ಆಫ್ರಿಕಾ ತಂಡಕ್ಕೆ ಜಾರ್ಜ್ ಲಿಂಡೆ
Team Udayavani, Sep 6, 2019, 5:10 AM IST
ಜೊಹಾನ್ಸ್ಬರ್ಗ್: ಭಾರತ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಟಿ20 ತಂಡದಲ್ಲಿ ಒಂದು ಬದಲಾವಣೆ ಸಂಭವಿಸಿದೆ. ಆಲ್ರೌಂಡರ್ ಜಾನ್-ಜಾನ್ ಟ್ರೆವರ್ ಸ್ಮಟ್ಸ್ ಬದಲು ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಜಾರ್ಜ್ ಲಿಂಡೆ ಅವರನ್ನು ಸೇರಿಸಿಕೊಳ್ಳಲಾಗಿದೆ.
ಸ್ಮಟ್ಸ್ ಫಿಟ್ನೆಸ್ನಲ್ಲಿ ಅನುತ್ತೀರ್ಣರಾದ ಕಾರಣ ಹೊರ ಗುಳಿಯಲಿದ್ದಾರೆ. ಲಿಂಡೆ ಸದ್ಯ ಭಾರತ ಪ್ರವಾಸದಲ್ಲಿರುವ ದ.ಆಫ್ರಿಕಾ “ಎ’ ತಂಡದಲ್ಲಿದ್ದಾರೆ. 3 ಪಂದ್ಯಗಳ ಸರಣಿ ಸೆ. 15ರಿಂದ ಆರಂಭವಾಗಲಿದೆ.
ದಕ್ಷಿಣ ಆಫ್ರಿಕಾ ತಂಡ:
ಕ್ವಿಂಟನ್ ಡಿ ಕಾಕ್ (ನಾಯಕ), ರಸ್ಸಿ ವಾನ್ ಡರ್ ಡುಸೆನ್ (ಉಪನಾಯಕ), ಟೆಂಬ ಬವುಮ, ಜೂನಿಯರ್ ಡಾಲಾ, ಬೋರ್ನ್ ಫೋರ್ಟುಯಿನ್, ಬ್ಯೂರನ್ ಹೆಂಡ್ರಿಕ್ಸ್, ರೀಝ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಅನ್ರಿಚ್ ನೋರ್ಜೆ, ಆ್ಯಂಡಿಲ್ ಫೆಲುಕ್ವಾಯೊ, ಡ್ವೇನ್ ಪ್ರಿಟೋರಿಯಸ್, ಕಾಗಿಸೊ ರಬಾಡ, ತಬ್ರೇಜ್ ಶಂಸಿ, ಜಾರ್ಜ್ ಲಿಂಡೆ.