ಏಕದಿನ ಶ್ರೇಯಾಂಕ: ಸಚಿನ್‌ ದಾಖಲೆ ಸರಿಗಟ್ಟಿದ ಕೊಹ್ಲಿ

Team Udayavani, Sep 5, 2017, 6:40 AM IST

ದುಬೈ: ಎಲ್ಲಾ ಕೋನದಿಂದಲೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ಬೆನ್ನುಹತ್ತಿದ್ದಾರೆ. ಇತ್ತೀಚೆಗೆ ಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 30ನೇ ಶತಕ ದಾಖಲಿಸಿದ ಕೊಹ್ಲಿ ಗರಿಷ್ಠ ಶತಕ ದಾಖಲಿಸಿದವರಲ್ಲಿ ಸಚಿನ್‌ ನಂತರದ ಸ್ಥಾನದಲ್ಲಿದ್ದಾರೆ. ಅದೇ ರೀತಿ ಏಕದಿನ ಶ್ರೇಯಾಂಕದ ಅಂಕದಲ್ಲಿ ಸಚಿನ್‌ ದಾಖಲೆ ಸರಿಗಟ್ಟಿದ್ದಾರೆ.

ಹೊಸದಾಗಿ ಬಿಡುಗಡೆಯಾದ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ನಂ.1ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಕೊಹ್ಲಿ ಒಟ್ಟು 887 ಅಂಕವನ್ನು ಹೊಂದಿದ್ದಾರೆ. ಸಚಿನ್‌ ತೆಂಡುಲ್ಕರ್‌ 1998ರಲ್ಲಿ ಇಷ್ಟೇ ಅಂಕ ಪಡೆದು ನಂ.1ನೇ ಸ್ಥಾನದಲ್ಲಿದ್ದರು. ಭಾರತದ ಮಟ್ಟಿಗೆ ಈ ಸಾಧನೆ ಮಾಡಿದ್ದು ಈ ಇಬ್ಬರು ಆಟಗಾರರು ಮಾತ್ರ.

4ನೇ ಸ್ಥಾನಕ್ಕೆ ಜಿಗಿದ ಬುಮ್ರಾ: ಏಕದಿನ ಬೌಲಿಂಗ್‌ ವಿಭಾಗದಲ್ಲಿ ಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 15 ವಿಕೆಟ್‌ ಪಡೆದ ಭಾರತದ ವೇಗಿ ಜಸ್‌ಪ್ರೀತ್‌ ಬುಮ್ರಾ ನಂ.4ನೇ ಸ್ಥಾನಕ್ಕೇರಿದ್ದಾರೆ. 27 ಸ್ಥಾನಗಳ ಏರಿಕೆ ಕಂಡಿರುವ ಬುಮ್ರಾ ವೃತ್ತಿಜೀವನದಲ್ಲಿ ಶ್ರೇಷ್ಠ ಶ್ರೇಯಾಂಕ ಪಡೆದಿದ್ದಾರೆ. ಉಳಿದಂತೆ ಬ್ಯಾಟಿಂಗ್‌ ವಿಭಾಗದಲ್ಲಿ ರೋಹಿತ್‌ ಶರ್ಮ 5 ಸ್ಥಾನ ಏರಿಕೆ ಕಾಣುವ ಮೂಲಕ ನಂ.9ನೇ ಸ್ಥಾನಕ್ಕೇರಿದ್ದಾರೆ. ತಂಡದ ಶ್ರೇಯಾಂಕದಲ್ಲಿ ಭಾರತ 3ನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ