ವಿಂಬಲ್ಡನ್: ಮುಗುರುಜಾ, ಸೆರೆನಾ ಮುನ್ನಡೆ
Team Udayavani, Jul 4, 2018, 6:00 AM IST
ಲಂಡನ್: ಹಾಲಿ ಚಾಂಪಿಯನ್ ಆಗಿರುವ ಸ್ಪೇನ್ನ ಗಾರ್ಬಿನ್ ಮುಗುರುಜಾ ಮತ್ತು ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಗೆಲುವು ಸಾಧಿಸಿ ವಿಂಬಲ್ಡನ್ ಟೆನಿಸ್ ಕೂಟದಲ್ಲಿ ಮೊದಲ ಸುತ್ತು ದಾಟಿದ್ದಾರೆ.
ಬ್ರಿಟನ್ನ ವೈಲ್ಡ್ಕಾರ್ಡ್ ನವೋಮಿ ಬ್ರಾಡಿ ಅವರನ್ನು 6-2, 7-5 ಸೆಟ್ಗಳಿಂದ ಕೆಡಹುವ ಮೂಲಕ ಮುಗುರುಜಾ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ಆರಂಭಿಸಿದರು. ವೀನಸ್ ವಿಲಿಯಮ್ಸ್ ಅವರನ್ನು ಕೆಡಹುವ ಮೂಲಕ ಮುಗುರುಜಾ ಕಳೆದ ವರ್ಷ ಇಲ್ಲಿ ಪ್ರಶಸ್ತಿ ಪಡೆದಿದ್ದರು. ಅವರು ಮೂರನೇ ಬಾರಿ ಇಲ್ಲಿ ಫೈನಲಿಗೇರುವ ಗುರಿಯನ್ನು ಇಟ್ಟುಕೊಂಡಿದ್ದಾರೆ.
ಎರಡು ಬಾರಿಯ ಚಾಂಪಿಯನ್ ಆಗಿರುವ ಮುಗುರುಜಾಗೆ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಲು 88 ನಿಮಿಷ ಬೇಕಾಯಿತು. ನಾನು ಮರಳಿ ಬಂದಿದ್ದೇನೆ. ಇದು ಯಾವಾಗಲೂ ಒಳ್ಳೆಯದೇ. ಪಂದ್ಯದಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯೊಂದಿಗೆ ಬಂದಿದ್ದೇನೆ ಎಂದು ಮುಗುರುಜಾ ಹೇಳಿದ್ದಾರೆ.
ತಾಯಿಯಾದ ಬಳಿಕ ಮೊದಲ ಬಾರಿ ಇಲ್ಲಿ ಆಡುತ್ತಿರುವ ಸೆರೆನಾ ಅವರು ಅರಾಂತಾ ರಸ್ ಅವರನ್ನು 7-5, 6-3 ಸೆಟ್ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೇರಿದರು. ಏಳು ಬಾರಿಯ ಚಾಂಪಿಯನ್ ಆಗಿರುವ ಸೆರೆನಾ ಗರ್ಭಿಣಿಯಾಗಿದ್ದರಿಂದ ಕಳೆದ ವರ್ಷ ಇಲ್ಲಿ ಆಡಿರಲಿಲ್ಲ.
ಕೊಂಟಾ ಮುನ್ನಡೆ
ಬ್ರಿಟನ್ನ ನಂಬರ್ ವನ್ ಜೊಹಾನ್ನಾ ಕೊಂಟಾ ಕಠಿನ ಹೋರಾಟದಲ್ಲಿ ರಶ್ಯದ ನಟಾಲಿಯಾ ವಿಖ್ಯಾಂಟೆÕàವಾ ಅವರನ್ನು 7-5, 7-6 (7) ಸೆಟ್ಗಳಿಂದ ಕೆಡಹಿ ಮುನ್ನಡೆದರು.
ದಿಮಿತ್ರೋವ್ಗೆ ಆಘಾತ
ಮೂರು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಸ್ಟಾನ್ ವಾವ್ರಿಂಕ ಅವರು ಆರನೇ ಶ್ರೇಯಾಂಕದ ಗ್ರಿಗರ್ ದಿಮಿತ್ರೋವ್ ಅವರನ್ನು 1-6, 7-6 (3), 7-6 (5), 6-4 ಸೆಟ್ಗಳಿಂದ ಉರುಳಿಸಿ ಆಘಾತಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ