ವಿಶ್ವದಾಖಲೆಯ ಬಂಗಾರ ಅಪೂರ್ವಿ ಅಪೂರ್ವ ಸಾಧನೆ


Team Udayavani, Feb 24, 2019, 12:30 AM IST

12.jpg

ಹೊಸದಿಲ್ಲಿ: ಭಾರತದ ಸ್ಟಾರ್‌ ಶೂಟರ್‌ ಅಪೂರ್ವಿ ಚಾಂಡೇಲ “ಇಂಟರ್‌ನ್ಯಾಶನಲ್‌ ಶೂಟಿಂಗ್‌ ನ್ಪೋರ್ಟ್‌ ಫೆಡ ರೇಶನ್‌’ (ಐಎಸ್‌ಎಸ್‌ಎಫ್) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಪೂರ್ವ ಸಾಧನೆಗೈದಿದ್ದಾರೆ. ವಿಶ್ವದಾಖಲೆಯ ಪರಾಕ್ರಮ ದೊಂದಿಗೆ ಬಂಗಾರದ ಪದಕಕ್ಕೆ ಗುರಿ ಇರಿಸಿದ್ದಾರೆ.

ಶನಿವಾರ “ಡಾ| ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌’ನಲ್ಲಿ ನಡೆದ ವನಿತೆಯರ 10 ಮೀ. ಏರ್‌ ರೈಫ‌ಲ್‌ ಸ್ಪರ್ಧೆಯಲ್ಲಿ 26ರ ಹರೆಯದ ಅಪೂರ್ವಿ ಚಾಂಡೇಲ 252.9 ಅಂಕಗಳೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿ ಕೊಂಡರು. ಇದು ನೂತನ ವಿಶ್ವ ದಾಖಲೆಯಾಗಿದೆ. ಹಿಂದಿನ ದಾಖಲೆ ಚೀನದ ರೌಝು ಝಾವೊ ಹೆಸರಲ್ಲಿತ್ತು (252.4). ಅವರು ಕಳೆದ ವರ್ಷ ಕೊರಿಯಾ ದಲ್ಲಿ ನಡೆದ ವಿಶ್ವಕಪ್‌ನಲ್ಲಿ ಈ ಸಾಧನೆಗೈದಿದ್ದರು.

ಝಾವೊ ಸಮ್ಮುಖದಲ್ಲೇ ದಾಖಲೆ
ಅಪೂರ್ವಿ ಈ ಚೀನೀ ಎದುರಾಳಿ ಸಮ್ಮುಖದಲ್ಲೇ ವಿಶ್ವದಾಖಲೆ ನಿರ್ಮಿ ಸಿದ್ದು ವಿಶೇಷವಾಗಿತ್ತು. ಶನಿವಾರದ ಸ್ಪರ್ಧಾಕಣದಲ್ಲಿದ್ದ ರೌಝು ಝಾವೊ 251.8 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಕಂಚು ಮತ್ತೋರ್ವ ಚೀನೀ ಶೂಟರ್‌ ಹಾಂಗ್‌ ಕ್ಸು ಪಾಲಾಯಿತು (230.4). ಅರ್ಹತಾ ಸುತ್ತಿನಲ್ಲಿ ಝಾವೊ ಅವರೇ ಅಗ್ರಸ್ಥಾನಿಯಾಗಿದ್ದರು (634).

ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿರುವ ಅಪೂರ್ವಿ ಚಾಂಡೇಲ, ಅರ್ಹತಾ ಸುತ್ತಿನಲ್ಲಿ 4ನೇ ಸ್ಥಾನದಲ್ಲಿದ್ದರು (629.3). ಆದರೆ ಭಾರತದ ಮತ್ತಿಬ್ಬರು ಸ್ಪರ್ಧಿಗಳಾದ ಅಂಜುಮ್‌ ಮೌದ್ಗಿಲ್‌ (628) ಮತ್ತು ಎಳವೆನಿಲ್‌ ವಲರಿವನ್‌ (625.3) ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 12ನೇ ಹಾಗೂ 30ನೇ ಸ್ಥಾನ ಪಡೆದು ಫೈನಲ್‌ ರೇಸ್‌ನಿಂದ ನಿರ್ಗಮಿಸಿದರು. 

3ನೇ ವಿಶ್ವಕಪ್‌ ಪದಕ
ಇದು ವಿಶ್ವಕಪ್‌ನಲ್ಲಿ ಅಪೂರ್ವಿ ಗೆದ್ದ 3ನೇ ವೈಯಕ್ತಿಕ ಪದಕ. 2015ರ ಚಾಂಗÌನ್‌ ವರ್ಲ್ಡ್ಕಪ್‌ನಲ್ಲಿ ಕಂಚು, ಅದೇ ವರ್ಷದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 

ಇಲ್ಲಿನ ಸವಾಲು ಕಠಿನ ಎಂಬ ಅರಿವಿತ್ತು. ಆದರೆ ಕಠಿನ ಅಭ್ಯಾಸ ನಡೆಸಿದ್ದೆ. ಯಾವ ಕಾರಣಕ್ಕೂ ಹಿಂದುಳಿಯಬಾರದು ಎಂಬ ದೃಢ ನಿರ್ಧಾರ ನನ್ನದಾಗಿತ್ತು. ನಿರೀಕ್ಷಿಸಿದ ಫ‌ಲಿತಾಂಶವೇ ಲಭಿಸಿದೆ. ಬಹಳ ಖುಷಿಯಾಗಿದೆ.
-ಅಪೂರ್ವಿ ಚಾಂಡೇಲ

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.