ಅಭ್ಯಾಸ ವೇಳೆ ಹೃದಯಾಘಾತ: ತ್ರಿಪುರ ಕ್ರಿಕೆಟಿಗ ಮಿಥುನ್‌ ನಿಧನ

Team Udayavani, Dec 5, 2019, 11:04 PM IST

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ತ್ರಿಪುರದ ಅಂಡರ್‌-23 ತಂಡದ ಪ್ರಮುಖ ಆಟಗಾರ ಮಿಥುನ್‌ ದೇಬ್‌ಬರ್ಮ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಹಠಾತ್‌ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

ಈ ಘಟನೆ ಬುಧವಾರ ನಡೆದಿದೆ. ತ್ರಿಪುರ ಎಂಬಿಬಿ ಕ್ರೀಡಾಂಗಣದಲ್ಲಿ ಅಂಡರ್‌-23 ತಂಡದ 25 ಮಂದಿ ಆಟಗಾರರು ಎಂದಿನಂತೆ ಅಭ್ಯಾಸ ನಡೆಸಲು ಆಗಮಿಸಿದ್ದರು. ಅಭ್ಯಾಸಕ್ಕೂ ಮೊದಲು 10 ನಿಮಿಷ ಫಿಟ್‌ನೆಸ್‌ ತರಬೇತಿ ನಡೆಸಲಾಯಿತು. ಇದರಲ್ಲಿ ಮಿಥುನ್‌ ಕೂಡ ಭಾಗಿಯಾಗಿದ್ದರು. ಈ ಸಮಯದಲ್ಲಿ ಮಿಥುನ್‌ ನೀರು ಕುಡಿಯುತ್ತಿದ್ದಾಗ ಹಠಾತ್‌ ಕುಸಿದು ಬಿದ್ದರು. ಕೂಡಲೇ ಸಹ ಆಟಗಾರರು ಅವರನ್ನು ಹತ್ತಿರದ ಐಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಗಲೇ ಅವರು ಕೊನೆಯುಸಿರು ಎಳೆದಾಗಿತ್ತು.

ಮಿಥುನ್‌ 2013-14ರಲ್ಲಿ ಅಂಡರ್‌-19 ಕ್ರಿಕೆಟ್‌ ಮೂಲಕ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಸಿಕೆ ನಾಯ್ಡು ಟ್ರೋಫಿ ಕ್ರಿಕೆಟ್‌ ಕೂಟದಲ್ಲೂ ಆಡಿದ್ದರು.

ಅಗಲಿದ ಕ್ರಿಕೆಟಿಗನ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುತ್ತೇವೆ ಎಂದು ತ್ರಿಪುರ ಕ್ರೀಡಾ ಸಚಿವ ಮನೋಜ್‌ ಕಾಂತಿದೇಬ್‌ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ