ಪ್ರಶಸ್ತಿ ಮೊತ್ತ 18 ಕೋ.ರೂ.ಗೆ ಏರಿಕೆ
Team Udayavani, Mar 23, 2019, 12:30 AM IST
ಪ್ಯಾರಿಸ್ (ಫ್ರಾನ್ಸ್): ವಿಶ್ವದ ಪ್ರತಿಷ್ಠಿತ ನಾಲ್ಕು ಗ್ರ್ಯಾನ್ಸ್ಲಾಮ್ ಟೆನಿಸ್ ಕೂಟಗಳಲ್ಲಿ ಒಂದಾಗಿರುವ “ಫ್ರೆಂಚ್ ಓಪನ್ ಟೆನಿಸ್’ ಪ್ರಶಸ್ತಿ ಮೊತ್ತವನ್ನು 18 ಕೋಟಿ ರೂ.ಗೆ ಏರಿಸಲಾಗಿದೆ. ಹಿಂದಿನ ಮೊತ್ತಕ್ಕೆ ಹೋಲಿಸಿದರೆ ಇದು ಶೇ.8ರಷ್ಟು ಏರಿಕೆಯಾಗಲಿದೆ. ಆಸ್ಟ್ರೇಲಿಯ, ಅಮೆರಿಕ, ಇಂಗ್ಲೆಂಡ್ ಗ್ರ್ಯಾನ್ಸ್ಲಾಮ್ಗಳಿಗೆ ಹೋಲಿಸಿದರೆ ಫ್ರೆಂಚ್ ಓಪನ್ ಪ್ರಶಸ್ತಿ ಮೊತ್ತ ಕಡಿಮೆ. ಆದರೆ ಫ್ರೆಂಚ್ ಓಪನ್ ಸಂಘಟಕರು, ಕೆಲವು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಚಾಂಪಿಯನ್ ಆಟಗಾರರು ಹಾಗೂ ಲೀಗ್ ಹಂತದಲ್ಲೇ ಹೊರಹೋದವರ ನಡುವೆ ಭಾರೀ ಅಂತರವಿರದೆ, ಎಲ್ಲರಿಗೂ ಉತ್ತಮ ಮೊತ್ತವೇ ಸಿಗುವಂತೆ ನೋಡಿಕೊಳ್ಳುವ ಲೆಕ್ಕಾಚಾರ ಮಾಡಿದ್ದಾರೆ. ಪ್ರಸಕ್ತ ಪಂದ್ಯಾವಳಿಯಿಂದಲೇ ಈ ಮೊತ್ತ ಜಾರಿಗೆ ಬರಲಿದೆ.