ಹಾಕಿ ಪ್ರೊ ಲೀಗ್ : ಭಾರತಕ್ಕೆ ಮನ್ ಪ್ರೀತ್ ಸಿಂಗ್ ಸಾರಥ್ಯ
Team Udayavani, Feb 4, 2020, 4:22 PM IST
ನವದೆಹಲಿ: ಭುವನೇಶ್ವರದಲ್ಲಿ ಫೆ. 8 ಮತ್ತು 9ರಂದು ನಡೆಯುವ ಎಫ್ಐಎಚ್ ಹಾಕಿ ಪ್ರೊ ಲೀಗ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮನ್ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಹರ್ಮನ್ಪ್ರೀತ್ ಸಿಂಗ್ ಉಪನಾಯಕರಾಗಿದ್ದಾರೆ.
ಭಾರತ ವಿಶ್ವದ ನಂ. 1 ಬೆಲ್ಜಿಯಂ ವಿರುದ್ಧ ಸೆಣಸಲಿದೆ. ಇದಕ್ಕಾಗಿ 24 ಸದಸ್ಯರ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ರಾಜ್ ಕುಮಾರ್ ಪಾಲ್ ಒಬ್ಬರೇ ಹೊಸ ಮುಖವಾಗಿದ್ದಾರೆ. ಮಲೇಶ್ಯದಲ್ಲಿ ನಡೆದ ಸುಲ್ತಾನ್ ಆಫ್ ಜೋಹರ್ ಕಪ್ನಲ್ಲಿ ಬೆಳ್ಳಿ ಪದಕ ವಿಜೇತ ಇಂಡಿಯಾ ಕೋಲ್ಟ್ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದ ರಾಜ್ಕುಮಾರ್ ಪಾಲ್ ಉತ್ತಮ ಪ್ರದರ್ಶನ ತೋರಿದ ಕಾರಣ ಸೀನಿಯರ್ ತಂಡಕ್ಕೆ ಕರೆ ಪಡೆದರು.
ಟೋಕೊಯೋ ಒಲಿಂಪಿಕ್ಸ್ಗೆ ತಂಡದ ಪೂರ್ವ ತಯಾರಿ ನಿಟ್ಟಿನಲ್ಲಿ ಈ ಕೂಟ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಆಯ್ಕೆ ಪ್ರಕ್ರಿಯೆ ಪಟ್ಟಿಯಲ್ಲಿ ಗುರುತಿಸಿಕೊಳ್ಳಲಾಗುವುದು’ ಎಂದು ಮುಖ್ಯ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.