ಇಂಗ್ಲೆಂಡಿಗೆ ಗೆಲವು ನಿರಾಕರಿಸಿದ ಚೀನ
Team Udayavani, Dec 1, 2018, 6:35 AM IST
ಭುವನೇಶ್ವರ: ಹಾಕಿಯಲ್ಲಿ ಅಷ್ಟೇನೂ ಪರಿಣತಿ ಹೊಂದಿಲ್ಲದ ಚೀನ, ಶುಕ್ರವಾರದ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡಿಗೆ ಗೆಲುವು ನಿರಾಕರಿಸಿ ಗೆದ್ದಷ್ಟೇ ಸಂಭ್ರಮ ಆಚರಿಸಿದೆ. ಈ ಪಂದ್ಯ 2-2 ಅಂತರದಿಂದ ಡ್ರಾಗೊಂಡಿತು.
5ನೇ ನಿಮಿಷದಲ್ಲೇ ಗೋಲು ಸಿಡಿಸಿದ ಕ್ಸಿಯೋಪಿಂಗ್ ಗುವೊ ಚೀನಕ್ಕೆ ಮುನ್ನಡೆ ತಂದಿತ್ತರೆ, ಪಂದ್ಯದ ಮುಕ್ತಾಯಕ್ಕೆ ಇನ್ನೇನು ಒಂದೇ ನಿಮಿಷ ಇರುವಾಗ ತಲಾಕೆ ಡು ಪೆನಾಲ್ಟಿ ಕಾರ್ನರ್ ಗೋಲಿನ ಮೂಲಕ ಪಂದ್ಯಕ್ಕೆ ಡ್ರಾ ಮುದ್ರೆ ಒತ್ತಿದರು. ಇಂಗ್ಲೆಂಡಿನ 2 ಗೋಲುಗಳು ಮಾರ್ಕ್ ಗ್ಲೆಗೋರ್ನ್ (14ನೇ ನಿಮಿಷ) ಮತ್ತು ಲಿಯಮ್ ಅನ್ಸೆಲ್ (48ನೇ ನಿಮಿಷ) ಅವರಿಂದ ದಾಖಲಾದವು.