ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಂದೂಡಿಕೆ
ಜೂ. 10ರ ಬದಲು ಜೂ. 18ರಿಂದ ಆರಂಭ
Team Udayavani, Jan 26, 2021, 7:30 AM IST
ದುಬಾೖ: ಮೊದಲ ಆವೃತ್ತಿಯ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 8 ದಿನ ಮುಂದೂಡಲ್ಪಟ್ಟಿದೆ. ಐತಿಹಾಸಿಕ ಲಾರ್ಡ್ಸ್ನಲ್ಲಿ ಈ ಮುಖಾಮುಖೀ ಜೂ. 18ರಿಂದ 22ರ ತನಕ ತನಕ ಸಾಗಲಿದೆ. ಜೂ. 23 ಮೀಸಲು ದಿನವಾಗಿದೆ. ಮೊದಲು ನಿರ್ಧರಿಸಿದಂತೆ ಪ್ರಶಸ್ತಿ ಸಮರ ಜೂ. 10ರಿಂದ 14ರ ತನಕ ನಡೆಯಬೇಕಿತ್ತು.
ಭಾರತ ತಂಡ ಫೈನಲ್ನಲ್ಲಿ ಆಡುವ ಸಾಧ್ಯತೆ ದಟ್ಟವಾಗಿರುವುದರಿಂದ ಈ ಬದಲಾವಣೆ ಎನ್ನಲಾಗಿದೆ. ಒಂದು ವೇಳೆ ಐಪಿಎಲ್ ಪಂದ್ಯಾವಳಿ ಮೇ ಕೊನೆಗೆ ಮುಕ್ತಾಯಗೊಂಡರೆ ಕ್ರಿಕೆಟಿಗರಿಗೆ, ಅದರಲ್ಲೂ ಮುಖ್ಯವಾಗಿ ಭಾರತದ ಆಟಗಾರರಿಗೆ ವಿಶ್ರಾಂತಿ ಅಗತ್ಯವಿರುತ್ತದೆ. ಹಾಗೆಯೇ ಲಂಡನ್ನಿಗೆ ತೆರಳಿದ ಬಳಿಕ ಕೆಲವು ದಿನಗಳ ಕ್ವಾರಂಟೈನ್ನಲ್ಲೂ ಇರಬೇಕಾಗುತ್ತದೆ. ಇದು ಮುಗಿಸಿ 2-3 ದಿನಗಳ ಅಭ್ಯಾಸವನ್ನೂ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಹೆಚ್ಚುವರಿ ದಿನಗಳು ಬೇಕಾಗುತ್ತವೆ.
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಯಾದಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಮೊದಲೆರಡು ಸ್ಥಾನದಲ್ಲಿವೆ.