ಐಸಿಸಿ ಟೆಸ್ಟ್ ರ್ಯಾಂಕಿಂಗ್: ಕೊಹ್ಲಿ ನಂ.1; ರಹಾನೆ, ಪೂಜಾರ ಕುಸಿತ
Team Udayavani, Jan 8, 2020, 11:59 PM IST
ದುಬಾೖ: ವರ್ಷಾರಂಭದ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪ್ರಕಟಗೊಂಡಿದೆ. ಇದರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಒಂದೊಂದು ಸ್ಥಾನ ಕೆಳಗಿಳಿದಿದ್ದಾರೆ.
ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವಿನ ಸಿಡ್ನಿ ಟೆಸ್ಟ್ ಹಾಗೂ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ಕೇಪ್ಟೌನ್ ಟೆಸ್ಟ್ ಪಂದ್ಯದ ಬಳಿಕ ರ್ಯಾಂಕಿಂಗ್ ಯಾದಿಯನ್ನು ಪರಿಷ್ಕರಿಸಲಾಗಿದೆ. ಇದರಂತೆ ವಿರಾಟ್ ಕೊಹ್ಲಿ 928 ಅಂಕ ಹೊಂದಿದ್ದರೆ, ಅನಂತರದ ಸ್ಥಾನದಲ್ಲಿರುವ ಸ್ಟೀವನ್ ಸ್ಮಿತ್ ಬಳಿ 911 ಅಂಕ ಇದೆ. ಆಸ್ಟ್ರೇಲಿಯದ ರನ್ಯಂತ್ರ ಮಾರ್ನಸ್ ಲಬುಶೇನ್ ಜೀವನಶ್ರೇಷ್ಠ 3ನೇ ಸ್ಥಾನಕ್ಕೆ ನೆಗೆದುದರಿಂದ ಉಳಿದ ಕೆಲವರು ಒಂದೊಂದು ಸಾªನ ಕೆಳಗಿಳಿಯಬೇಕಾಯಿತು. ಇದರಲ್ಲಿ ಪೂಜಾರ ಮತ್ತು ರಹಾನೆ ಕೂಡ ಸೇರಿದ್ದಾರೆ.
ಇಂಗ್ಲೆಂಡಿನ ಆಲ್ರೌಂಡರ್ ಬೆನ್ ಸ್ಟೋಕ್ಸ್ 2ನೇ ಸಲ ಟಾಪ್-10 ಯಾದಿಗೆ ಮರಳಿದ್ದಾರೆ. ಕೇಪ್ಟೌನ್ನಲ್ಲಿ 47 ಹಾಗೂ 72 ರನ್ ಬಾರಿಸಿದ ಸ್ಟೋಕ್ಸ್ 15ರಿಂದ 10ನೇ ಸ್ಥಾನಕ್ಕೆ ನೆಗೆದರು. ಮೊದಲ ಶತಕ ಬಾರಿಸಿದ ಇಂಗ್ಲೆಂಡ್ ಆರಂಭಕಾರ ಡೊಮಿನಿಕ್ ಸಿಬ್ಲಿ ಅವರದು 87 ಸ್ಥಾನಗಳ ಭರ್ಜರಿ ನೆಗೆತ. ಅವರೀಗ 80ನೇ ಸ್ಥಾನಕ್ಕೆ ಬಂದಿದ್ದಾರೆ.
ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ (19), ಐಡನ್ ಮಾರ್ಕ್ರಮ್ (22) ಅವರ ರ್ಯಾಂಕಿಂಗ್ನಲ್ಲೂ ಸಣ್ಣ ಮಟ್ಟದ ಪ್ರಗತಿಯಾಗಿದೆ.
ಕಮಿನ್ಸ್ ಟಾಪ್ ಬೌಲರ್
ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವವರು ನ್ಯೂಜಿಲ್ಯಾಂಡಿನ ನೀಲ್ ವ್ಯಾಗ್ನರ್. ಆದರೆ ಇಬ್ಬರ ನಡುವೆ 52 ಅಂಕಗಳ ವ್ಯತ್ಯಾಸವಿರುವುದು ಗಮನಾರ್ಹ. ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಟಾಪ್-10 ಯಾದಿಗೆ ಮರಳಿದ್ದಾರೆ. ಹರಿಣಗಳ ನಾಡಿನ ಅನ್ರಿಚ್ ನೋರ್ಜೆ 34 ಸ್ಥಾನ ನೆಗೆದಿರುವುದು ವಿಶೇಷ (62).
ಹೋಲ್ಡರ್ ನಂ.1 ಆಲ್ರೌಂಡರ್
ಆಲ್ರೌಂಡರ್ಗಳ ಯಾದಿಯಲ್ಲಿ ಮೊದಲ 3 ಸ್ಥಾನದಲ್ಲಿರುವವರೆಂದರೆ ಜಾಸನ್ ಹೋಲ್ಡರ್ (473), ಜಡೇಜ (406) ಮತ್ತು ಬೆನ್ ಸ್ಟೋಕ್ಸ್ (396).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ