ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ಟಾಪ್-10 ಸ್ಥಾನದಲ್ಲಿ ಭಾರತೀಯರು
Team Udayavani, May 25, 2022, 11:12 PM IST
ದುಬಾೖ: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಭಾರತದ ಆಟಗಾರರು ಟಾಪ್-10 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ; ಬೌಲಿಂಗ್ ವಿಭಾಗದಲ್ಲಿ ಆರ್. ಅಶ್ವಿನ್ ಹಾಗೂ ಆಲ್‌ರೌಂಡ್ ವಿಭಾಗದಲ್ಲಿ ರವೀಂದ್ರ ಜಡೇಜ ಅಗ್ರ ಹತ್ತರಲ್ಲಿ ಮುಂದುವರಿದಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯದ ಮಾರ್ನಸ್ ಲಬುಶೇನ್ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಮತ್ತು ಕೊಹ್ಲಿ ಕ್ರಮವಾಗಿ 9ನೇ ಹಾಗೂ 10ನೇ ಸ್ಥಾನದಲ್ಲಿದ್ದಾರೆ. ರ್‍ಯಾಂಕಿಂಗ್ ಪ್ರಗತಿ ಸಾಧಿಸಿದವರಲ್ಲಿ ಬಾಂಗ್ಲಾದೇಶದ ಲಿಟನ್ ದಾಸ್ (17) ಮತ್ತು ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ (21) ಪ್ರಮುಖರು.
ಬೌಲಿಂಗ್ ವಿಭಾಗದಲ್ಲಿ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ (901) ಅಗ್ರಸ್ಥಾನದಲ್ಲಿ ಮುಂದು ವರಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಆರ್. ಅಶ್ವಿನ್‌ಗಿಂತ 51 ಅಂಗಳ ಮುನ್ನಡೆ ಹೊಂದಿದ್ದಾರೆ. 3ನೇ ಸ್ಥಾನದಲ್ಲಿರುವವರು ಜಸ್‌ಪ್ರೀತ್ ಬುಮ್ರಾ.
ಆಲ್‌ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜ ಅಗ್ರಸ್ಥಾನದ ಗೌರವ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್
ಟಿ20 ಪಂದ್ಯ: ಪೊವೆಲ್ ಪರಾಕ್ರಮ; ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ವಿಜಯ
ವಿಂಬಲ್ಡನ್-2022: ರಿಬಾಕಿನಾ, ಗಾರಿನ್ ಕ್ವಾ.ಫೈನಲ್ ಪ್ರವೇಶ
ಬರ್ಮಿಂಗ್ಹ್ಯಾಮ್ ಟೆಸ್ಟ್: ಟಾರ್ಗೆಟ್ 378; ಗೆಲುವಿಗೆ ಪೈಪೋಟಿ
ಮಂಧನಾ-ಶಫಾಲಿ ಅಜೇಯ ಜೊತೆಯಾಟ: ಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ವನಿತೆಯರು