ಗಂಗೂಲಿ ಆಯ್ಕೆಯ ಐಪಿಎಲ್ ತಂಡಕ್ಕೆ ಗಂಗೂಲಿಯೇ ನಾಯಕ!
Team Udayavani, Dec 24, 2019, 5:34 AM IST
ಹೊಸದಿಲ್ಲಿ: ಬಿಸಿಸಿಐ ಅಧ್ಯಕ್ಷ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ನೆಚ್ಚಿನ ಐಪಿಎಲ್ ಫ್ಯಾಂಟಸಿ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದ ನಾಯಕರಾಗಿ ತಮ್ಮನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಖ್ಯಾತ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ರಿಯಾನ್ ಪರಾಗ್, ರವೀಂದ್ರ ಜಡೇಜ ಈ ತಂಡದಲ್ಲಿ ಸ್ಥಾನ ಪಡೆದುಕೊಂಡ ಭಾರತೀಯ ಆಟಗಾರರಾಗಿದ್ದಾರೆ.
ಗಂಗೂಲಿ ಆಯ್ಕೆಯ ತಂಡ
ಸೌರವ್ ಗಂಗೂಲಿ (ನಾಯಕ), ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ರಿಷಭ್ ಪಂತ್, ಆ್ಯಂಡ್ರೆ ರಸೆಲ್, ಜಸ್ಪ್ರೀತ್ ಬುಮ್ರಾ, ಮಾರ್ಕಸ್ ಸ್ಟೋಯಿನಿಸ್, ರಿಯಾನ್ ಪರಾಗ್, ಜೋಫÅ ಆರ್ಚರ್, ರವೀಂದ್ರ ಜಡೇಜ.