ಹಾಂಕಾಂಗ್‌ ಓಪನ್‌: ಸೆಮಿಫೈನಲ್‌ಗೆ ಶ್ರೀಕಾಂತ್‌

Team Udayavani, Nov 16, 2019, 5:00 AM IST

ಹಾಂಕಾಂಗ್‌: ಭಾರತದ ಸ್ಟಾರ್‌ ಶಟ್ಲರ್‌ ಕೆ. ಶ್ರೀಕಾಂತ್‌ “ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌’ ಕೂಟದ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಅವರು ಈ ಕೂಟದಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.

ಕ್ವಾರ್ಟರ್‌ ಫೈನಲ್‌ ಎದುರಾಳಿ ಚೀನದ ಚೆನ್‌ ಲಾಂಗ್‌ ಪಂದ್ಯದ ನಡುವೆ ಗಾಯಾಳಾದ ಕಾರಣ ಶ್ರೀಕಾಂತ್‌ ಸುಲಭದಲ್ಲಿ ಮುನ್ನಡೆ ಸಾಧಿಸಿದರು. ಆಗ ಶ್ರೀಕಾಂತ್‌ ಮೊದಲ ಗೇಮನ್ನು ಕೇವಲ 15 ನಿಮಿಷಗಳಲ್ಲಿ 21-13 ಅಂತರದಿಂದ ತಮ್ಮದಾಗಿಸಿಕೊಂಡಿದ್ದರು. ಆದರೆ ಲಾಂಗ್‌ ದ್ವಿತೀಯ ಗೇಮ್‌ ಆಡಲಿಳಿಯಲಿಲ್ಲ.

ಚೆನ್‌ ಲಾಂಗ್‌ ವಿರುದ್ಧ ಶ್ರೀಕಾಂತ್‌ ತಮ್ಮ ವೃತ್ತಿಜೀವನದಲ್ಲಿ ಸಾಧಿಸಿದ ಎರಡನೇ ಗೆಲುವು ಇದಾಗಿದೆ. 2017ರ ಆಸ್ಟ್ರೇಲಿಯ ಓಪನ್‌ನಲ್ಲಿ 22-20, 21-16 ಅಂತರದಿಂದ ಚೆನ್‌ ಲಾಂಗ್‌ ಅವರನ್ನು ಶ್ರೀಕಾಂತ್‌ ಮಣಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ