ನಾಯಕತ್ವದ ಬಗ್ಗೆ ಯೋಚನೆಯೂ ಇರಲಿಲ್ಲ, ಸಿದ್ದತೆಯೂ ಇಲ್ಲ: ಬಾಂಗ್ಲಾ ಟೆಸ್ಟ್ ನಾಯಕ
Team Udayavani, Nov 7, 2019, 2:07 PM IST
ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ನೂತನ ಟೆಸ್ಟ್ ನಾಯಕ ಮೊಮಿನುಲ್ ಹಕ್ ಇದೇ ಮೊದಲ ಬಾರಿಗೆ ತಮ್ಮ ನಾಯಕತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ತಾನು ನಾಯಕತ್ವ ವಹಿಸಿಕೊಳ್ಳು ಸಿದ್ದವಾಗಿರಲಿಲ್ಲ ಎಂದಿದ್ದಾರೆ.
ಟೆಸ್ಟ್ ಮತ್ತು ಟಿ ಟ್ವೆಂಟಿ ತಂಡದ ನಾಯಕನಾಗಿದ್ದ ಶಕೀಬ್ ಅಲ್ ಹಸನ್ ಅವರನ್ನು ಐಸಿಸಿ ಅಮಾನತು ಮಾಡಿದ ಕಾರಣ ಬಾಂಗ್ಲಾ ಕ್ರಿಕೆಟ್ ಮಂಡಳಿ ಮೊಮಿನುಲ್ ಹಕ್ ಅವರನ್ನು ನೂತನ ಟೆಸ್ಟ್ ನಾಯಕನನ್ನಾಗಿ ಆಯ್ಕೆ ಮಾಡಿತ್ತು.
ನಾನು ನಾಯಕತ್ವಕ್ಕೆ ಸಿದ್ದವಾಗಿರಲಿಲ್ಲ. ಅದರ ಬಗ್ಗೆ ಯೋಚನೆಯೂ ಇರಲಿಲ್ಲ. ರಾಷ್ಟ್ರೀಯ ತಂಡಕ್ಕೆ ನಾನು ನಾಯಕನಾಗುತ್ತೇನೆ ಎಂಬುದು ನನ್ನ ಯೋಚನೆಗೆ ನಿಲುಕದ್ದು ಎಂದಿದ್ದಾರೆ.
ಬಾಂಗ್ಲಾದ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನು ಮುನ್ನಡೆಸುವ ಅವಕಾಶ ಮೊಮಿನುಲ್ ಹಕ್ ಪಾಲಾಗಿದೆ.