ಐಸಿಸಿ ಟೆಸ್ಟ್ ರ್ಯಾಂಕಿಂಗ್: ಎರಡನೇ ಸ್ಥಾನ ಕಾಯ್ದುಕೊಂಡ ಕೊಹ್ಲಿ
Team Udayavani, Aug 20, 2020, 10:08 PM IST
ದುಬಾೖ: ಐಸಿಸಿ ಬಿಡುಗಡೆ ಮಾಡಿದ ನೂತನ ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಯಾದಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಆದರೆ ಬೌಲಿಂಗ್ ರ್ಯಾಂಕಿಂಗ್ನಲ್ಲಿ ವೇಗಿ ಬುಮ್ರಾ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.
ವಿರಾಟ್ ಕೊಹ್ಲಿ 886 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಇಬ್ಬರು ಭಾರತೀಯ ಬ್ಯಾಟ್ಸ್ಮನ್ಗಳು ಟಾಪ್-10 ಯಾದಿಯಲ್ಲಿದ್ದಾರೆ. ಇವರೆಂದರೆ ಚೇತೇಶ್ವರ್ ಪೂಜಾರ (766 ಅಂಕ, 8ನೇ ಸ್ಥಾನ) ಮತ್ತು ಅಜಿಂಕ್ಯ ರಹಾನೆ (726 ಅಂಕ, 10ನೇ ಸ್ಥಾನ). ಆಸೀಸ್ನ ಸ್ಟೀವನ್ ಸ್ಮಿತ್ ಬ್ಯಾಟಿಂಗ್ ವಿಭಾಗದ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆರ್. ಅಶ್ವಿನ್ ಆಲ್ರೌಂಡರ್ ವಿಭಾಗದಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಪಾಕ್ ತಂಡದ ಬಾಬರ್ ಆಜಂ ಬ್ಯಾಟಿಂಗ್ ವಿಭಾಗದಲ್ಲಿ ವೃತ್ತಿಜೀವನದಲ್ಲೇ ಶ್ರೇಷ್ಠವೆನಿಸಿದ 5ನೇ ಶ್ರೇಯಾಂಕವನ್ನು ಮತ್ತೂಮ್ಮೆ ಪಡೆದಿದ್ದಾರೆ. ಇಂಗ್ಲೆಂಡ್ ತಂಡದ ಬ್ರಾಡ್ ಮತ್ತು ಆ್ಯಂಡರ್ಸನ್ ಬೌಲಿಂಗ್ ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸಿದ್ದಾರೆ.