ಎರಡೆರಡು ಸೋಲಿನ ಬಳಿಕವೂ ಟೀಂ ಇಂಡಿಯಾಗಿದೆ ಸೆಮಿ ಫೈನಲ್ ಅವಕಾಶ
Team Udayavani, Nov 1, 2021, 11:48 AM IST
ದುಬೈ: ಪಾಕ್ ವಿರುದ್ಧದ ಸೋಲಿನ ಬಳಿಕ ಕಮ್ ಬ್ಯಾಕ್ ಮಾಡುವ ಬದಲು ಮತ್ತಷ್ಟು ಹೀನಾಯವಾಗಿ ಸೋಲನುಭವಿಸಿದ ಟೀಂ ಇಂಡಿಯಾ ಸದ್ಯ ಐಸಿಸಿ ವಿಶ್ವಕಪ್ ನಿಂದ ಹೊರಬೀಳುವ ಹಂತಕ್ಕೆ ಬಂದಿದೆ. ಸದ್ಯ ಬಿ ಗುಂಪಿನಲ್ಲಿ ಭಾರತ ತಂಡ ಐದನೇ ಸ್ಥಾನದಲ್ಲಿದೆ.
ಕಿವೀಸ್ ವಿರುದ್ಧ ಗೆಲುವಿನ ಹಳಿ ಏರುವ ಉತ್ಸಾಹದಿಂದ ಕಣಕ್ಕಿಳಿದಿದ್ದ ಭಾರತ ತಂಡ ವಾರದ ಹಿಂದಿನ ಆಟವನ್ನೇ ಮತ್ತೆ ಆಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾದ ಬ್ಯಾಟರ್ ಗಳು ಬ್ಯಾಟಿಂಗ್ ಮರೆತಂತೆ ಆಡಿದರು. ಜಡೇಜಾ 26 ರನ್ ಮತ್ತು ಹಾರ್ದಿಕ್ 23 ರನ್ ಬಿಟ್ಟರೆ ಉಳಿದವರದ್ದು ಫ್ಲಾಪ್ ಶೋ. 20 ಓವರ್ ಗಳಲ್ಲಿ ತಂಡ ಗಳಿಸಿದ್ದು ಕೇವಲ 110 ರನ್.
ಗುರಿ ಬೆನ್ನತ್ತಿದ ಕಿವೀಸ್ ಕೇವಲ ಎರಡು ವಿಕೆಟ್ ಕಳೆದುಕೊಂಡು 14.3 ಓವರ್ ಗಳಲ್ಲಿ ಜಯ ಸಾಧಿಸಿತು. ಬುಮ್ರಾ ಹೊರತುಪಡಿಸಿ ಉಳಿದ ಬೌಲರ್ ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ಇದನ್ನೂ ಓದಿ:ಟಿ20 ವಿಶ್ವಕಪ್ ನಿಂದ ಹೊರಬಿದ್ದ ಬಾಂಗ್ಲಾ ಆಲ್ ರೌಂಡರ್ ಶಕೀಬ್ ಅಲ್ ಹಸನ್
ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಭಾರತ ತಂಡ -1.609 ರನ್ ರೇಟ್ ನೊಂದಿಗೆ ಐದನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಪಾಕ್ ಸೆಮಿ ಫೈನಲ್ ಪ್ರವೇಶ ಬಹುತೇಕ ಖಚಿತವಾಗಿದ್ದು, ಎರಡನೇ ಸ್ಥಾನಕ್ಕೆ ಕಿವೀಸ್ ಪ್ರಬಲ ಸ್ಪರ್ಧೆ ನೀಡಲಿದೆ. ಆದರೆ ಭಾರತ ತಂಡದ ಸೆಮಿ ಬಾಗಿಲು ಅಲ್ಪ ಮಾತ್ರ ತೆರೆದಿದೆ.
ಹೇಗೆ?
ಭಾರತ ಟೂರ್ನಿಯಲ್ಲಿ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಭಾರತವಿನ್ನು ಆಡಲಿದೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೋತ ನಂತರ ನೆಟ್ ರನ್-ರೇಟ್ ಪಾತಾಳ ಸೇರಿರುವ ಕಾರಣ ಭಾರತವು ದೊಡ್ಡ ಅಂತರದಿಂದ ಗೆಲ್ಲ ಬೇಕಿದೆ.
ಎಲ್ಲಾ ತಂಡಗಳು ಆರು ಅಂಕಗಳೊಂದಿಗೆ ಸಮಬಲ ಸಾಧಿಸಲು ಅಫ್ಘಾನಿಸ್ತಾನ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇಬೇಕು. ಉತ್ತಮ ರನ್ ರೇಟ್ ಹೊಂದಿರುವ ತಂಡ ಪಂದ್ಯಾವಳಿಯ ಮುಂದಿನ ಹಂತಕ್ಕೆ ಹೋಗುತ್ತದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಢಾಕಾ ಟೆಸ್ಟ್: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್ ಜಯಭೇರಿ
ರಾಯಲ್ ಕದನ: ಇಲ್ಲಿದೆ ಬೆಂಗಳೂರು-ರಾಜಸ್ಥಾನ ನಡುವಿನ ಸ್ವಾರಸ್ಯಕರ ಅಂಶಗಳು
ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ
ರಜತ್ ಪಾಟೀದಾರ್: ಆರ್ಸಿಬಿಯ ನ್ಯೂ ಸೂಪರ್ಸ್ಟಾರ್
ಕ್ವಾಲಿಫೈಯರ್ 2 : ರಾಯಲ್ ಕದನಕ್ಕೆ ಆರ್ಸಿಬಿ-ರಾಜಸ್ಥಾನ್ ಸಜ್ಜು