ಪಾಂಡ್ಯ ಸೋದರರ ತಂದೆ ನಿಧನ
Team Udayavani, Jan 17, 2021, 1:07 AM IST
ವಡೋದರಾ: ಕ್ರಿಕೆಟಿಗರಾದ ಪಾಂಡ್ಯ ಸೋದರರ ತಂದೆ ಹಿಮಾಂಶು ಪಾಂಡ್ಯ (71) ಶನಿವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಹಿಮಾಂಶು ಪಾಂಡ್ಯ ಸೂರತ್ನಲ್ಲಿ ಸಣ್ಣ ಮಟ್ಟದ ಕಾರ್ ಫೈನಾನ್ಸ್ ಉದ್ಯೋಗ ಮಾಡಿ ಕೊಂಡಿದ್ದರು. ಬಳಿಕ ಇದನ್ನು ಕೊನೆಗೊಳಿಸಿ ವಡೋದರಕ್ಕೆ ಬಂದಿದ್ದರು. ಪುತ್ರರಾದ ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯ ಅವರ ಕ್ರಿಕೆಟ್ ನೆರವಿಗೆ ನಿಲ್ಲುವುದು ಅವರ ಉದ್ದೇಶವಾಗಿತ್ತು. ಇಬ್ಬರನ್ನೂ “ಕಿರಣ್ ಮೋರೆ ಕ್ರಿಕೆಟ್ ಅಕಾಡೆಮಿ’ಗೆ ದಾಖಲಿಸಿ ಇವರ ಕ್ರಿಕೆಟ್ ಭವಿಷ್ಯಕ್ಕೆ ಭದ್ರ ಬುನಾದಿ ನಿರ್ಮಿಸುವಲ್ಲಿ ಹಿಮಾಂಶು ವಹಿಸಿದ ಪಾತ್ರ ಅಮೋಘವಾಗಿತ್ತು.
ಸುದ್ದಿ ತಿಳಿದೊಡನೆ ಕೃಣಾಲ್ ಪಾಂಡ್ಯ ಬರೋಡ ತಂಡದ ಜೈವಿಕಾ ಸುರಕ್ಷಾ ವಲಯದಿಂದ ಹೊರಬಂದರು.
ಹಿಮಾಂಶು ಪಾಂಡ್ಯ ನಿಧನಕ್ಕೆ ಕೊಹ್ಲಿ, ತೆಂಡುಲ್ಕರ್, ಬರೋಡ ಕ್ರಿಕೆಟ್ ಮಂಡಳಿಯ ಸಿಇಒ ಶಿಶಿರ್ ಹಟ್ಟಂಗಡಿ ಸಂತಾಪ ಸೂಚಿಸಿದ್ದಾರೆ.