ವನಿತಾ ಟಿ20: ಹರ್ಮನ್ ಪ್ರೀತ್ ಬೊಂಬಾಟ್ ಬ್ಯಾಟಿಂಗ್ ಗೆ ಒಲಿದ ಜಯ
Team Udayavani, Jan 31, 2020, 2:40 PM IST
ಕ್ಯಾನ್ ಬೆರಾ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವನಿತಾ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ಮನುಕಾ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ನಾಯಕಿ ಹೀಥರ್ ನೈಟ್ 67 ರನ್ ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಭಾರತ 27 ರನ್ ಗಳಿಸಿದ್ದ ವೇಳೆ ಸ್ಮೃತಿ ಮಂಧನಾ ವಿಕೆಟ್ ಕಳೆದುಕೊಂಡಿತು. ಶಿಫಾಲಿ ವರ್ಮಾ 30 ರನ್ ಗಳಿಸಿದರೆ, ಜೆಮಿಮಾ ರೋಡ್ರಿಗಸ್ 26 ರನ್ ಗಳಿಸಿದರು. ಕೊನೆಯಲ್ಲಿ ಮಿಂಚಿದ ಹರ್ಮನ್ ಪ್ರೀತ್ ಕೌರ್ 42 ರನ್ ಗಳಿಸಿದರು. ಭಾರತ ಐದು ವಿಕೆಟ್ ಕಳೆದುಕೊಂಡು 19.3 ಓವರ್ ನಲ್ಲಿ ಗುರಿ ಮುಟ್ಟಿತು.
ತ್ರಿಕೋನ ಸರಣಿಯಲ್ಲಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವನಿತಾ ತಂಡಗಳು ಸೆಣಸಾಡಲಿವೆ. ಭಾರತ ಮುಂದಿನ ಪಂದ್ಯವನ್ನು ಆಸೀಸ್ ವಿರುದ್ಧ ರವಿವಾರ ನಡೆಯಲಿದೆ.