ಒಕುಹಾರ, ಸನ್ ವಾನ್ ಹೊ ಚಾಂಪಿಯನ್ಸ್
Team Udayavani, Nov 19, 2018, 10:56 AM IST
ಹಾಂಕಾಂಗ್: ಜಪಾನಿನ ನೊಜೊಮಿ ಒಕುಹಾರ ಹಾಗೂ ಕೊರಿಯಾದ ಸನ್ ವಾನ್ ಹೊ “ಹಾಂಕಾಂಗ್ ಓಪನ್’ ಬ್ಯಾಡ್ಮಿಂಟನ್ ಟೂರ್ನಿಯ ವನಿತಾ ಹಾಗೂ ಪುರುಷರ ಸಿಂಗಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಜಪಾನ್ ಒಟ್ಟು 3 ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿತು.
ರವಿವಾರ ನಡೆದ ವನಿತಾ ಸಿಂಗಲ್ಸ್ ಫೈನಲ್ನಲ್ಲಿ ಒಕುಹಾರ ಥಾಯ್ಲೆಂಡ್ನ ರಚನೋಕ್ ಇಂತಾನನ್ ವಿರುದ್ಧ 21-19, 24-22 ಗೇಮ್ಗಳಿಂದ ಜಯಿಸಿದರು.
ವನಿತಾ ಡಬಲ್ಸ್ ವಿಭಾಗದಲ್ಲಿ ಜಪಾನ್ ಅಗ್ರ ಶ್ರೇಯಾಂಕಿತ ಯುಕಿ ಫುಕುಶಿಮಾ-ಸಯಕಾ ಹಿರೊಟಾ ಕೊರಿಯಾದ ಲೀ ಸೊ ಹೀ-ಶಿನ್ ಸೆಯುಗ್ ಚಾನ್ ಅವರನ್ನು 21-18, 21-17 ಗೇಮ್ಗಳಿಂದ ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸನ್ ವಾನ್ ಹೊ ಚಾಂಪಿಯನ್
ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಸನ್ ವಾನ್ ಹೊ ಜಪಾನಿನ ಕೆಂಟ ನಿಶಿಮೊಟಾ ಅವರನ್ನು 14-21, 21-17, 21-13 ಗೇಮ್ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಇಂಡೋನೇಶ್ಯದ ಮಾರ್ಕಸ್ ಫೆರ್ನಾಲ್ಡಿ ಗಿಡೊನ್-ಕೆವಿನ್ ಸಂಜಯ ಸುಕಮುಲೊ 21-13, 21-12 ಗೇಮ್ಗಳಿಂದ ಜಪಾನ್ನ ತಕೆಶಿ ಕಮುರ-ಕೈಗೊ ಸನೊಡ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.ಮಿಶ್ರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಜಪಾನಿನ ಯುಟಾ ವಟಾನಾಬೆ-ಎರಿಸಾ ಹಿಗಾಶಿನೊ ಚೀನದ ವಾಂಗ್ ಯಿಲು-ಹೌಂಗ್ ಡಾಂಗ್ಪಿಂಗ್ ವಿರುದ್ಧ 21-18, 21-14ರಿಂದ ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ