ಯುನೆಸೆಫ್ ಗೆ ಆ್ಯತ್ಲೀಟ್ ಹಿಮಾ ದಾಸ್ ರಾಯಭಾರಿ
Team Udayavani, Nov 16, 2018, 6:00 AM IST
ಹೊಸದಿಲ್ಲಿ: ಯುನೆಸೆಫ್ ಗೆ (ವಿಶ್ವ ಸಂಸ್ಥೆಯ ಮಕ್ಕಳ ನಿಧಿ-ಭಾರತ) ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಆ್ಯತ್ಲಿಟ್ ಹಿಮಾ ದಾಸ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಮಕ್ಕಳ ದಿನಾಚರಣೆಯಂದು ಈ ವಿಷಯವನ್ನು ಘೋಷಿಸಲಾಗಿದೆ.
ಹಿಮಾ ದಾಸ್ ಯುನೆಸೆಫ್ ಭಾರತದ ರಾಯಭಾರಿಯಾಗಿ ಆಯ್ಕೆಯಾದ ದೇಶದ ಮೊದಲ ಯೂತ್ ರಾಯಭಾರಿ ಎನ್ನುವುದು ವಿಶೇಷ. “ನನ್ನಂತೆ ಕನಸು ಕಾಣುವ ದೇಶದ ಮಕ್ಕಳಿಗೆ ನಾನು ಸ್ಫೂರ್ತಿಯಾಗುತ್ತಿರುವುದು ಸಂತಸದ ವಿಷಯ’ ಎಂದು ಹಿಮಾ ದಾಸ್ ಪ್ರತಿಕ್ರಿಯಿಸಿದ್ದಾರೆ.