆಸ್ಕಾ ಆಟ ಸಾಗಲಿಲ್ಲ.

ಜ್ವೆರೇವ್‌-ಥೀಮ್‌  ಕ್ವಾರ್ಟರ್‌ ಫೈನಲ್‌ ಕಾಳಗ
ನಿಶಿಕೊರಿ, ಕರನ್‌ ಕಶನೋವ್‌ ಪರಾಭವ

ರವಿವಾರದ ಪುರುಷರ ಸಿಂಗಲ್ಸ್‌ ಸ್ಪರ್ಧೆಯ 4ನೇ ಸುತ್ತಿನ ಸೆಣಸಾಟದಲ್ಲಿ ಗೆದ್ದು ಬಂದ ದ್ವಿತೀಯ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವೆರೇವ್‌ ಮತ್ತು ಡೊಮಿನಿಕ್‌ ಥೀಮ್‌ ಕ್ವಾರ್ಟರ್‌ ಫೈನಲ್‌ ಕಾದಾಟಕ್ಕೆ ಸಜ್ಜಾಗಿದ್ದಾರೆ. ಇವರಿಬ್ಬರ ಏಟಿಗೆ ತತ್ತರಿಸಿ ಕೂಟದಿಂದ ಹೊರಬಿದ್ದವರೆಂದರೆ ರಶ್ಯದ ಕರೆನ್‌ ಕಶನೋವ್‌ ಮತ್ತು ಜಪಾನಿನ ಕೀ ನಿಶಿಕೊರಿ. ಇವರಲ್ಲಿ ಜ್ವೆರೇವ್‌ ರಶ್ಯನ್‌ ಆಟಗಾರನ ವಿರುದ್ಧ 5 ಸೆಟ್‌ಗಳ ಸುದೀರ್ಘ‌ ಹೋರಾಟ ನಡೆಸಬೇಕಾಯಿತು. ಅಂತಿಮವಾಗಿ 4-6, 7-6 (7-4), 2-6, 6-3, 6-3 ಅಂತರದಿಂದ ಗೆದ್ದು ನಿಟ್ಟುಸಿರೆಳೆದರು. ಬಿಸಿ ರಕ್ತದ ಈ ಯುವಕರಿಬ್ಬರ ಈ ಮ್ಯಾರಥಾನ್‌ ಆಟ ಟೆನಿಸ್‌ ಪ್ರಿಯರಿಗೆ ಧಾರಾಳ ರಂಜನೆ ಒದಗಿಸಿತು. 

ಅನಂತರದ ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಜಪಾನಿನ 19ನೇ ಶ್ರೇಯಾಂಕಿತ ಆಟಗಾರ ಕೀ ನಿಶಿಕೊರಿ ಅವರನ್ನು 6-2, 6-0, 5-7, 6-4 ಅಂತರದಿಂದ ಪರಾಭವಗೊಳಿಸಿದರು. ಥೀಮ್‌ 2016 ಹಾಗೂ 2017ರ ಪ್ಯಾರಿಸ್‌ ಕಾಳಗದಲ್ಲಿ ಸೆಮಿಫೈನಲ್‌ ತನಕ ಸಾಗಿದ್ದರು.  “ಮೊದಲೆರಡು ಸೆಟ್‌ಗಳು ಅದ್ಭುತವಾಗಿದ್ದವು. ಅನಂತರ ನಿಶಿಕೊರಿ ಮೇಲೇರತೊಡಗಿದರು. ಇಲ್ಲಿನ ವಾತಾವರಣವನ್ನು ನಾನು ಬಹಳ ಪ್ರೀತಿಸುತ್ತೇನೆ. ಇಲ್ಲಿ ನಡಾಲ್‌ ಅವರನ್ನು ಎದುರಿಸುವುದು ನನ್ನ ಬಯಕೆ…’ ಎಂದಿದ್ದಾರೆ ಡೊಮಿನಿಕ್‌ ಥೀಮ್‌.

ಸ್ಟೀಫ‌ನ್ಸ್‌, ಪುಟಿನ್ಸೇವಾ ಜಯಸ್ಲೋನ್‌ 
ಸ್ಟೀಫ‌ನ್ಸ್‌ ಮತ್ತು ಯುಲಿಯಾ ಪುಟಿನ್ಸೇವಾ ವನಿತಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.  ಸ್ಲೋನ್‌ ಸ್ಟೀಫ‌ನ್ಸ್‌ 6-2, 6-0 ಅಂತರದಿಂದ ಅನ್ನಾ ಕೊಂಟವೀಟ್‌ ಅವರನ್ನು ಹಿಮ್ಮೆಟ್ಟಿಸಿದರೆ, ಪುಟಿನ್ಸೇವಾ 6-4, 6-3ರಿಂದ ಬಬೊìರಾ ಸ್ಟ್ರೈಕೋವಾ ಅವರನ್ನು ಮಣಿಸಿದರು. ಪುಟಿನ್ಸೇವಾ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಮ್ಯಾಡಿಸನ್‌ ಕೇಯ್ಸ.

ನಡಾಲ್‌ಗೆ ಗಂಡಾಂತರ ತರುವರೇ ಡೆಲ್‌ ಪೊಟ್ರೊ?
ಸೆಮಿಯಲ್ಲಿ ಎದುರಾಗುವ ಸಾಧ್ಯತೆ
ಫ್ರೆಂಚ್‌ ಓಪನ್‌ ಟ್ರೋಫಿ ಮೇಲೆ ರಫೆಲ್‌ ನಡಾಲ್‌ ಹೆಸರೇ ಬರೆಯಲ್ಪಟ್ಟಿದೆ ಎಂಬುದು ಸದ್ಯದ ಅನಿಸಿಕೆ. ಆದರೆ ಈ ಲೆಕ್ಕಾಚಾರವನ್ನು ಅಡಿಮೇಲು ಮಾಡಬಲ್ಲ ಟೆನಿಸಿಗನೋರ್ವನಿದ್ದರೆ ಅದು ಆರ್ಜೆಂಟೀನಾದ “ಪವರ್‌ ಹೌಸ್‌’ ಖ್ಯಾತಿಯ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಎಂಬುದು ಟೆನಿಸ್‌ ವಿಶೇಷಜ್ಞರ ನಂಬಿಕೆ.

ಶನಿವಾರ ರಾತ್ರಿಯ 3ನೇ ಸುತ್ತಿನ ಮುಖಾಮುಖೀಯಲ್ಲಿ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಸ್ಪೇನಿನ ಆಲ್ಬರ್ಟ್‌ ರಮೋಸ್‌ ವಿನೋಲಸ್‌ ಅವರನ್ನು 7-5, 6-4, 6-1 ಅಂತರದಿಂದ ಪರಾಭವಗೊಳಿಸಿದರು. ಡೆಲ್‌ ಪೊಟ್ರೊ ಅವರ ಮುಂದಿನ ಸುತ್ತಿನ ಎದುರಾಳಿ ಅಮೆರಿಕದ ಬಿಗ್‌ ಸರ್ವರ್‌ ಖ್ಯಾತಿಯ ಜಾನ್‌ ಇಸ್ನರ್‌. ಇನ್ನೊಂದು ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಪಿಯರ್‌ ಹ್ಯೂಸ್‌ ಹರ್ಬರ್ಟ್‌ ವಿರುದ್ಧ ಭಾರೀ ಹೋರಾಟ ನಡೆಸಿ 7-6 (7-1), 6-4, 7-6 (7-4) ಅಂತರದಿಂದ ಗೆದ್ದು ಬಂದರು. ಇಸ್ನರ್‌ ಅವರ ಈ ಪರದಾಟವನ್ನು ಕಂಡಾಗ ಡೆಲ್‌ ಪೊಟ್ರೊ ಅವರೇ ನೆಚ್ಚಿನ ಆಟಗಾರನಾಗಿ ಗೋಚರಿಸುತ್ತಾರೆ. ಈ ಹರ್ಡಲ್ಸ್‌ ದಾಟಿ ಮುಂದುವರಿದರೆ ಡೆಲ್‌ ಪೊಟ್ರೊ ಅವರಿಗೆ ನಡಾಲ್‌ ಎದುರಾಗುವ ಸಾಧ್ಯತೆಯೊಂದು ಸ್ಪಷ್ಟವಾಗುತ್ತದೆ.

“ಮೊದಲ ಸೆಟ್‌ ವೇಳೆ ನಾನು ಹೆಚ್ಚು ಅದೃಷ್ಟಶಾಲಿಯಾಗಿದ್ದೆ ಅನಿಸುತ್ತದೆ. ಆಲ್ಬರ್ಟ್‌ ನನ್ನನ್ನು ಸಾಕಷ್ಟು ಓಡಾಡಿಸಿದರು. ಆದರೂ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದೆ. ಸರಿಯಾದ ಹೊತ್ತಿನಲ್ಲಿ ನನ್ನಿಂದ ಉತ್ತಮ ಆಟ ಕಂಡುಬಂತೆಂದೇ ಹೇಳಬಹುದು’ ಎಂದು ಡೆಲ್‌ ಪೊಟ್ರೊ ಹೇಳಿದ್ದಾರೆ. ಅಂದಹಾಗೆ ಈ ಆರ್ಜೆಂಟೀನಿ ಆಟಗಾರ ಫ್ರೆಂಚ್‌ ಓಪನ್‌ನಲ್ಲಿ ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು 2012ರ ಬಳಿಕ ಇದೇ ಮೊದಲು!

ಸೆರೆನಾ-ಶರಪೋವಾ ರ್ಯಾಕೆಟ್‌ ಸಮರ
ನಿರೀಕ್ಷೆಯಂತೆ ಸೆರೆನಾ ವಿಲಿಯಮ್ಸ್‌ ಮತ್ತು ಮರಿಯಾ ಶರಪೋವಾ ಅವರ ಹೋರಾಟಕ್ಕೆ ಪ್ಯಾರಿಸ್‌ನಲ್ಲಿ ವೇದಿಕೆ ಸಿದ್ಧಗೊಂಡಿದೆ. ಇವರಿಬ್ಬರೂ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದು, ಸೋಮವಾರ ಅಪರಾಹ್ನ 2.30ಕ್ಕೆ ಈ ತೀವ್ರ ನಿರೀಕ್ಷೆಯ ರ್ಯಾಕೆಟ್‌ ಸಮರ ಆರಂಭವಾಗಲಿದೆ. ಶನಿವಾರ ರಾತ್ರಿ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ 6-3, 6-4 ಅಂತರದಿಂದ ಜರ್ಮನಿಯ ಜೂಲಿಯಾ ಜಾಜ್‌ì ಅವರನ್ನು ಮಣಿಸಿದರು. 10 ಸಾವಿರದಷ್ಟು ವೀಕ್ಷಕರು ಈ ಪಂದ್ಯದ ಸವಿ ಅನುಭವಿಸಿದರು. ಇದರಲ್ಲಿ ಮಾಜಿ ಬಾಕ್ಸಿಂಗ್‌ ಚಾಂಪಿಯನ್‌ ಮೈಕ್‌ ಟೈಸನ್‌ ಕೂಡ ಸೇರಿದ್ದರೆಂಬುದು ವಿಶೇಷ!

ಮೊದಲ ಸೆಟ್‌ನಲ್ಲಿ ಸೆರೆನಾ 3-1ರ ಮುನ್ನಡೆಯೊಂದಿಗೆ ದಾಪುಗಾಲಿಕ್ಕಿದರು. 2ನೇ ಸೆಟ್‌ನಲ್ಲಿ 2-2 ಸಮಬಲ ಸಾಧಿಸಿದ್ದೇ ಜೂಲಿಯಾ ಅವರ ಉತ್ತಮ ಸಾಧನೆ ಎನಿಸಿತು. ಶನಿವಾರದ ಇನ್ನೊಂದು ಪಂದ್ಯದಲ್ಲಿ ಮರಿಯಾ ಶರಪೋವಾ 6-2, 6-1 ಅಂತರಿಂದ ಕ್ಯಾರೋಲಿನಾ ಪ್ಲಿಸ್ಕೋವಾ ಅವರಿಗೆ ಸೋಲುಣಿಸಿದ್ದರು.

ಶರಪೋವಾ ವಿರುದ್ಧ ಸೆರೆನಾ 19-2ರ ಗೆಲುವಿನ ದಾಖಲೆ ಹೊಂದಿದ್ದಾರೆ. ಇದರಲ್ಲಿ 18 ಗೆಲುವುಗಳು ಸತತವಾಗಿ ಒಲಿದಿರುವುದು ಸೆರೆನಾ ಪ್ರಭುತ್ವಕ್ಕೊಂದು ಉದಾಹರಣೆ. ಸೆರೆನಾ ವಿರುದ್ಧ ಶರಪೋವಾ ಕೊನೆಯ ಸಲ ಗೆಲುವು ಸಾಧಿಸಿದ್ದು 2004ರಲ್ಲಿ. 2016ರ ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಇವರಿಬ್ಬರು ಕೊನೆಯ ಸಲ ಎದುರಾಗಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.