ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಸಾತ್ವಿಕ್‌-ಅಶ್ವಿ‌ನಿ ಪೊನ್ನಪ್ಪ ಮುನ್ನಡೆ

Team Udayavani, Nov 13, 2019, 12:20 AM IST

ಹಾಂಕಾಂಗ್‌: ಮಂಗಳವಾರ ಮೊದಲ್ಗೊಂಡ “ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಅಶ್ವಿ‌ನಿ ಪೊನ್ನಪ್ಪ ಮಿಕ್ಸೆಡ್‌ ಡಬಲ್ಸ್‌ನಲ್ಲಿ ದ್ವಿತೀಯ ಸುತ್ತು ತಲುಪಿದ್ದಾರೆ. ಹಾಗೆಯೇ ಪುರುಷರ ಸಿಂಗಲ್ಸ್‌ನಲ್ಲಿ ಸೌರಭ್‌ ವರ್ಮ ಪ್ರಧಾನ ಸುತ್ತಿಗೆ ಏರಿದ್ದಾರೆ.

ರಾಂಕಿರೆಡ್ಡಿ-ಅಶ್ವಿ‌ನಿ ಪೊನ್ನಪ್ಪ ಥಾಯ್ಲೆಂಡ್‌ನ‌ ನಿಪಿತ್‌ಪೋನ್‌ ಪೌಂಗಪೌಪೆಟ್‌- ಸಾವಿತ್ರಿ ಅಮಿತ್ರಾಪೈ ವಿರುದ್ಧ 16-21, 21-19, 21-17 ಅಂತರದ ಗೆಲುವು ಸಾಧಿಸಿದರು. ಆದರೆ ಭಾರತದ ಮತ್ತೂಂದು ಮಿಕ್ಸೆಡ್‌ ಡಬಲ್ಸ್‌ ಜೋಡಿ ಪ್ರಣವ್‌ ಜೆರ್ರಿ ಚೋಪ್ರಾ-ಎನ್‌. ಸಿಕ್ಕಿ ರೆಡ್ಡಿ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿತು. ಇವರೆದುರಿನ ಪಂದ್ಯವನ್ನು ಥಾಯ್ಲೆಂಡ್‌ನ‌ ದೆಶಪೊಲ್‌ ಪೌವರನುಕ್ರೊ-ಸಪ್ಸಿರಿ ತೆರತ್ತಾನ್‌ಚೈ 21-10, 21-18ರಿಂದ ಗೆದ್ದರು.

ಸೌರಭ್‌ ಸತತ 2 ಜಯ
ಅರ್ಹತಾ ಸುತ್ತಿನಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಸೌರಭ್‌ ವರ್ಮ ಸತತ 2 ಜಯದೊಂದಿಗೆ ಪ್ರಧಾನ ಸುತ್ತಿಗೆ ನೆಗೆದರು.

ಸೌರಭ್‌ ವರ್ಮ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ನ‌ ತನೊಂಗÕಕ್‌ ಸೆನ್ಸೊಂಬೂನ್ಸುಕ್‌ ಅವರನ್ನು 21-15, 21-19 ಅಂತರದಿಂದ, ಬಳಿಕ
ಫ್ರಾನ್ಸ್‌ನ ಲುಕಾಸ್‌ ಕ್ಲೇರ್‌ಬೌಟ್‌ ಅವರನ್ನು 21-19, 21-19 ಅಂತರದಿಂದ ಮಣಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ