ಇಂಗ್ಲೆಂಡ್ ಕ್ರಿಕೆಟಿಗೆ ಕರ್ಸ್ಟನ್ ಕೋಚ್ ಆದರೆ ಒಳ್ಳೆಯದು : ಆಥರ್ಟನ್
Team Udayavani, Oct 3, 2019, 9:25 PM IST
ಲಂಡನ್: ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆದರೆ ಒಳ್ಳೆಯದು ಎಂದು ಮಾಜಿ ನಾಯಕ ಮೈಕಲ್ ಆಥರ್ಟನ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಇಂಗ್ಲೆಂಡ್ ತಂಡಕ್ಕೆ ಕರ್ಸ್ಟನ್ ಕೋಚ್ ಆಗಿ ನೇಮಕಗೊಂಡರೆ, ಅವರು ಆಂಗ್ಲರ ಪಡೆಯ 4ನೇ ವಿದೇಶಿ ಕೋಚ್ ಆಗಲಿದ್ದಾರೆ. ಇಲ್ಲಿ ರಾಷ್ಟ್ರೀಯತೆಯ ಪ್ರಶ್ನೆ ಬರುವುದಿಲ್ಲ. ಕೌಶಲ, ಅನುಭವ ಮುಖ್ಯ. ಕರ್ಸ್ಟನ್ ಪರಿಪೂರ್ಣ ಆಯ್ಕೆ ಎನಿಸುತ್ತದೆ. ಇಂಗ್ಲೆಂಡ್ ಏಕದಿನ ತಂಡ ಮಾರ್ಗನ್ ನಾಯಕತ್ವದಲ್ಲಿ ಈಗಾಗಲೇ ಪಳಗಿದೆ. ವಿಶ್ವ ಚಾಂಪಿಯನ್ ಕೂಡ ಆಗಿದೆ. ಆದರೆ ಟೆಸ್ಟ್ ತಂಡದಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ’ ಎಂದು ಆಥರ್ಟನ್ ಹೇಳಿದರು.
ಗ್ಯಾರಿ ಕರ್ಸ್ಟನ್ ಭಾರತ ತಂಡದ ಕೋಚ್ ಆಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಅವರ ಅವಧಿಯಲ್ಲಿ ಭಾರತ ಏಕದಿನ ವಿಶ್ವಕಪ್ ಜಯಿಸಿತ್ತು. ಬಳಿಕ ಅವರು ಕುಟುಂಬದ ಜತೆ ಕಾಲ ಕಳೆಯುವ ಸಲುವಾಗಿ ಕೋಚ್ ಹುದ್ದೆ ತ್ಯಜಿಸಿದರು. ಇದಾದ ಬಳಿಕ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಸ್ಪರ್ಧಿಸಿರಲಿಲ್ಲ. ದೇಶೀಯ ಟಿ20 ಲೀಗ್ಗಳಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ