ಹಾರ್ದಿಕ್‌, ಕುಲದೀಪ್‌ ಮಿಂಚು ಕ್ಲೀನ್‌ಸ್ವೀಪ್‌ನತ್ತ ಭಾರತ


Team Udayavani, Aug 14, 2017, 12:10 PM IST

14-SPORTS-2.jpg

ಪಲ್ಲೆಕಿಲೆ: ಹಾರ್ದಿಕ್‌ ಪಾಂಡ್ಯ ಅವರ ಚೊಚ್ಚಲ ಟೆಸ್ಟ್‌ ಶತಕ ಮತ್ತು ಚೈನಾಮನ್‌ ಕುಲದೀಪ್‌ ಯಾದವ್‌ ಅವರ ಮಾರಕ ದಾಳಿಯಿಂದಾಗಿ ಪ್ರವಾಸಿ ಭಾರತ ತಂಡವು ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್‌ಗೈಯುವುದನ್ನು ಖಚಿತಪಡಿಸಿದೆ. 

ಮೊದಲೆರಡು ಟೆಸ್ಟ್‌ ಗೆದ್ದು ಸರಣಿಯನ್ನು ಈಗಾಗಲೇ ತನ್ನದಾಗಿಸಿಕೊಂಡಿರುವ ಭಾರತವು ಪಲ್ಲೆಕಿಲೆಯಲ್ಲಿ ಸಾಗುತ್ತಿರುವ ಮೂರನೇ ಟೆಸ್ಟ್‌ನ ದ್ವಿತೀಯ ದಿನ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅದ್ಭುತ ನಿರ್ವಹಣೆ ನೀಡಿ ಲಂಕೆಗೆ ಬಲುದೊಡ್ಡ ಹೊಡೆತ ನೀಡಿದೆ. ದ್ವಿತೀಯ ದಿನ ಒಟ್ಟಾರೆ 15 ವಿಕೆಟ್‌ ಉರುಳಿವೆ. ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ಶತಕದಿಂದಾಗಿ ಭಾರತ 487 ರನ್ನಿಗೆ ಆಲೌಟಾಯಿತು. ಆಬಳಿಕ ಶಮಿ, ಕುಲದೀಪ್‌ ಮತ್ತು ಅಶ್ವಿ‌ನ್‌ ಅವರ ಮಾರಕ ದಾಳಿಗೆ ನೆಲಕಚ್ಚಿದ ಶ್ರೀಲಂಕಾ ಕೇವಲ 135 ರನ್ನಿಗೆ ಆಲೌಟ್‌ ಆಗಿ ಫಾಲೋ ಆನ್‌ ಪಡೆಯಿತು.  

352 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ ಭಾರತ ಶ್ರೀಲಂಕಾದ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಒಂದು ವಿಕೆಟ್‌ ಉರುಳಿಸಿದೆ. ದ್ವಿತೀಯ ದಿನದ ಆಟ ನಿಂತಾಗ ದಿಮುತ್‌ ಕರುಣರತ್ನೆ ಮತ್ತು ಮಲಿಂದ ಪುಷ್ಪಕುಮಾರ ಬ್ಯಾಟಿಂಗ್‌ ಮಾಡುತ್ತಿದ್ದರು. ಹಾಗಾಗಿ ಪಂದ್ಯದ ಮೂರನೇ ದಿನವಾದ ಸೋಮವಾರ ಭಾರತ ಮತ್ತೆ ಇನ್ನಿಂಗ್ಸ್‌ ಅಂತರದಿಂದ ಗೆಲ್ಲುವ ಸೂಚನೆ ನೀಡಿದೆ. ಇನ್ನು 9 ವಿಕೆಟ್‌ ಉರುಳಿಸಿದರೆ ಭಾರತ ಸರಣಿಯನ್ನು ಕ್ಲೀನ್‌ಸ್ವೀಪ್‌ಗೈಯಲಿದೆ.

ಹಾರ್ದಿಕ್‌ ಚೊಚ್ಚಲ ಶತಕ
ಹಾರ್ದಿಕ್‌ ಮತ್ತು ಕುಲದೀಪ್‌ ದ್ವಿತೀಯ ದಿನದ ಹೀರೋಗಳಾಗಿದ್ದಾರೆ. ಆರು ವಿಕೆಟಿಗೆ 329 ರನ್ನುಗಳಿಂದ ದಿನದಾಟ ಆರಂಭಿಸಿದ ಭಾರತ ಹಾರ್ದಿಕ್‌ ಅವರ ಶತಕದಿಂದಾಗಿ 487 ರನ್‌ ಗಳಿಸಿ ಆಲೌಟಾಯಿತು. ಕುಲ ದೀಪ್‌ ಯಾದವ್‌ ಜತೆ 8ನೇ ವಿಕೆಟಿಗೆ 62 ರನ್‌ ಪೇರಿಸಿದ್ದ ಹಾರ್ದಿಕ್‌ ಅಂತಿಮ ವಿಕೆಟಿಗೆ ಉಮೇಶ್‌ ಜತೆ ಮತ್ತೆ 66 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಚೊಚ್ಚಲ ಶತಕ ಸಿಡಿಸಿದರು. 96 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 7 ಸಿಕ್ಸರ್‌ ನೆರವಿನಿಂದ 108 ರನ್‌ ಹೊಡೆದರು. ಹಾರ್ದಿಕ್‌ ಅವರ ಸಾಹಸದ ಬ್ಯಾಟಿಂಗ್‌ನಿಂದಾಗಿ ಭಾರತದ ಮೊತ್ತ 400ರ ಗಡಿ ದಾಟುವಂತಾಯಿತು. ಈ ಮೂಲಕ ಭಾರತ ಶ್ರೀಲಂಕಾ ನೆಲದಲ್ಲಿ ಸತತ ಮೂರು ಟೆಸ್ಟ್‌ ಗಳಲ್ಲಿ 400 ಪ್ಲಸ್‌ ಮೊತ್ತ ಗಳಿಸಿದ ಮೊದಲ ತಂಡವೆಂಬ ಗೌರವಕ್ಕೆ ಪಾತ್ರವಾಯಿತು. ಕೇವಲ 61 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ್ದ ಹಾರ್ದಿಕ್‌ ಪುಷ್ಪಕುಮಾರ ಅವರ ಓವರೊಂದರಲ್ಲಿ 3 ಸಿಕ್ಸರ್‌ ಮತ್ತು 2 ಬೌಂಡರಿ ಸಹಿತ 26 ರನ್‌ ಸಿಡಿಸಿದರು. 

ಕುಲದೀಪ್‌ ಮಾರಕ
ಭಾರತದ ಬೃಹತ್‌ ಮೊತ್ತಕ್ಕೆ ಉತ್ತರ ವಾಗಿ ಬ್ಯಾಟಿಂಗ್‌ ಆರಂಭಿಸಿದ ಶ್ರೀಲಂಕಾಕ್ಕೆ ಮೊಹಮ್ಮದ್‌ ಶಮಿ ಆರಂಭದಲ್ಲಿಯೇ ಹೊಡೆತ ನೀಡಿದರು. ಶಮಿ ದಾಳಿಗೆ ಕುಸಿದ ಶ್ರೀಲಂಕಾ 23 ರನ್ನಿಗೆ ಆರಂಭಿಕರನ್ನು ಕಳೆದುಕೊಂಡಿತು. ಆಬಳಿಕ ಕುಸಲ್‌ ಮೆಂಡಿಸ್‌ ರನೌಟ್‌ ಆದರು. ನಾಯಕ ದಿನೇಶ್‌ ಚಂಡಿಮಾಲ್‌ ಅವರನ್ನು ಹೊರತುಪಡಿಸಿದರೆ ಉಳಿದವರ್ಯಾರೂ ಭಾರತ ದಾಳಿಯನ್ನು ನಿಭಾಯಿಸಲು ವಿಫ‌ಲರಾದರು. ಆರಂಭದಲ್ಲಿ ಶಮಿ ದಾಳಿಗೆ ಕುಸಿದ ಶ್ರೀಲಂಕಾ ಆಬಳಿಕ ಕುಲದೀಪ್‌ ಬೌಲಿಂಗ್‌ನಲ್ಲಿ ನೆಲಕಚ್ಚಿತು. ಇದ ರಿಂದಾಗಿ ಶ್ರೀಲಂಕಾ ಕೇವಲ 135 ರನ್ನಿಗೆ ಆಲೌಟಾಯಿತು. ಶಮಿ ಮತ್ತು ಅಶ್ವಿ‌ನ್‌ ತಲಾ ಎರಡು ವಿಕೆಟ್‌ ಪಡೆದರೆ ಕುಲದೀಪ್‌ 40 ರನ್ನಿಗೆ 4 ವಿಕೆಟ್‌ ಕಿತ್ತರು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌

ಮೊದಲ ದಿನ ಆರು ವಿಕೆಟಿಗೆ  329
ವೃದ್ಧಿಮಾನ್‌ ಸಾಹಾ    ಸಿ ಪೆರೆರ ಬಿ ಫೆರ್ನಾಂಡೊ    16
ಹಾರ್ದಿಕ್‌ ಪಾಂಡ್ಯ    ಸಿ ಪೆರೆರ ಬಿ ಸಂದಕನ್‌    108
ಕುಲದೀಪ್‌ ಯಾದವ್‌    ಸಿ ಡಿಕ್ವೆಲ್ಲ ಬಿ ಸಂದಕನ್‌    26
ಮೊಹಮ್ಮದ್‌ ಶಮಿ    ಸಿ ಮತ್ತು ಬಿ ಸಂದಕನ್‌    8
ಉಮೇಶ್‌ ಯಾದವ್‌    ಔಟಾಗದೆ    3

ಇತರ:        24
ಒಟ್ಟು (ಆಲೌಟ್‌)        487
ವಿಕೆಟ್‌ ಪತನ: 7-339, 8-401, 9-421

ಬೌಲಿಂಗ್‌:
ವಿಶ್ವ ಫೆರ್ನಾಂಡೊ        26-3-87-2
ಲಹಿರು ಕುಮಾರ        23-1-104-0
ದಿಮುತ್‌ ಕರುಣರತ್ನೆ        7-0-30-0
ದಿಲುವಾನ್‌ ಪೆರೆರ        8-1-36-0
ಲಕ್ಷಣ ಸಂದಕನ್‌        35.3-4-132-5
ಮಲಿಂದ ಪುಷ್ಪಕುಮಾರ        23-2-82-3

ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌
ದಿಮುತ್‌ ಕರುಣರತ್ನೆ    ಸಿ ಸಾಹಾ ಬಿ ಶಮಿ    4
ಉಪುಲ್‌ ತರಂಗ    ಸಿ ಸಾಹಾ ಬಿ ಶಮಿ    5
ಕುಸಲ್‌ ಮೆಂಡಿಸ್‌    ರನೌಟ್‌    18
ದಿನೇಶ್‌ ಚಂಡಿಮಾಲ್‌    ಸಿ ರಾಹುಲ್‌ ಬಿ ಅಶ್ವಿ‌ನ್‌    48
ಏಂಜೆಲೊ ಮ್ಯಾಥ್ಯೂಸ್‌    ಎಲ್‌ಬಿಡಬ್ಲ್ಯು ಬಿ ಪಾಂಡ್ಯ    0
ನಿರೋಷನ್‌ ಡಿಕ್ವೆಲ್ಲ    ಸ್ಟಂಪ್ಡ್ ಸಾಹಾ ಬಿ ಕುಲದೀಪ್‌    29
ದಿಲುವಾನ್‌ ಪೆರೆರ    ಸಿ ಪಾಂಡ್ಯ ಬಿ ಕುಲದೀಪ್‌    0
ಪುಷ್ಪಕುಮಾರ    ಬಿ ಕುಲದೀಪ್‌    10
ಲಕ್ಷಣ ಸಂದಕನ್‌    ಸಿ ಧವನ್‌ ಬಿ ಅಶ್ವಿ‌ನ್‌    10
ವಿಶ್ವ ಫೆರ್ನಾಂಡೊ    ಬಿ ಕುಲದೀಪ್‌    0
ಲಹಿರು ಕುಮಾರ    ಔಟಾಗದೆ    0

ಇತರ:        11
ಒಟ್ಟು (37.4 ಓವರ್‌ಗಳಲ್ಲಿ ಆಲೌಟ್‌)    135
ವಿಕೆಟ್‌ ಪತನ: 1-14, 2-23, 3-38, 4-38, 5-101, 6-107, 7-125, 8-125, 9-135

ಬೌಲಿಂಗ್‌:
ಮೊಹಮ್ಮದ್‌ ಶಮಿ        6.5-1-17-2
ಉಮೇಶ್‌ ಯಾದವ್‌        3.1-0-23-0
ಹಾರ್ದಿಕ್‌ ಪಾಂಡ್ಯ        6-1-28-1
ಕುಲದೀಪ್‌ ಯಾದವ್‌        13-2-40-4
ಆರ್‌. ಅಶ್ವಿ‌ನ್‌        8.4-2-22-2

ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌
ದಿಮುತ್‌ ಕರುಣರತ್ನೆ    ಬ್ಯಾಟಿಂಗ್‌    12
ಉಪುಲ್‌ ತರಂಗ    ಬಿ ಯಾದವ್‌    7
ಪುಷ್ಪಕುಮಾರ    ಬ್ಯಾಟಿಂಗ್‌    0

ಇತರ:        0
ಒಟ್ಟು (ಒಂದು ವಿಕೆಟಿಗೆ)    19
ವಿಕೆಟ್‌ ಪತನ: 1-15

ಬೌಲಿಂಗ್‌: 
ಮೊಹಮ್ಮದ್‌ ಶಮಿ        4-2-7-0
ಆರ್‌. ಅಶ್ವಿ‌ನ್‌        6-4-5-0
ಉಮೇಶ್‌ ಯಾದವ್‌        2-0-3-1
ಕುಲದೀಪ್‌ ಯಾದವ್‌        1-0-4-0

ಎಕ್ಸ್‌ಟ್ರಾ ಇನ್ನಿಂಗ್ಸ್‌
ಹಾರ್ದಿಕ್‌ ಪಾಂಡ್ಯ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಭಾರತದ ಐದನೇ ಆಟಗಾರ ರಾಗಿದ್ದಾರೆ. ಪಾಂಡ್ಯ ಅವರ ಈ ಹಿಂದಿನ ಶ್ರೇಷ್ಠ ನಿರ್ವಹಣೆ 90 ರನ್‌ ಆಗಿತ್ತು. ವಿಜಯ್‌ ಮಾಂಜ್ರೆಕರ್‌, ಕಪಿಲ್‌ ದೇವ್‌, ಅಜಯ್‌ ರಾತ್ರ ಮತ್ತು ಹರ್ಭಜನ್‌ ಸಿಂಗ್‌ ಈ ಹಿಂದೆ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಹೊಡೆದಿದ್ದರು. 

ದ್ವಿತೀಯ ದಿನದ ಮೊದಲ ಅವ ಧಿಯ ಆಟದಲ್ಲಿ ಹಾರ್ದಿಕ್‌ 107 ರನ್‌ ಗಳಿಸಿದ್ದರು. ಅವರು ಟೆಸ್ಟ್‌ನ ಯಾವುದೇ ದಿನ ಊಟದ ವಿರಾಮದ ಮೊದಲು 100 ಕ್ಕಿಂತ ಹೆಚ್ಚಿನ ರನ್‌ ಪೇರಿಸಿದ ಭಾರತದ ಮೊದಲ ಆಟಗಾರರಾಗಿದ್ದಾರೆ. 9 ವಿಕೆಟ್‌ ಉರುಳಿದ್ದ ಕಾರಣ ಮೊದಲ ಅವಧಿಯನ್ನು 30 ನಿಮಿಷದಷ್ಟು ವಿಸ್ತರಿಸಲಾಗಿತ್ತು.

ಮಲಿಂದ ಪುಷ್ಪಕುಮಾರ ಅವರ ಒಂದು ಓವರಿನಲ್ಲಿ ಹಾರ್ದಿಕ್‌ 2 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 26 ರನ್‌ ಸಿಡಿಸಿದ್ದಾರೆ. ಇದು ಟೆಸ್ಟ್‌ನಲ್ಲಿ ಓವರೊಂದರಲ್ಲಿ ಭಾರತೀಯ ಆಟ ಗಾರನೋರ್ವ ಬಾರಿಸಿದ ಗರಿಷ್ಠ ಮೊತ್ತ ವಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕೇವಲ ಮೂವರು ಆಟಗಾರರು (ಬ್ರ್ಯಾನ್‌ ಲಾರಾ-28, ಜಾರ್ಜ್‌ ಬೈಲಿ-28, ಅಫ್ರಿದಿ-29) ಹೊಡೆದಿದ್ದರು.

ಟೆಸ್ಟ್‌ನಲ್ಲಿ ಸತತ ಎಸೆತಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಸಿಕ್ಸರ್‌ಗಳನ್ನು ಹಾರ್ದಿಕ್‌ ಸಹಿತ ಭಾರತದ ಮೂವರು ಆಟಗಾರರು ಹೊಡೆದಿದ್ದಾರೆ. ಈ ಹಿಂದೆ 1990ರಲಲ್ಲಿ ಲಾರ್ಡ್ಸ್‌ನಲ್ಲಿ ಎಡ್ಡೀ ಹೆಮ್ಮಿಂಗ್ಸ್‌ ಅವರ ಬೌಲಿಂಗ್‌ನಲ್ಲಿ ಕಪಿಲ್‌ ದೇವ್‌ ಸತತ ನಾಲ್ಕು ಸಿಕ್ಸರ್‌ ಬಾರಿಸಿದ್ದರೆ 2006ರಲ್ಲಿ ಆಂಟಿಗಾದಲ್ಲಿ ಡೇವ್‌ ಮೊಹಮ್ಮದ್‌ ಅವರ ಬೌಲಿಂಗ್‌ನಲ್ಲಿ ಧೋನಿ ಸತತ ಮೂರು ಸಿಕ್ಸರ್‌ ಬಾರಿಸಿದ್ದರು. ಎಬಿ ಡಿ’ವಿಲಿಯರ್ ಮತ್ತು ಅಫ್ರಿದಿ ಟೆಸ್ಟ್‌ನಲ್ಲಿ ಸತತ ನಾಲ್ಕು ಸಿಕ್ಸರ್‌ ಬಾರಿಸಿದ ಇನ್ನಿಬ್ಬರು ಆಟಗಾರರಾಗಿದ್ದಾರೆ.

86 ಎಸೆತಗಳಲ್ಲಿ ಪಾಂಡ್ಯ ಶತಕ ಸಿಡಿಸಿರುವುದು ಎರಡನೇ ಅತೀವೇಗದ ಶತಕವಾಗಿದೆ. ಈ ಹಿಂದೆ 2006ರಲ್ಲಿ ಗ್ರಾಸ್‌ ಐಲೆಟ್‌ನಲ್ಲಿ ವೀರೇಂದ್ರ ಸೆಹವಾಗ್‌ 78 ಎಸೆತಗಳಲ್ಲಿ ಶತಕ ಸಿಡಿಸಿರುವುದು ದಾಖಲೆಯಾಗಿದೆ. ಪಾಂಡ್ಯ ಮೊದಲ  ಅರ್ಧಶತಕ ತಲುಪಲು 61 ಎಸೆತ ತೆಗೆದುಕೊಂಡಿದ್ದರೆ ಅನಂತರ ಕೇವಲ 25 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. 

ಪಾಂಡ್ಯ 7 ಸಿಕ್ಸರ್‌ ಬಾರಿಸಿರುವುದು ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಜಂಟಿ ಎರಡನೇ ಗರಿಷ್ಠ ಸಿಕ್ಸರ್‌ ಆಗಿದೆ. ನವಜೋತ್‌ ಸಿಂಗ್‌ ಸಿದ್ಧು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 8 ಸಿಕ್ಸರ್‌ ಬಾರಿಸಿದ್ದರು. ಸೆಹವಾಗ್‌ ಮತ್ತು ಹರ್ಭಜನ್‌ ಕೂಡ ಇನ್ನಿಂಗ್ಸ್‌ ಒಂದರಲ್ಲಿ 7 ಸಿಕ್ಸರ್‌ ಸಿಡಿಸಿದ್ದಾರೆ.

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.