ಶೀಘ್ರ ತಂಡಕ್ಕೆ ಮರಳುವೆ : ಜಸ್ಪ್ರೀತ್ ಬುಮ್ರಾ
Team Udayavani, Oct 29, 2019, 10:54 PM IST
ಮುಂಬಯಿ: ಬೆನ್ನು ಮೂಳೆಯ ಸಮಸ್ಯೆಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಶೀಘ್ರ ತಂಡವನ್ನು ಮರಳಿ ಸೇರಲಿದ್ದೇನೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.
ಬುಮ್ರಾ ಅವರ ಬೆನ್ನು ಮೂಳೆಯಲ್ಲಿ ಕಾಣಿಸಿಕೊಂಡಿದ್ದ ಬಿರುಕು ನೈಸರ್ಗಿಕವಾಗಿ ಗುಣವಾಗಿದ್ದ ಕಾರಣ ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಮತ್ತು ನಿಧಾನವಾಗಿ ಕ್ರಿಕೆಟ್ ಅಭ್ಯಾಸ ಆರಂಭಿಸಬಹುದು ಎಂದು ಕಳೆದ ವಾರ ವೈದ್ಯರು ಸಲಹೆ ನೀಡಿದ್ದರು.
ಇದೀಗ ಬುಮ್ರಾ ತಾವು ಜಿಮ್ನಲ್ಲಿ ಬೆವರಿಳಿಸಿರುವ ಫೋಟೊ ಒಂದನ್ನು ಪ್ರಕಟಿಸಿ “ಕಮಿಂಗ್ ಸೂನ್’ ಎಂದು ಬರೆದುಕೊಂಡಿ¨ªಾರೆ. ಬುಮ್ರಾ ಅವರ ಈ ಟ್ವೀಟ್ನಿಂದ ಅಭಿಮಾನಿಗಳಿಗೆ ಸಂತಸ ಮೂಡಿದೆ.
ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದ ಜಸ್ಪ್ರೀತ್ ಬುಮ್ರಾ ಬಳಿಕ ಗಾಯದ ಸಮಸ್ಯೆಯಿಂದಾಗಿ 3 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದರು. ಆ ಬಳಿಕ ಬಾಂಗ್ಲಾದೇಶ ವಿರುದ್ಧದ ಟಿ20 ಮತ್ತು ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದರು.