ಹಾಕಿ: ಕೊರಿಯಾ ವಿರುದ್ಧ ಕೊನೆ ಕ್ಷಣದಲ್ಲಿ ಭಾರತಕ್ಕೆ ಕೈತಪ್ಪಿದ ಜಯ

ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ

Team Udayavani, Mar 25, 2019, 6:21 AM IST

84

ಇಫೋ (ಮಲೇಶ್ಯ): ಕೊನೆಯ ಕ್ಷಣದಲ್ಲಿ ಭಾರತ ರಕ್ಷಣಾ ಆಟಗಾರರು ಮಾಡಿದ ಎಡವಟ್ಟಿನಿಂದ “ಸುಲ್ತಾನ್‌ ಅಜ್ಲಾನ್‌ ಶಾ’ ಕೂಟದ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯ 1-1 ಗೋಲುಗಳಿಂದ ಡ್ರಾ ಆಗಿದೆ.

ಮನ್‌ದೀಪ್‌ ಸಿಂಗ್‌ ಅವರ ಗೋಲಿನ ನೆರವಿನಿಂದ 28ನೇ ನಿಮಿಷ ದಲ್ಲಿ ಮುನ್ನಡೆ ಪಡೆದ ಭಾರತ ಸತತ 2ನೇ ಗೆಲುವಿನ ನಿರೀಕ್ಷೆ ಹುಟ್ಟಿಸಿತ್ತು. ಆದರೆ ರಕ್ಷಣಾ ಪಡೆ ಮಾಡಿದ ಸಣ್ಣ ತಪ್ಪು ಕೊನೆಯ 22 ಸೆಕೆಂಡ್‌ಗಳ ಆಟದ ವೇಳೆ ಕೊರಿಯಾಗೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಜಂಗ್‌ಹ್ಯುನ್‌ ಜಾಂಗ್‌ ಗೋಲು ಬಾರಿಸಿ ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಯಶಸ್ವಿಯಾದರು.

ಮಿಡ್‌ಫಿàಲ್ಡರ್‌ ವಿವೇಕ್‌ ಸಾಗರ್‌ ಪ್ರಸಾದ್‌ ಪಂದ್ಯದ ಮೊದಲ ನಿಮಿಷದಲ್ಲೇ ಸ್ಟ್ರೈಕಿಂಗ್‌ ವೃತ್ತದಲ್ಲಿ ಅವ ಕಾಶ ಕಲ್ಪಿಸಿ ಭಾರತಕ್ಕೆ ಆಕ್ರಮಣಕಾರಿ ಆರಂಭ ನೀಡಿದರು. ಆದರೆ ಕೊರಿಯಾ ಡಿಫೆಂಡರ್‌ಗಳು ಭಾರತದ ಆಕ್ರಮಣಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾದರು. ಪ್ರತಿದಾಳಿಗೆ ಇಳಿದ ಕೊರಿಯಾ ಭಾರತದ ವೃತ್ತದೊಳಗೆ ನುಗ್ಗಿ ಬಂದರೂ ಡಿಫೆಂಡರ್‌ ಸುರೇಂದರ್‌ ಕುಮಾರ್‌ ಇದಕ್ಕೆ ತಕ್ಕ ಉತ್ತರ ನೀಡಿದರು. ಇದಾದ ಬಳಿಕ ಮತ್ತೆರಡು ಅವಕಾಶ ಭಾರತಕ್ಕೆ ಲಭ್ಯವಾದರೂ ಗೋಲು ಬಾರಿಸುವಲ್ಲಿ ಭಾರತ ಎಡವಿತು.
ಗೋಲಿನ ಹುಡುಕಾಟದಲ್ಲಿದ್ದ ಭಾರತಕ್ಕೆ 10ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಕೈತಪ್ಪಿತು. ಇನ್ನೊಂದು ಪೆನಾಲ್ಟಿ ಅವಕಾಶ ಪಡೆದುಕೊಂಡ ಭಾರತದ ಆಟಕ್ಕೆ ಕೊರಿಯಾದ ಗೋಲ್‌ಕೀಪರ್‌ ಬ್ರೇಕ್‌ ಹಾಕಿದರು.

ಆರಂಭದಿಂದಲೂ ಎರಡು ತಂಡಗಳೂ ತಂತ್ರಗಾರಿಕೆಯ ಆಟ ವಾಡಿದರೂ ಕೊರಿಯಾದ 3 ಆಟಗಾರರು ಗ್ರೀನ್‌ ಕಾರ್ಡ್‌ ಪಡೆದ ಕಾರಣ ತಂಡ 8 ಆಟಗಾರರೊಂದಿಗೆ ಹೋರಾಟ ನಡೆಸಬೇಕಾಯಿತು. ಇದರಿಂದ ಭಾರತ ಸುಲಭವಾಗಿ ಕೊರಿಯಾದ ವೃತ್ತದೊಳಗೆ ನುಗ್ಗಿತು. ಅನುಭವಿ ಆಟಗಾರ ಮನ್‌ದೀಪ್‌ ಗೋಲಿನ ಖಾತೆ ತೆರೆದರು (28ನೇ ನಿಮಿಷ). ಬಳಿಕ ಭಾರತ ರಕ್ಷಣಾತ್ಮಕ ಆಟವಾಡಿ ಮುನ್ನಡೆ ಕಾಯ್ದುಕೊಳ್ಳತೊಡಗಿತು.

ಆಟಕ್ಕೆ ಅಡ್ಡಿಯಾದ ಮಳೆರಾಯ
3ನೇ ಕ್ವಾರ್ಟರ್‌ ಆರಂಭದಲ್ಲೇ ಮಳೆ ಸುರಿಯಲಾರಂಭಿಸಿತು. ಮಳೆಯಲ್ಲೇ ಆಟ ಮುಂದುರಿಸಿದಾಗ ಭಾರತದ ರಕ್ಷಣಾ ಪಡೆಯ ತಪ್ಪಿನಿಂದ ಕೊರಿಯಾಕ್ಕೆ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ದೊರಕಿತು. ಆದರೆ ಅಮಿತ್‌ ರೋಹಿದಾತ್‌ ಉತ್ತಮ ಆಟವಾಡಿ ಕೊರಿಯಾ ಆಟಗಾರರನ್ನು ತಡೆದರು.

ಪಂದ್ಯ ಕೊನೆಯಾಗಲು ಇನ್ನೇನು 8 ನಿಮಿಷಗಳಿರುವಾಗ ಮಳೆಯ ಆಟ ಜೋರಾದ ಕಾರಣ ಆಟವನ್ನು ಸ್ಥಗಿತಗೊಳಿಸಲಾಯಿತು. ಮಳೆ ನಿಂತ ಬಳಿಕ ಆರಂಭದ ಆಟದಲ್ಲಿ ಕೊರಿಯಾ ಆಕ್ರಮಣ ಆಟಕ್ಕಿಳಿದು ಒಂದರ ಹಿಂದೆ ಒಂದರಂತೆ ಪೆನಾಲ್ಟಿ ಅವಕಾಶ ಸೃಷ್ಟಿಸಿಕೊಂಡಿತು. ಆದರೆ ಇದಕ್ಕೆ ಭಾರತೀಯರು ತಡೆಯಾಗಿ ನಿಂತರು.
ಆಟದ ಮುಕ್ತಾಯಕ್ಕೆ 53 ಸೆಕೆಂಡ್‌ ಉಳಿದಿರುವಾಗ ಕೊರಿಯಾ ಪೆನಾಲ್ಟಿ ಪಡೆದರೂ ಗೋಲ್‌ಕೀಪರ್‌ ಶ್ರೀಜೇಶ್‌ ಅದ್ಭುತವಾಗಿ ತಡೆದರು. ಕೊರಿಯಾ ಮಾಡಿದ ರೆಫೆರಲ್‌ ಯಶಸ್ವಿಯಾದ ಕಾರಣ ತಂಡಕ್ಕೆ ಮತ್ತೂಂದು ಪೆನಾಲ್ಟಿ ದೊರಕಿತು. ಈ ಅವಕಾಶವನ್ನು ಕೈಚೆಲ್ಲಲು ಬಿಡದ ಜಂಗ್‌ಹ್ಯುನ್‌ ಜಾಂಗ್‌ ಗೋಲು ಬಾರಿಸಿ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿದರು.  ಮಾ. 26ರಂದು ನಡೆಯುವ 3ನೇ ಪಂದ್ಯದಲ್ಲಿ ಭಾರತ ಆತಿಥೇಯ ಮಲೇಶ್ಯವನ್ನು ಎದುರಿಸಲಿದೆ.

ಕೆನಡಾ, ಮಲೇಶ್ಯ  ತಂಡಗಳಿಗೆ ಗೆಲುವು
ದಿನದ ಉಳಿದ ಪಂದ್ಯಗಳಲ್ಲಿ ಕೆನಡಾ ಹಾಗೂ ಆತಿಥೇಯ ಮಲೇಶ್ಯ ತಂಡಗಳು ಜಯ ಸಾಧಿಸಿವೆ.

ದಿನದ ದ್ವಿತೀಯ ಪಂದ್ಯದಲ್ಲಿ ಪೋಲೆಂಡ್‌ ಮೇಲೆ ಸವಾರಿ ಮಾಡಿದ ಕೆನಡಾ 4-0 ಅಂತರದ ಭರ್ಜರಿ ಗೆಲುವು ಒಲಿಸಿಕೊಂಡಿತು. 3ನೇ ಪಂದ್ಯದಲ್ಲಿ ಮಲೇಶ್ಯ ಭಾರೀ ಹೋರಾಟದ ಬಳಿಕ ಏಶ್ಯಾಡ್‌ ಚಾಂಪಿಯನ್‌ ಜಪಾನ್‌ ತಂಡವನ್ನು 4-3 ಗೋಲುಗಳ ಅಂತರದಿಂದ ಕೆಡವಿತು. ಇದು ಜಪಾನ್‌ಗೆ ಎದುರಾದ ಸತತ ಎರಡನೇ ಸೋಲು. ಶನಿವಾರದ ಪಂದ್ಯದಲ್ಲಿ ಅದು ಭಾರತಕ್ಕೆ ಶರಣಾಗಿತ್ತು.

ಟಾಪ್ ನ್ಯೂಸ್

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

congress

ಗೃಹಸಚಿವರ ತವರಿನಲ್ಲಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು!

ದೀಪಾವಳಿ; ನವೆಂಬರ್ 30ರವರೆಗೆ ಕೋವಿಡ್ 19 ನಿರ್ಬಂಧ ವಿಸ್ತರಿಸಿದ ಕೇಂದ್ರ ಸರ್ಕಾರ

ದೀಪಾವಳಿ; ನವೆಂಬರ್ 30ರವರೆಗೆ ಕೋವಿಡ್ 19 ನಿರ್ಬಂಧ ವಿಸ್ತರಿಸಿದ ಕೇಂದ್ರ ಸರ್ಕಾರ

mamata

ಗೋವಾದಲ್ಲಿ ಮಮತಾ ಬ್ಯಾನರ್ಜಿ ಚಿತ್ರಗಳಿದ್ದ ಬ್ಯಾನರ್ ಗಳ ವಿರೂಪ : ಟಿಎಂಸಿ ಕಿಡಿ

tiger swimming

2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

quinton de kock

‘ಜನಾಂಗೀಯವಾದಿಯಲ್ಲ’: ಕ್ಷಮೆ ಕೇಳಿದ ಕ್ವಿಂಟನ್ ಡಿ ಕಾಕ್, ಪ್ರಕರಣ ಸುಖಾಂತ್ಯ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

MUST WATCH

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

ಹೊಸ ಸೇರ್ಪಡೆ

davanagere news

ರೈತರು-ವರ್ತಕರಿಗೆ ವಂಚನೆ: 2.68 ಕೋಟಿ ವಶ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

chitradurga news

ಮನ-ಮನೆಯಲ್ಲಿ ಕನ್ನಡ ನೆಲೆಸಲಿ: ಬಸವರಾಜ್‌

ಶೀಘ್ರ ಎಲ್ಲ ವಾರ್ಡ್‌ಗಳಿಗೆ ನಿರಂತರ ನೀರು; ಅನಿಲ ಬೆನಕೆ

ಶೀಘ್ರ ಎಲ್ಲ ವಾರ್ಡ್‌ಗಳಿಗೆ ನಿರಂತರ ನೀರು; ಅನಿಲ ಬೆನಕೆ

State-level variety award

30 ರಿಂದ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ವಿತರಣೆ: ಶೆಣೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.