ಸೆಪ್ಟಂಬರ್ನಲ್ಲಿ ಫ್ರೆಂಚ್ ಓಪನ್ ಟೆನಿಸ್
Team Udayavani, Mar 19, 2020, 7:10 AM IST
ಪ್ಯಾರಿಸ್: ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಪಂದ್ಯಾವಳಿಯನ್ನು ಕೋವಿಡ್ 19 ವೈರಸ್ ಕಾರಣದಿಂದ ಮುಂದೂಡಲಾಗಿದೆ. ಸಂಘಟಕರು ನೂತನ ದಿನಾಂಕವನ್ನೂ ಪ್ರಕಟಿಸಿ ದ್ದಾರೆ. ಅದರಂತೆ ಮೇ 24ರಿಂದ ಜೂ. 7ರ ತನಕ ಪ್ಯಾರಿಸ್ನ ಆವೆಯಂಗಳದಲ್ಲಿ ನಡೆಯಬೇಕಿದ್ದ ವರ್ಷದ ಈ ದ್ವಿತೀಯ ಗ್ರ್ಯಾನ್ಸ್ಲಾಮ್ ಟೂರ್ನಿ ಸೆ. 20ರಿಂದ ಅ. 4ರ ತನಕ ನಡೆಯಲಿದೆ.
ಅಂದರೆ, ಆಗ ವರ್ಷದ ಕೊನೆಯ ಗ್ರ್ಯಾನ್ಸ್ಲಾಮ್ ಕೂಟವಾದ “ಯುಎಸ್ ಓಪನ್’ ಮುಗಿದು ಒಂದು ವಾರವಷ್ಟೇ ಆಗಿರುತ್ತದೆ. ಆದರೆ ಯುಎಸ್ ಓಪನ್ ನ್ಯೂಯಾರ್ಕ್ನಲ್ಲಿ ನಿಗದಿಯಂತೆ ನಡೆಯುತ್ತದೋ ಅಥವಾ ಅದು ಕೂಡ ಮುಂದೂಡಲ್ಪಡುವುದೋ ಎಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ. ಈ ನಡುವೆ ಜೂನ್-ಜುಲೈಯಲ್ಲಿ ನಡೆಯಬೇಕಿರುವ, ವರ್ಷದ 3ನೇ ಗ್ರ್ಯಾನ್ಸ್ಲಾಮ್ ಪಂದ್ಯಾವಳಿಯಾದ ವಿಂಬಲ್ಡನ್ ಟೆನಿಸ್ ನಡೆಯುವ ಅಥವಾ ಮುಂದೂಡಲ್ಪಡುವ ಬಗ್ಗೆಯೂ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ.
“ಇಡೀ ಜಗತ್ತು ಕೋವಿಡ್ 19 ಭೀತಿಗೆ ಸಿಲುಕಿದೆ. ಎಲ್ಲರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನಿಸಿ ರೊಲ್ಯಾಂಡ್ ಗ್ಯಾರೋಸ್ನಲ್ಲಿ ನಡೆಯಬೇಕಿರುವ 2020ರ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಇದನ್ನು ಸೆ. 20ರಿಂದ ಆರಂಭಿಸಲಾಗುವುದು’ ಎಂದು ಫ್ರೆಂಚ್ ಓಪನ್ ಸಂಘಟನೆ (ಎಫ್ಎಫ್ಟಿ) ತಿಳಿಸಿದೆ.
ಕಳೆದ ವಾರ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ಎ. 17ರ ತನಕ ಪುರುಷರ ಪಂದ್ಯಾವಳಿಯನ್ನು ಅಮಾನತಿನಲ್ಲಿಡಲು ನಿರ್ಧರಿಸಿತ್ತು. ಹಾಗೆಯೇ ಮೇ 2ರ ತನಕ ವನಿತಾ ಟೆನಿಸ್ ಕೂಟವನ್ನು ಮುಂದೂಡಲು ಡಬ್ಲ್ಯುಟಿಎ ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ