ಟಿ20 ವಿಶ್ವಕಪ್: ಶ್ರೀಲಂಕಾಗೆ ಸುಲಭದ ತುತ್ತಾದ ಐರ್ಲೆಂಡ್
Team Udayavani, Oct 23, 2022, 1:25 PM IST
ಹೋಬಾರ್ಟ್: ಐಸಿಸಿ ಟಿ20 ವಿಶ್ವಕಪ್ ನ ರವಿವಾರದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವು ಸುಲಭ ಜಯ ಸಾಧಿಸಿದೆ. ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಲಂಕಾ ತಂಡವು 9 ಅಂತರದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ತಂಡವು ಗಳಿಸಿದ್ದು 128 ರನ್ ಮಾತ್ರ. ಸುಲಭವಾಗಿ ಗುರಿ ಬೆನ್ನತ್ತಿದ ಲಂಕಾ ಒಂದು ವಿಕೆಟ್ ಕಳೆದುಕೊಂಡು 15 ಓವರ್ ಗಳಲ್ಲಿ ಜಯ ಸಾಧಿಸಿತು
ಐರ್ಲೆಂಡ್ ತಂಡಕ್ಕೆ ಅನುಭವಿ ಸ್ಟರ್ಲಿಂಗ್ ಮತ್ತು ಟೆಕ್ಟರ್ ಮಾತ್ರ ಬ್ಯಾಟಿಂಗ್ ನೆರವು ನೀಡಿದರು. ಸ್ಟರ್ಲಿಂಗ್ 34 ರನ್ ಗಳಿಸಿದರೆ, ಹ್ಯಾರಿ ಟೆಕ್ಟರ್ 45 ರನ್ ಬಾರಿಸಿದರು. ಲಂಕಾ ಪರ ಹಸರಂಗ ಮತ್ತು ತೀಕ್ಷಣ ತಲಾ 2 ವಿಕೆಟ್ ಕಿತ್ತರು.
ಚೇಸಿಂಗ್ ಆರಂಭಿಸಿದ ಲಂಕಾಗೆ ಉತ್ತಮ ಬ್ಯಾಟಿಂಗ್ ನೆರವು ದೊರಕಿತು. ಆರಂಭಿಕರಾದ ಕುಸಾಲ್ ಮೆಂಡಿಸ್ ಅಜೇಯ 68 ರನ್ ಗಳಿಸಿದರೆ, ಧನಂಜಯ ಡಿಸಿಲ್ವಾ 31 ರನ್ ಮಾಡಿದರು. ಇವರಿಬ್ಬರು ಮೊದಲ ವಿಕೆಟ್ ಗೆ 63 ರನ್ ಗಳಿಸಿದರು. ನಂತರ ಬಂದ ಚರಿತ ಅಸಲಂಕ ಅಜೇಯ 31 ರನ್ ಮಾಡಿದರು. 15 ಓವರ್ ಗಳಲ್ಲಿ ಲಂಕಾ 133 ರನ್ ಜಯ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ