Hardik Pandya: ಹಾಟ್ ಬೆಡಗಿ ಹಾರ್ದಿಕ್ ಪಾಂಡ್ಯ ಡೇಟಿಂಗ್? ವೆಕೇಷನ್ ಫೋಟೋಸ್ ವೈರಲ್
Team Udayavani, Aug 14, 2024, 12:34 PM IST
ನವದೆಹಲಿ: ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ನತಾಶಾ ಸ್ಟಾನ್ಕೊವಿಕ್ (Natasa Stankovic) ಅಧಿಕೃತವಾಗಿ ಪ್ರತ್ಯೇಕವಾಗಿದ್ದಾರೆ. ಇಬ್ಬರು ಮಗ ಆಗಸ್ತ್ಯನಿಗೆ ಸಹ ಪೋಷಕರಾಗಿ ಮುಂದುವರೆಯಲಿದ್ದಾರೆ.
ವಿಚ್ಚೇದನದ ಬಳಿಕ ನತಾಶ ಮಗನೊಂದಿಗೆ ಸರ್ಬಿಯಾಗೆ ತೆರಳಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯ ಒಂಟಿಯಾಗಿ ಉಳಿದಿದ್ದಾರೆ ಎನ್ನುವ ಮಾತಿನ ನಡುವೆಯೇ ಇದೀಗ ಅವರು ಯುವತಿಯೊಬ್ಬಳ ಕಾಣಿಸಿಕೊಂಡಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ.
ಹಾರ್ದಿಕ್ ಹಾಲಿಡೇ ಮೂಡ್‌ನಲ್ಲಿದ್ದು ಗ್ರೀಸ್ ಗೆ ತೆರಳಿದ್ದಾರೆ. ಅಲ್ಲಿ ಮೋಜು ಮಸ್ತಿ ಮಾಡುತ್ತಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾರ್ದಿಕ್ ಕಾಣಿಸಿಕೊಂಡಿರುವ ಸ್ವಿಮ್ಮಿಂಗ್ ಪೂಲ್‌ನಲ್ಲೇ ಬ್ರಿಟಿಷ್ ಗಾಯಕಿ ಮತ್ತು ಕಿರುತೆರೆ ನಟಿ ಜಾಸ್ಮಿನ್ ವಾಲಿಯಾ (Jasmin Walia) ಅವರು ಕಾಣಿಸಿಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹಾರ್ದಿಕ್ ಹಾಗೂ ಜಾಸ್ಮಿನ್ ಇಬ್ಬರು ಜತೆಯಾಗಿಯೇ ಗ್ರೀಸ್‌ಗೆ ತೆರಳಿದ್ದಾರೆ. ಇಬ್ಬರು ಡೇಟಿಂಗ್‌ನಲ್ಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ.
ಜಾಸ್ಮಿನ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿಕಿಸಿ ಧರಿಸಿ ಕೂತಿದ್ದು, ಆ ಫೋಟೋಗಳನ್ನು ಕೆಲ ದಿನಗಳ ಹಿಂದಷ್ಟೇ ಹಂಚಿಕೊಂಡಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯ ಗ್ರೀಸ್ ವೆಕೇಷನ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಜಾಸ್ಮಿನ್ ಇದ್ದ ಸ್ವಿಮ್ಮಿಂಗ್ ಪೂಲ್ ನಲ್ಲೇ ಹಾರ್ದಿಕ್ ನಿಂತು ಫೋಟೋ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇಬ್ಬರು ಡೇಟಿಂಗ್ ನಲ್ಲಿದ್ದಾರೆ ಎನ್ನುವ ಮಾತಿನ ನಡುವೆಯೋ ಹಾರ್ದಿಕ್ ಹಂಚಿಕೊಂಡಿರುವ ಈ ಫೋಟೋಗೆ ಜಾಸ್ಮಿನ್ ಮೆಚ್ಚುಗೆ ಕೊಟ್ಟಿದ್ದು, ಹಾರ್ದಿಕ್ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡುತ್ತಿದ್ದಾರೆ. ಡೇಟಿಂಗ್ ವಿಚಾರ ಮತ್ತಷ್ಟು ಚರ್ಚೆ ಆಗುವಂತೆ ಮಾಡಿದೆ.
ಜಾಸ್ಮಿನ್ ಯಾರು?: ಜಾಸ್ಮಿನ್ ವಾಲಿಯಾ ಬ್ರಿಟಿಷ್ ಗಾಯಕಿ ಹಾಗೂ ಟಿವಿ ಫೇಮ್ ಫೇಸ್ ಆಗಿದ್ದು, ಇಂಗ್ಲೆಂಡಿನ ಎಸೆಕ್ಸ್‌ನಲ್ಲಿ ಜನಿಸಿದ್ದು ಇವರ ಪೋಷಕರು ಭಾರತೀಯ ಮೂಲವದರಾಗಿದ್ದಾರೆ. ಜಾಸ್ಮಿನ್ ಮೊದಲು ಬ್ರಿಟಿಷ್ ರಿಯಾಲಿಟಿ ಟಿವಿ ಸರಣಿ ‘ದಿ ಓನ್ಲಿ ವೇ ಈಸ್ ಎಸೆಕ್ಸ್ (ಟೋವಿ)’ ನಲ್ಲಿ ಕಾಣಿಸಿಕೊಂಡಿದ್ದರು. 2014 ರಲ್ಲಿ ತನ್ನ ಯೂಟ್ಯೂಬ್ ಚಾನಲ್ ನ್ನು ಪ್ರಾರಂಭಿಸಿದರು. ಅಲ್ಲಿ ಜನಪ್ರಿಯ ಹಾಡುಗಳ ಕವರ್‌ಗಳ ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಝಾಕ್ ನೈಟ್, ಇಂಟೆನ್ಸ್-ಟಿ, ಮತ್ತು ಒಲ್ಲಿ ಗ್ರೀನ್ ಮ್ಯೂಸಿಕ್‌ನಂತಹ ಕಲಾವಿದರೊಂದಿಗೆ ಕಾಣಿಸಿಕೊಂಡಿದ್ದಾರೆ.
View this post on Instagram
2017ರಲ್ಲಿ ಬಂದ ಝಾಕ್ ನೈಟ್ ಅವರ “ಬಾಮ್ ಡಿಗ್ಗಿ” ಹಾಡಿನಲ್ಲಿ ಕಾಣಿಸಿಕೊಂಡ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. 2022ರಲ್ಲಿ ಬಂದ ಮ್ಯೂಸಿಕ್ ವಿಡಿಯೋ “ನೈಟ್ಸ್ ಎನ್ ಫೈಟ್ಸ್” ನಲ್ಲಿ ಬಿಗ್ ಬಾಸ್ 13ರ ಫೈನಲಿಸ್ಟ್ ಆಸಿಮ್ ರಿಯಾಜ್ ಅವರೊಂದಿಗೆ ಅವರು ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Duleep Trophy 2024; ಮೂರು ತಂಡಗಳಲ್ಲಿ ಹಲವು ಬದಲಾವಣೆ: ಮಯಾಂಕ್ ಗೆ ನಾಯಕತ್ವ
NZvsAFG: ಇನ್ನೆಂದೂ ಇಲ್ಲಿ ಬರುವುದಿಲ್ಲ..: ಭಾರತದ ಮೈದಾನದ ಬಗ್ಗೆ ಕಿಡಿಕಾರಿದ ಅಫ್ಘಾನಿಸ್ತಾನ
Pro Kabaddi ಅ.18-ಡಿ.24 ರ ವರೆಗೆ:ಹೈದರಾಬಾದ್,ನೋಯ್ಡಾ, ಪುಣೆಯಲ್ಲಿ ಪಂದ್ಯಗಳು
US Open;ಅಮೆರಿಕದ ಟೇಲರ್ ಫ್ರಿಟ್ಜ್ ಗೆ ಸೋಲು:ಸಿನ್ನರ್ ಯುಎಸ್ ಚಾಂಪಿಯನ್
3rd Test: ಶ್ರೀಲಂಕಾಕ್ಕೆ 8 ವಿಕೆಟ್ ಜಯ: ಇಂಗ್ಲೆಂಡಿಗೆ 2-1 ಟೆಸ್ಟ್ ಸರಣಿ
MUST WATCH
ಹೊಸ ಸೇರ್ಪಡೆ
Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !
Hubballi: ಕರ್ತವ್ಯದಲ್ಲಿದ್ದ ಎಎಸ್‌ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್; ತೀವ್ರ ಗಾಯ
Kottigehara: ಭಕ್ತಿಗೆ ಬಡತನವಿಲ್ಲವೆಂದು ತೋರಿಸಿಕೊಟ್ಟ ಬಾಲಕ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ
Davanagere; ಎಸ್.ಪಿ ಕಾರಿನ ಮೇಲೆ ಕಲ್ಲೆಸೆದ ಮಾನಸಿಕ ಅಸ್ವಸ್ಥ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.