ಜಪಾನ್‌ ಪ್ರವಾಸಕ್ಕೆ ಹೊರಟ ಹಾಕಿ ಪಡೆ

ಆಗಸ್ಟ್‌ 17ರಿಂದ ಒಲಿಂಪಿಕ್‌ ಟೆಸ್ಟ್‌ ಹಾಕಿ ಸರಣಿ ಆರಂಭ

Team Udayavani, Aug 12, 2019, 5:36 AM IST

ಬೆಂಗಳೂರು: ಮುಂಬರುವ ಒಲಿಂಪಿಕ್‌ ಅರ್ಹತಾ ಕೂಟದ ಹಿನ್ನೆಲೆಯಲ್ಲಿ ಭಾರತೀಯ ಪುರುಷರ ಮತ್ತು ವನಿತೆಯರ ಹಾಕಿ ತಂಡಗಳು ಟೋಕಿಯೊದಲ್ಲಿ ನಡೆಯುವ ಹಾಕಿ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿದವು.

ಆ. 17ರಿಂದ ಈ ಟೆಸ್ಟ್‌ ಸರಣಿ ಆರಂಭವಾಗಲಿದೆ. ಉ»ಯ ತಂಡಗಳ ಆಟಗಾರರಿಗೆ ತಮ್ಮ ಸಾಮರ್ಥ್ಯ, ಪ್ರತಿಭೆ ಪ್ರದರ್ಶಿಸಲು ಒಳ್ಳೆಯ ವೇದಿಕೆಯಾಗಲಿದೆ.

ಭಾರತೀಯ ಪುರುಷರ ತಂಡ ಆತಿಥೇಯ ಜಪಾನ್‌, ನ್ಯೂಜಿಲ್ಯಾಂಡ್‌ ಮತ್ತು ಮಲೇಶ್ಯ ವಿರುದ್ಧ ಆಡಲಿದೆ. ವನಿತಾ ತಂಡ ಆಸ್ಟ್ರೇಲಿಯ, ಚೀನ ಮತ್ತು ಜಪಾನ್‌ ವಿರುದ್ಧ ಆಡಲಿದೆ. ಆ. 17ರಂದು ಭಾರತ ಪುರುಷರು ಮಲೇಶ್ಯ ವಿರುದ್ಧ, ವನಿತೆಯರು ಜಪಾನ್‌ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ.

ಯುವಕರಿಗೆ ಉತ್ತಮ ಅವಕಾಶ
‘ಯುವ ಆಟಗಾರರಿಗೆ ಉತ್ತಮ ಸಾಧನೆಗೈ ಯಲು ಈ ಸರಣಿ ಒಳ್ಳೆಯ ಅವಕಾಶ. ಇಲ್ಲಿನ ನಿರ್ವಹಣೆಯನ್ನು ಗಮನಿಸಿ ಒಲಿಂಪಿಕ್‌ ಅರ್ಹತಾ ಕೂಟಕ್ಕೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ. ಒಲಿಂಪಿಕ್‌ ಅರ್ಹತಾ ಕೂಟ ನವೆಂಬರ್‌ನಲ್ಲಿ ನಡೆಯಲಿದೆ.

ಮುಂದಿನ ವರ್ಷ ಟೋಕಿಯೊದಲ್ಲೇ ಒಲಿಂಪಿಕ್ಸ್‌ ನಡೆಯಲಿದೆ. ಹಾಗಾಗಿ ಈ ಟೆಸ್ಟ್‌ ಸರಣಿ ಮೂಲಕ ಆಟಗಾರರು ಟೋಕಿಯೊದ ಆಟವಾಡುವ ಸ್ಥಿತಿಯನ್ನು ಚೆನ್ನಾಗಿ ತಿಳಿಯಬಹುದಾಗಿದೆ ಎಂಬುದು ಹರ್ಮನ್‌ಪ್ರೀತ್‌ ಅಭಿಪ್ರಾಯ.

ಅನಿರೀಕ್ಷಿತ ಗೆಲುವಿನ ಗುರಿ
ಕಳೆದೊಂದು ವರ್ಷದಲ್ಲಿ ನಾವು ಜಪಾನ್‌ ಮತ್ತು ಚೀನ ವಿರುದ್ಧ ಉತ್ತಮ ನಿರ್ವಹಣೆ ದಾಖಲಿಸಿದ್ದೇವೆ. ಆಸ್ಟ್ರೇಲಿಯ ವಿರುದ್ಧ ನಮ್ಮ ಸಾಧನೆ ಅಷ್ಟಕ್ಕಷ್ಟೇ. ಹಾಗಾಗಿ ಈ ಸರಣಿಯಲ್ಲಿ ಉನ್ನತ ರ್‍ಯಾಂಕಿನ ಆಸ್ಟ್ರೇಲಿಯ ವಿರುದ್ಧ ಅನಿರೀಕ್ಷಿತ ಗೆಲುವು ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ವನಿತಾ ತಂಡದ ನಾಯಕಿ ರಾಣಿ ರಾಮ್‌ಪಾಲ್ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ