ಕುಂದಾಪುರದ ಲಿಫ್ಟರ್‌ಗಳಿಗೆ ಮನೆಯೇ ಅಭ್ಯಾಸ ಶಾಲೆ


Team Udayavani, Apr 23, 2020, 5:30 AM IST

ಕುಂದಾಪುರದ ಲಿಫ್ಟರ್‌ಗಳಿಗೆ ಮನೆಯೇ ಅಭ್ಯಾಸ ಶಾಲೆ

ಕುಂದಾಪುರ: ಲಾಕ್‌ಡೌನ್‌ ಹಿನ್ನೆಲೆ ಕ್ರೀಡಾಪಟುಗಳ ಫಿಟ್‌ನೆಸ್‌ ಕಾಯ್ದುಕೊಳ್ಳುವ ತರಬೇತಿಗೂ ತೊಡಕಾಗಿದೆ. ಆದರೂ ಕುಂದಾಪುರ ಮೂಲದ ವೇಟ್‌ಲಿಫ್ಟರ್‌ ಕಾಮನ್‌ವೆಲ್ತ್‌ ಬೆಳ್ಳಿ ಪದಕ ವಿಜೇತ ಗುರುರಾಜ್‌ ಹಾಗೂ ವಿಶ್ವ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ ವಿಜೇತ ವಿಶ್ವನಾಥ ಗಾಣಿಗ ಅವರು ತಮ್ಮ ಮನೆಯಲ್ಲಿಯೇ ಅಭ್ಯಾಸ ನಡೆಸುವ ಮೂಲಕ ಸಿಕ್ಕ ಸಮಯಾವಕಾಶವನ್ನು ಸದ್ವಿನಿಯೋಗ ಮಾಡುತ್ತಿದ್ದಾರೆ.

ಸ್ನೇಹಿತನ ರೂಂನಲ್ಲಿ ಫಿಟ್‌ನೆಸ್‌
2018ರಲ್ಲಿ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟ ಹೆಗ್ಗಳಿಕೆಯ ವಂಡ್ಸೆ ಸಮೀಪದ ಚಿತ್ತೂರಿನ ಗುರುರಾಜ್‌ ಪೂಜಾರಿ ಅವರು ಫಿಟ್‌ನೆಸ್‌ಗಾಗಿ ಉಜಿರೆಯಲ್ಲಿರುವ ತನ್ನ ಸ್ನೇಹಿತನ ರೂಂನಲ್ಲಿ ದ್ದಾರೆ. ಅಲ್ಲೇ ಬೆಳಗ್ಗೆ 2 ಗಂಟೆ ಹಾಗೂ ಸಂಜೆ 2 ಗಂಟೆಗಳ ಕಾಲ ತರಬೇತಿ ಮಾಡುತ್ತಿದ್ದಾರೆ.

ಚಂಡೀಗಢದಲ್ಲಿ ಏರ್‌ಫೋರ್ಸ್‌ನಲ್ಲಿ ಉದ್ಯೋಗದಲ್ಲಿರುವ ಇವರು ಫೆಬ್ರವರಿಯಲ್ಲಿ 40 ದಿನಗಳ ರಜೆಗೆಂದು ಊರಿಗೆ ಬಂದಿದ್ದು, ಆ ಬಳಿಕ ಲಾಕ್‌ಡೌನ್‌ನಿಂದಾಗಿ ವಾಪಸು ತೆರಳಲು ಸಾಧ್ಯವಾಗಿರಲಿಲ್ಲ. ಊರಲ್ಲಿದ್ದರೆ ಫಿಟ್‌ನೆಸ್‌ಗಾಗಿ ಅಭ್ಯಾಸ ಕಷ್ಟ ಎಂದು, ಉಜಿರೆಯ ತನ್ನ ಸ್ನೇಹಿತನ ರೂಂನಲ್ಲಿದ್ದುಕೊಂಡು ಜತೆಯಾಗಿ ಅಭ್ಯಾಸ ಮಾಡುತ್ತಿದ್ದಾರೆ. ಪುಶ್‌ಅಪ್‌, ಜಾಗ್‌, ಜಂಪ್ಸ್‌, ಸ್ಟೆಪ್ಸ್‌ ವಕೌìಟ್‌, ಕೋರ್‌ ಸ್ಟ್ರೆಂಥ್‌, ಸ್ಟೆಬಿಲಿಟಿ ಎಕ್ಸೈಜ್‌, ಹೈಪರ್‌ ಎಕ್ಸೈಜ್‌, ಮತ್ತಿತರ ತರಬೇತಿಗಳನ್ನು ನಿತ್ಯವೂ ಮಾಡುತ್ತಿದ್ದಾರೆ. ಎಲ್ಲವೂ ಸರಿಯಿದ್ದಿದ್ದರೆ ವೇಟ್‌ಲಿಫ್ಟಿಂಗ್‌ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಗುರುರಾಜ್‌ ಪಾಲ್ಗೊಳ್ಳಬೇಕಿತ್ತು. ಆದರೆ ಅದೀಗ ಮುಂದೂಡಿಕೆಯಾಗಿದೆ.

ಮೂಲೆಗುಂಪಾದ ವಸ್ತುಗಳೇ
ಫಿಟ್‌ನೆಸ್‌ ಸಲಕರಣೆ
ಎರಡು ಬಾರಿಯ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ದೇವಲ್ಕುಂದ ಗ್ರಾಮದ ಬಾಳಿ ಕೆರೆಯ ವಿಶ್ವನಾಥ ಭಾಸ್ಕರ ಗಾಣಿಗ ಅವರು ಮನೆಯಲ್ಲಿಯೇ ಅಭ್ಯಾಸ ನಿರತರಾಗಿದ್ದಾರೆ. ಮನೆಯಲ್ಲಿ ಮೂಲೆಗುಂಪಾಗಿ ಬಿದ್ದಿದ್ದ ರಾಡ್‌ವೊಂದರ ಎರಡು ಭಾಗಗಳ ತುದಿಗೆ ಮರಳು ಚೀಲ ಹಾಗೂ ಬಕೆಟ್‌ಗಳನ್ನು ಕಟ್ಟಿ ಕೊಂಡು ವೇಯ್‌r ಪ್ಲೇಟ್ಸ್‌ ಮಾಡಿ, ತರಬೇತಿ ನಡೆಸುತ್ತಿದ್ದಾರೆ.

35 ಕೆ.ಜಿ.ಯ ನಾಲ್ಕು ಚೀಲಗಳು, 17.5 ಕೆ.ಜಿ.ಯ ಎರಡು ಬಕೆಟ್‌ಗಳು ಸೇರಿದಂತೆ ಒಟ್ಟು 175 ಕೆ.ಜಿ.ಯ ಬಾರ್ಬೆಲ್‌ನಲ್ಲಿ ದಿನನಿತ್ಯ ಅಭ್ಯಾಸ ನಡೆಸುತ್ತಿದ್ದಾರೆ. ಬೆಳಗ್ಗೆ ಒಂದೂವರೆ ಗಂಟೆ ಹಾಗೂ ಸಂಜೆ ಎರಡೂವರೆ ಗಂಟೆ ಅಭ್ಯಾ ಸದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ತಮ್ಮಲ್ಲಿರುವ ಡಂಬಲ್ಸ್‌ ಮತ್ತು ರೆಸಿಸ್ಟೆನ್ಸ್‌ ಬ್ಯಾಂಡ್‌ನ‌ಲ್ಲೂ ಅಭ್ಯಾಸ ಮಾಡುತ್ತಿದ್ದಾರೆ.

ಬೆಂಗಳೂರಿನ ಸಾಫ್ಟ್‌ವೇರ್‌ ಕಂಪೆನಿ ಯೊಂದರಲ್ಲಿ ಉದ್ಯೋಗಿಯಾಗಿರುವ ವಿಶ್ವನಾಥ್‌ ಲಾಕ್‌ಡೌನ್‌ ಮೊದಲೇ ಊರಿಗೆ ಬಂದಿದ್ದು, ಆ ಬಳಿಕ ಅಲ್ಲಿಗೆ ತೆರಳಲಾಗದೇ ಇಲ್ಲಿಯೇ ಉಳಿದುಕೊಂಡಿದ್ದಾರೆ. ಶಾಲಾ ದಿನಗಳಲ್ಲಿ ಗೇರು ಬೀಜ ಹೆಕ್ಕುವ ಕೆಲಸ ಮಾಡು ತ್ತಿದ್ದೆ. ಈಗ ಮತ್ತೆ ಸಮಯಾವಕಾಶ ಸಿಕ್ಕಿದ್ದು, ಆ ಕೆಲಸವನ್ನು ಮಾಡುತ್ತಿದ್ದೇನೆ. ಇದರೊಂದಿಗೆ ಸಿನೆಮಾ ವೀಕ್ಷಣೆ, ಫಿಟ್‌ನೆಸ್‌ ಕುರಿತ ಪುಸ್ತಕಗಳನ್ನು ಓದುತ್ತಿದ್ದಾರೆ.

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

dk shi 2

ಹಲ್ಲೆ ಪ್ರಕರಣ ನಡೆದೇ ಇಲ್ಲ: ನಲಪಾಡ್ ಪರ ಡಿಕೆಶಿ ಬ್ಯಾಟಿಂಗ್

dks

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಕಿರುಕುಳ; ವಿದ್ಯಾರ್ಥಿನಿ ಆತ್ಮಹತ್ಯೆ, ವಾರ್ಡನ್ ಬಂಧನ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಕಿರುಕುಳ; ವಿದ್ಯಾರ್ಥಿನಿ ಆತ್ಮಹತ್ಯೆ, ವಾರ್ಡನ್ ಬಂಧನ

congress

ಬಿಎಂಎಲ್ ಕಾಂತರಾಜು ಕಾಂಗ್ರೆಸ್ ಗೆ: ಕೆಪಿಸಿಸಿ ಕಚೇರಿಗೆ ಬಾರದಂತೆ ಕಾರ್ಯಕರ್ತರಿಗೆ ಮನವಿ

ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ಎವಿಜಿಸಿ ನೀತಿ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ಎವಿಜಿಸಿ ನೀತಿ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

1fwerewr

ಬಾಗಲಕೋಟೆ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರಿ ಸ್ಪೋಟಕ ವಶ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kane Williamson

ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ: 3 ಭಾರತೀಯರಿಗೆ ಸ್ಥಾನ, ವಿರಾಟ್ ಗೆ ಜಾಗವಿಲ್ಲ

babar azam

ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವ

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

kl-rahul

ಮೊದಲ ಏಕದಿನ ಪಂದ್ಯದ ಸೋಲಿಗೆ ಇವರೇ ಕಾರಣ ಎಂದ ನಾಯಕ ರಾಹುಲ್

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

MUST WATCH

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

udayavani youtube

ಪಾಕಿಸ್ತಾನದ ಲಾಹೋರ್‌ನಲ್ಲಿ ಬಾಂಬ್ ಬ್ಲಾಸ್ಟ್! 3 ಸಾವು

udayavani youtube

ಚಿಂಚೋಳಿ ಜನರ ನಿದ್ದೆಗೆಡಿಸಿದ ಕಳ್ಳರು : ಮತ್ತೆ ಎರಡು ಅಂಗಡಿಗೆ ನುಗ್ಗಿ ಕಳ್ಳತನ

udayavani youtube

ನಲಪಾಡ್ ಹಲ್ಲೆ ವಿಚಾರ, ಸಿದ್ದು ಹಳ್ಳೇಗೌಡ ಹೇಳಿದ್ದೇನು ?

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

ಹೊಸ ಸೇರ್ಪಡೆ

ರೀಲರ್‌ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ರೀಲರ್‌ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಭೋಗ ಭೂಮಿಯಿಂದ ಯೋಗ ಭೂಮಿಯತ್ತ ನಡೆಯೋಣ

ಭೋಗ ಭೂಮಿಯಿಂದ ಯೋಗ ಭೂಮಿಯತ್ತ ನಡೆಯೋಣ

19kit

ಬೀದರ್‌: ಹೆಚ್ಚಿದ ಮನೆ ಮದ್ದು!

dk shi 2

ಹಲ್ಲೆ ಪ್ರಕರಣ ನಡೆದೇ ಇಲ್ಲ: ನಲಪಾಡ್ ಪರ ಡಿಕೆಶಿ ಬ್ಯಾಟಿಂಗ್

dks

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.