ದೀಪಕ್ ಅಗರ್ವಾಲ್ಗೆ ನಿಷೇಧ
Team Udayavani, Apr 30, 2020, 12:13 PM IST
ಹೊಸದಿಲ್ಲಿ: ಸದ್ಯ ಸಾಗುತ್ತಿರುವ ಭ್ರಷ್ಟಾಚಾರ ತನಿಖೆಗೆ ಅಡ್ಡಿಪಡಿಸಿದ್ದನ್ನು ಒಪ್ಪಿಕೊಂಡ ಭಾರತೀಯ ಉದ್ಯಮಿ ದೀಪಕ್ ಅಗರ್ವಾಲ್ ಅವರನ್ನು ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧ ಹೇರಿದೆ. ಅವರು ಯುಎಇಯಲ್ಲಿ 2018ರಲ್ಲಿ ನಡೆದ ಟಿ10 ಲೀಗ್ನಲ್ಲಿ ಒಂದು ಫ್ರಾಂಚೈಸಿಯ ಮಾಲಕರಾಗಿದ್ದರು. ಭ್ರಷ್ಟಾಚಾರ ವಿರೋಧಿ ನಿಯಮ ಉಲ್ಲಂಘಿಸಿರುವುದನ್ನು ಒಪ್ಪಿಕೊಂಡ ಬಳಿಕ ತನಿಖೆಗೆ ಸಹಕಾರ ನೀಡುವ ಕೊಡುಗೆ ನೀಡಿದ್ದರಿಂದ ಅವರಿಗೆ ಎರಡು ವರ್ಷ ನಿಷೇಧ ಹೇರಲಾಗಿದ್ದು ಇದರಲ್ಲಿ ಆರು ತಿಂಗಳು ಅಮಾನತುಗೊಂಡ ಶಿಕ್ಷೆಯಾಗಿರುತ್ತದೆ. 2018ರ ಲೀಗ್ ಕೂಟದ ವೇಳೆ ನ್ಯಾಯವಲ್ಲದ ಚಟುಟವಟಿಕೆಯಲ್ಲಿ ಪಾಲ್ಗೊಂಡ ಆರೋಪ ದೀಪಕ್ ಅವರ ಮೇಲೆ ಇತ್ತು. ದೀಪಕ್ ಅವರು ಕೆಲವು ಸಮಯದವರೆಗೆ ಟಿ10 ಸಿಂಧಿಸ್ ತಂಡದ ಮಾಲಕರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ