ಯುಎಇ ಆತಿಥ್ಯದ ಟಿ20 ಮೇಲೆ ಐಸಿಸಿ ತನಿಖಾ ತೂಗುಗತ್ತಿ
Team Udayavani, Feb 1, 2018, 6:35 AM IST
ಯುಎಇ: ದುಬೈನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಅಜ್ಮನ್ ಆಲ್ ಸ್ಟಾರ್ ಲೀಗ್ ಟಿ20 ಕೂಟದ ಮೇಲೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ತನಿಖಾ ತೂಗುಗತ್ತಿ ನೇತಾಡುತ್ತಿದೆ. ಇದಕ್ಕೆಲ್ಲ ಕಾರಣ ಆಟಗಾರರು ಸಂಶಯಾಸ್ಪದ ರೀತಿಯಲ್ಲಿ ರನೌಟ್ ಆಗಿರುವುದು. ತಂಡಗಳೆರಡರ ನಡುವೆ ಆಟ ನಡೆಯುತ್ತಿದ್ದಾಗ ಒಂದು ತಂಡದ ಬ್ಯಾಟ್ಸ್ಮನ್ಗಳು ಉದ್ದೇಶಪೂರ್ವಕವಾಗಿ ರನೌಟ್ ಆಗುವಂತೆ ಕಂಡು ಬಂದಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಐಸಿಸಿ ಮಾನ್ಯತೆ ಹೊಂದಿದ ಕೂಟದಲ್ಲಿಯೇ ಇಂತಹದೊಂದು ಕಳಪೆ ಆಟ ಕಂಡು ಬಂದಿದ್ದರಿಂದ ಐಸಿಸಿ ಭ್ರಷ್ಟಾಚಾರ ತನಿಖಾ ಸಮಿತಿ ತನಿಖೆ ಆರಂಭಿಸಿದೆ.