ಡ್ರಾ ಸಾಧಿಸಿದ ನೆದರ್ಲೆಂಡ್ಸ್ – ಈಕ್ವಡಾರ್; ಹೊರಬಿತ್ತು ಕತಾರ್
Team Udayavani, Nov 26, 2022, 11:29 PM IST
ದೋಹಾ: ಈಕ್ವಡಾರ್‌ನ “ಸೂಪರ್‌ಮ್ಯಾನ್ ಕ್ಯಾಪ್ಟನ್’ ಇನ್ನರ್ ವಲೆನ್ಸಿಯ 49ನೇ ನಿಮಿಷದಲ್ಲಿ ಡಚ್ ಪಡೆಗೆ ಢಿಕ್ಕಿ ಹೊಡೆದ ಪರಿಣಾಮ “ಎ’ ವಿಭಾಗದಲ್ಲಿ ಅತ್ಯಂತ ಮಹತ್ವ ಪಡೆದ ವಿಶ್ವಕಪ್ ಫುಟ್‌ಬಾಲ್ ಪಂದ್ಯ 1-1 ಸಮಬಲದಲ್ಲಿ ಮುಗಿಯಿತು. ಈ ಫಲಿತಾಂಶದೊಂದಿಗೆ ಆತಿಥೇಯ ಕತಾರ್ ಕೂಟದಿಂದ ಅಧಿಕೃತವಾಗಿ ಹೊರಬಿತ್ತು.
ನೆದರ್ಲೆಂಡ್ಸ್ ಮತ್ತು ಈಕ್ವಡಾರ್ ಒಂದು ಗೆಲುವು, ಒಂದು ಡ್ರಾ ಫಲಿತಾಂಶದೊಂದಿಗೆ 4 ಅಂಕ ಹೊಂದಿವೆ. ಗೋಲು ವ್ಯತ್ಯಾಸದಲ್ಲಿ ನೆದರ್ಲೆಂಡ್ಸ್ ಅಗ್ರಸ್ಥಾನ ಅಲಂಕರಿಸಿದೆ. 3 ಅಂಕ ಗಳಿಸಿರುವ ಆಫ್ರಿಕನ್ ಚಾಂಪಿಯನ್ ಸೆನೆಗಲ್ 3ನೇ ಸ್ಥಾನದಲ್ಲಿದೆ. ಎರಡನ್ನೂ ಸೋತಿರುವ ಕತಾರ್ ಇನ್ನೂ ಅಂಕದ ಖಾತೆ ತೆರೆದಿಲ್ಲ.
“ಎ’ ವಿಭಾಗದಲ್ಲಿನ್ನು ನೆದರ್ಲೆಂಡ್ಸ್-ಕತಾರ್ ಹಾಗೂ ಈಕ್ವಡಾರ್-ಸೆನೆಗಲ್ ಮುಖಾಮುಖೀ ಆಗಲಿಕ್ಕಿದೆ. ಕತಾರ್ ಹೊರತುಪಡಿಸಿ ಉಳಿದ ಮೂರೂ ತಂಡಗಳಿಗೆ ನಾಕೌಟ್ ಪ್ರವೇಶಿಸುವ ಅವಕಾಶವಿದೆ. ಕತಾರ್ ವಿಶ್ವಕಪ್‌ನಿಂದ ಬಹಳ ಬೇಗ ನಿರ್ಗಮಿಸಿದ ಆತಿಥೇಯ ರಾಷ್ಟ್ರವೆಂಬ ಕಳಂಕಕ್ಕೆ ತುತ್ತಾಯಿತು.
6ನೇ ನಿಮಿಷದಲ್ಲೇ ಗೋಲ್
ನೆದರ್ಲೆಂಡ್ಸ್ 6ನೇ ನಿಮಿಷದಲ್ಲೇ ಖಾತೆ ತೆರೆದು ಪ್ರಭುತ್ವ ಸಾಧಿಸಿತು. ಕೋಡಿ ಗಾಪ್ಕೊ ಈ ಗೋಲುವೀರ. ವಿರಾಮದ ತನಕ ಡಚ್ ಪಡೆ ಈ ಮುನ್ನಡೆ ಕಾಯ್ದುಕೊಂಡು ಬಂತು. ಆದರೆ ದ್ವಿತೀಯಾರ್ಧದ 4ನೇ ನಿಮಿಷದಲ್ಲೇ ಇನ್ನರ್ ವಲೆನ್ಸಿಯ ಈಕ್ವಡಾರ್ ಖಾತೆ ತೆರೆದು ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು.
ಇದು ಈ ಕೂಟದಲ್ಲಿ ವಲೆನ್ಸಿಯ ಬಾರಿಸಿದ 3ನೇ ಗೋಲು. ಹಾಗೆಯೇ ಈಕ್ವಡಾರ್‌ನ ಕಳೆದ 6 ವಿಶ್ವಕಪ್ ಗೋಲುಗಳ ಸಾಧಕನೆನಿಸಿದರು. ಇವರ ಹಿಂದಿನ 3 ಗೋಲುಗಳು 2014ರ ಬ್ರಝಿಲ್ ಕೂಟದಲ್ಲಿ ದಾಖಲಾಗಿದ್ದವು. ಈ ಅವಧಿಯಲ್ಲಿ ವೆಲನ್ಸಿಯ ಹೊರತುಪಡಿಸಿ ಈಕ್ವಡಾರ್ ಪರ ಯಾರಿಂದಲೂ ಗೋಲು ದಾಖಲಾಗಿಲ್ಲ ಎಂಬುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ಮೋದಿ ಉತ್ತರಾಧಿಕಾರಿಯಾಗುತ್ತಾರಾ ಯು.ಪಿ ಸಿಎಂ?: ಯೋಗಿ ಆದಿತ್ಯನಾಥ್ ಹೇಳುವುದೇನು?
ದೇಶದ ಮೊದಲ ಪ್ರಕರಣ: ಮಗುವಿನ ನಿರೀಕ್ಷೆಯಲ್ಲಿ ತೃತೀಯ ಲಿಂಗಿ ದಂಪತಿ
ಅಫ್ರಿದಿ ಮಗಳನ್ನು ವರಿಸಿದ ಶಾಹೀನ್ ಅಫ್ರಿದಿ: ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾದ ಸಹ ಆಟಗಾರರು
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಆರ್ ಟಿಐ ಕಾರ್ಯಕರ್ತ ಸಾಯಿದತ್ತ ನಿಧನ
ಹಾಕಿ ಕೋಚ್ ಹುದ್ದೆಗೆ ವಿದೇಶಿಯರ ರೇಸ್