ಡೆಲ್ಲಿ ಕ್ಯಾಪಿಟೆಲ್ಸ್‌ಗೆ ಗಂಭೀರ್‌ ಸಹಮಾಲೀಕ ಸಾಧ್ಯತೆ

Team Udayavani, Dec 6, 2019, 9:18 PM IST

ನವದೆಹಲಿ: ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕ್ರಿಕೆಟ್‌ ಕೂಟದ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಹಮಾಲೀಕರಾಗಿ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್‌ ಗಂಭೀರ್‌ ಆಯ್ಕೆಯಾಗುವ ಸಾಧ್ಯತೆ ಇದೆ.

ಈ ಬಗ್ಗೆ ಸ್ವತಃ ಗಂಭೀರ್‌ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಗಂಭೀರ್‌ ಶೇ.10ರಷ್ಟು ಪಾಲನ್ನು ಪಡೆಯುವ ಸಾಧ್ಯತೆ ಇದೆ. ಸದ್ಯ ಜಿಎಂಆರ್‌ ಸಮೂಹ ತಂಡದ ಶೇ.50ರಷ್ಟು ಪಾಲನ್ನು ಹೊಂದಿದೆ. ಉಳಿದಂತೆ ಜೆಎಸ್‌ಡಬ್ಲ್ಯು ಕೂಡ ಸ್ವಲ್ಪ ಪಾಲನ್ನು ಹೊಂದಿದೆ. ಗಂಭೀರ್‌ ಐಪಿಎಲ್‌ ಆರಂಭದಲ್ಲಿ ಡೆಲ್ಲಿ ತಂಡದ ಪರವಾಗಿ ಆಡಿದ್ದರು. ಅದಾದ ಬಳಿಕ ಅವರು 7 ಆವೃತ್ತಿಗಳಲ್ಲಿ ಕೋಲ್ಕತ ನೈಟ್‌ ರೈಡರ್ (ಕೆಕೆಆರ್‌)ತಂಡದ ಪರ ಆಡಿದ್ದರು. ಇವರ ನಾಯಕತ್ವದಲ್ಲಿ ಕೆಕೆಆರ್‌ ಟ್ರೋಫಿಯನ್ನೂ ಗೆದ್ದಿತ್ತು. ಸದ್ಯ ಗಂಭೀರ್‌ ಸಹಮಾಲೀಕರಾಗುವ ಕುರಿತಂತೆ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆದು, ಅನುಮೋದನೆ ದೊರಕಿದರಷ್ಟೆ ಅವರಿಗೆ ಡೆಲ್ಲಿ ತಂಡ ಸೇರಲು ಸಾಧ್ಯವಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ