ಇಂದಿನಿಂದ ಡೇವಿಸ್ ಕಪ್; ಭಾರತ ತಂಡದಿಂದ ಅನುಭವಿ ಪೇಸ್ ಹೊರಕ್ಕೆ
Team Udayavani, Apr 7, 2017, 9:51 AM IST
ಬೆಂಗಳೂರು: ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರನ್ನು ಉಜ್ಬೇಕಿಸ್ಥಾನ ವಿರುದ್ಧ ಬೆಂಗಳೂರಿನ ಕೆಎಸ್ಎಲ್ಟಿಎನಲ್ಲಿ ನಡೆಯಲಿರುವ ಏಶ್ಯ ಒಶಿಯಾನಿಯ ಡೇವಿಸ್ ಕಪ್ ತಂಡದಿಂದ ಕೈ ಬಿಡಲಾಗಿದೆ. 27 ವರ್ಷದ ಟೆನಿಸ್ ವೃತ್ತಿಜೀವನದಲ್ಲಿ ಪೇಸ್ ಅವರನ್ನು ಡೇವಿಸ್ ಕಪ್ ತಂಡದಿಂದ ಹೊರಗಿರಿಸಿದ್ದು ಇದೇ ಮೊದಲು.
1990ರಲ್ಲಿ ಜೈಪುರದಲ್ಲಿ ಜಪಾನ್ ವಿರುದ್ಧ ಆಡುವ ಮೂಲಕ ಡೇವಿಸ್ ಕಪ್ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ತಂಡದಿಂದ ಪೇಸ್ ಅವರನ್ನು ಹೊರಗಿಡಲಾಗಿದ್ದು, ಇದಕ್ಕೆ ನಿಖರ ಕಾರಣಗಳನ್ನು ಎಐಟಿಎ ತಿಳಿಸಿಲ್ಲ.
ಡಬಲ್ಸ್ ವಿಭಾಗದಲ್ಲಿ ಭಾರತ ತಂಡವನ್ನು ರೋಹನ್ ಬೋಪಣ್ಣ – ಶ್ರೀರಾಮ್ ಬಾಲಾಜಿ ಪ್ರತಿನಿಧಿಸಲಿದ್ದಾರೆ. ಮೊದಲ ಪಂದ್ಯದಲ್ಲಿ ಬೋಪಣ್ಣ-ಬಾಲಾಜಿ ಜೋಡಿ ಎದುರಾಳಿ ತಂಡದ ಫಾರುಕ್ ಡಿಸ್ಟೋವ್ ಮತ್ತು ಸಂಜರ್ ಫೇಜಿವ್ ಜೋಡಿಯನ್ನು ಎದುರಿಸಲಿದ್ದಾರೆ.