ವೈರಲ್ ಆಯ್ತು ಹಾರ್ದಿಕ್ ಪಾಂಡ್ಯ ಜಿಮ್ ವಿಡಿಯೋ

Team Udayavani, Nov 18, 2019, 2:18 PM IST

ಮುಂಬೈ: ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ  ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಸಮರಾಭ್ಯಸಕ್ಕೆ ತೊಡಗಿದ್ದಾರೆ. ಮುಂಬೈನ ತಾರಾ ಆಟಗಾರ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಹಾರ್ದಿಕ್ ಪಾಂಡ್ಯ ಅವರ ಜಿಮ್ ಟ್ರೈನರ್ ಆಗಿರುವ ಯಾಸ್ಮಿನ್ ಕರಾಚಿವಾಲ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾರ್ದಿಕ್ ಪಾಂಡ್ಯರ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದಾರೆ.

ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯಾಗಿ ಆರು ತಿಂಗಳ ಮೊದಲೇ ಹಾರ್ದಿಕ್ ಕಠಿಣ ಪರಿಶ್ರಮ ಮಾಡುತ್ತಿದ್ದಾರೆ. ಬೆನ್ನು ಮೂಳೆ ಗಟ್ಟಿಯಾಗಲು ಮತ್ತು ಆದಷ್ಟು ಬೇಗ ತಂಡ ಸೇರಲು ಪಾಂಡ್ಯ ಕಠಿಣ ಪರಿಶ್ರಮ ಮಾಡುತ್ತಿದ್ದಾರೆ ಎಂದು ಯಾಸ್ಮಿನ್ ಬರೆದುಕೊಂಡಿದ್ದಾರೆ.

ಕಳೆದ ವಿಶ್ವಕಪ್ ನಂತರ ಹಾರ್ದಿಕ್ ಯಾವುದೇ ಪಂದ್ಯವಾಡಿಲ್ಲ. ಬೆನ್ನು ನೋವಿಗೆ ಒಳಗಾಗಿದ್ದ ಹಾರ್ದಿಕ್ ಲಂಡನ್ ನಲ್ಲಿ ಚಿಕಿತ್ಸೆ ಪಡೆದಿದ್ದರು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ