ನಾನು ಬಹಳ ಹಿಂದೆಯೇ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ: ಶಾಸ್ತ್ರಿ
Team Udayavani, Jul 5, 2017, 9:44 AM IST
ಮುಂಬಯಿ: ಟೀಮ್ ಇಂಡಿಯಾದ ಮಾಜಿ ಡೈರೆಕ್ಟರ್ ರವಿ ಶಾಸ್ತ್ರಿ ಕೋಚ್ ಹುದ್ದೆಗೆ ಸೋಮವಾರ ಅರ್ಜಿ ಸಲ್ಲಿಸಿದರು ಎಂಬುದಾಗಿ ವರದಿಯಾಗಿತ್ತು. ಆದರೆ ಸೋಮವಾರವಲ್ಲ, ತಾನು ಬಹಳ ಹಿಂದೆಯೇ ಅರ್ಜಿ ಹಾಕಿದ್ದೆ ಎಂಬುದಾಗಿ ರವಿ ಶಾಸ್ತ್ರಿ ಹೇಳಿದ್ದಾಗಿ ವರದಿಯಾಗಿದೆ.
“ನಾನು ಸೋಮವಾರವಷ್ಟೇ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ ಎಂಬ ವರದಿ ಸುಳ್ಳು. ನಾನು ಬಹಳ ಹಿಂದೆಯೇ ಅರ್ಜಿ ಹಾಕಿದ್ದೆ…’ ಎಂಬುದಾಗಿ ಮೀಡಿಯಾ ವೆಬ್ಸೈಟ್ ಒಂದರ ಜತೆ ರವಿ ಶಾಸ್ತ್ರಿ ಹೇಳಿಕೊಂಡಿದ್ದಾರೆ.
ಬಿಸಿಸಿಐ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ಜು. 9ಕ್ಕೆ ವಿಸ್ತರಿಸಿದ ಕೂಡಲೇ ರವಿ ಶಾಸ್ತ್ರಿ ಕೋಚ್ ಹುದ್ದೆಯ ಆಕಾಂಕ್ಷೆಯನ್ನು ಪ್ರಕಟಿಸಿದ್ದಾರೆ; ಕೂಡಲೇ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಆದರೆ ಅವರು ಸೋಮವಾರ (ಜು. 3) ಅರ್ಜಿ ಸಲ್ಲಿಸಿದರು ಎಂಬುದು ಹೇಗೆ ಸುದ್ದಿಯಾಯಿತೋ ತಿಳಿಯುತ್ತಿಲ್ಲ!
ರವಿ ಶಾಸ್ತ್ರಿ ಕಳೆದ ವರ್ಷವೂ ಕೋಚ್ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ಈ ಅವಕಾಶ ಅನಿಲ್ ಕುಂಬ್ಳೆ ಪಾಲಾಗಿತ್ತು. ಈ ಬಾರಿ ಟಾಮ್ ಮೂಡಿ, ವೀರೇಂದ್ರ ಸೆಹವಾಗ್, ರಿಚರ್ಡ್ ಪೈಬಸ್ ಮೊದಲಾದವರೆಲ್ಲ ಕೋಚ್ ರೇಸ್ನಲ್ಲಿದ್ದಾರೆ. ಅಂತಿಮ ದಿನಾಂಕವನ್ನು ವಿಸ್ತರಿಸಿದರೂ ಟೀಮ್ ಇಂಡಿಯಾ ತರಬೇತುದಾರರಾಗಲು ಭಾರೀ ಸಂಖ್ಯೆಯ ಅರ್ಜಿ ಬಂದಿಲ್ಲ ಎನ್ನಲಾಗಿದೆ. ಕೇವಲ ಏಳೆಂಟು ಮಂದಿಯ ನಡುವೆಯೇ ಆಯ್ಕೆ ನಡೆಯಬೇಕಿದೆ.
ಜು. 10ರಂದು ಟೀಮ್ ಇಂಡಿಯಾದ ನೂತನ ಕೋಚ್ ಯಾರೆಂಬುದು ತಿಳಿಯಲಿದೆ. ಅನಂತರ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
MUST WATCH
ಹೊಸ ಸೇರ್ಪಡೆ
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ