ಹಾಕಿ ವಿಶ್ವಕಪ್: ಪಂದ್ಯಗಳನ್ನು ಫಿಕ್ಸ್ ಮಾಡಿತ್ತೇ ಬೆಲ್ಜಿಯಂ?
Team Udayavani, Jan 17, 2019, 12:30 AM IST
ಹೊಸದಿಲ್ಲಿ: ಡಿಸೆಂಬರ್ನಲ್ಲಿ ಮುಕ್ತಾಯಗೊಂಡ ಹಾಕಿ ವಿಶ್ವಕಪ್ ಪ್ರಶಸ್ತಿ ಜಯಿಸಿದ ಬೆಲ್ಜಿಯಂ ತಂಡ ಸದ್ಯ ಬೆಟ್ಟಿಂಗ್ ವಿವಾದದಲ್ಲಿ ಸಿಲುಕಿಕೊಂಡಿದೆ.
ಬೆಲ್ಜಿಯಂ ತಂಡ ಆಡಿರುವ 20 ಪಂದ್ಯಗಳಲ್ಲಿ ತಂಡದ ಆಟಗಾರರು ಹಾಗೂ ಸದಸ್ಯರನ್ನು ಬೆಟ್ಟಿಂಗ್ ನಡೆಸುವ ವ್ಯಕ್ತಿಗಳು ಸಂಪರ್ಕಿಸಿದ್ದಾರೆ ಎಂದು ಬೆಲ್ಜಿಯಂನ ಸುದ್ದಿವಾಹಿನಿಯೊಂದು ಪ್ರಕಟಿಸಿದೆ. ಈ ಮಾಹಿತಿಯಂತೆ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್) ತನಿಖೆ ಆರಂಭಿಸಿದೆ.
ಈ ಕುರಿತಂತೆ ಬೆಲ್ಜಿಯಂ ತಂಡದ ನಾಯಕ ಥಾಮಸ್ ಬ್ರಿಲೇಸ್ ಹಾಗೂ ಬೆಲ್ಜಿಯಂ ಹಾಕಿ ಅಸೋಸಿಯೇಶನ್ನ ಮಾರ್ಕೆಟಿಂಗ್ ಹಾಗೂ ಸಂವಹನ ನಿರ್ದೇಶಕ ಡೆವಿನ್ ವಾನ್ ಡ್ಯಾಮ್ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
“ವಾಹಿನಿಯಲ್ಲಿ ಬಂದ ಸುದ್ದಿಯಂತೆ ಬೆಲ್ಜಿಯಂ ಹಾಕಿ ಅಸೋಸಿಯೇಶನ್ ಅನ್ನು ಸಂಪರ್ಕಿಸಲಾಗಿದ್ದು, ಈ ವಿಷಯವನ್ನು ಸಂಪೂರ್ಣ ಸಹಕಾರ ಹಾಗೂ ಪಾರದರ್ಶಕತೆಯಿಂದ ಇತ್ಯರ್ಥ ಮಾಡುತ್ತೇವೆ ಎಂಬ ನಂಬಿಕೆ ಇದೆ’ ಎಂದು ಎಫ್ಐಎಚ್ನ ಹಿರಿಯ ಸಂವಹನ ವ್ಯವಸ್ಥಾಪಕ ನಿಕೋಲಸ್ ಮಾಯಿಂಗ್ಟ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ