Udayavni Special

ಐಸಿಸಿ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ನಲ್ಲಿ ಚಾಂಪಿಯನ್ ಆದ ನ್ಯೂಜಿಲ್ಯಾಂಡ್‌


Team Udayavani, Jun 23, 2021, 11:15 PM IST

ಟೆಸ್ಟ್ ಚಾಂಪಿಯನ್ ಆದ ನ್ಯೂಜಿಲ್ಯಾಂಡ್‌

ಸೌತಾಂಪ್ಟನ್‌: ಕೊನೆಗೂ ಮೂರನೇ ಪ್ರಯತ್ನದಲ್ಲಿ ನ್ಯೂಜಿಲ್ಯಾಂಡ್‌ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕೇನ್‌ ವಿಲಿಯಮ್ಸನ್‌ ಪಡೆ ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿ ಚೊಚ್ಚಲ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಕಿರೀಟ ಏರಿಸಿಕೊಂಡು ಮೆರೆದಿದೆ. ಸಾಂಪ್ರದಾಯಿಕ ಕ್ರಿಕೆಟಿನ ಮೊದಲ ಸಾಮ್ರಾಟನೆನಿಸಿದೆ.

ಮೀಸಲು ದಿನಕ್ಕೆ ವಿಸ್ತರಿಸಲ್ಪಟ್ಟ ಫೈನಲ್‌ ಹಣಾಹಣಿಯಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ ಪತನ ಎನ್ನುವುದು ಸ್ಪಷ್ಟ ಫಲಿತಾಂಶಕ್ಕೆ ರಹದಾರಿ ಒದಗಿಸಿತು. ಇಲ್ಲವಾದರೆ ಎರಡೂ ತಂಡಗಳು ಒಟ್ಟಿಗೇ ಕಪ್‌ ಗೌರವ ಸಂಪಾದಿಸಬಹುದಿತ್ತು. ಆರನೇ ದಿನದ ಶುಭ್ರ ಹಾಗೂ ಸ್ವತ್ಛಂದ ವಾತಾವರಣದಲ್ಲಿ 139 ರನ್ನುಗಳ ಗುರಿ ಪಡೆದ ನ್ಯೂಜಿಲ್ಯಾಂಡ್‌ 2 ವಿಕೆಟಿಗೆ 140 ರನ್‌ ಬಾರಿಸಿ ನೂತನ ಇತಿಹಾಸ ನಿರ್ಮಿಸಿತು. ಆಗ ವಿಲಿಯಮ್ಸನ್‌ 52 ಮತ್ತು ಟೇಲರ್‌ 47 ರನ್‌ ಮಾಡಿ ಅಜೇಯರಾಗಿದ್ದರು.

 ಕೊಹ್ಲಿ, ಪೂಜಾರ ಫೇಲ್‌ :

ಬುಧವಾರದ ಮೊದಲ ಅವಧಿಯ ಆಟ ಕೈಲ್‌ ಜಾಮೀಸನ್‌ಗೆ ಮೀಸಲಾಯಿತು. ಕಿವೀಸ್‌ ವೇಗಿ ಎರಡು ದೊಡ್ಡ ಬೇಟೆಯ ಮೂಲಕ ಭಾರತದ ಮೇಲೆ ಒತ್ತಡ ಹೇರಿದರು. ನಾಯಕ ವಿರಾಟ್‌ ಕೊಹ್ಲಿ ಮತ್ತು ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಅವರನ್ನು “ಜಾಮಿ’ ಸತತ ಓವರ್‌ಗಳಲ್ಲಿ, ಒಂದೇ ರನ್‌ ಅಂತರದಲ್ಲಿ ಪೆವಿಲಿಯನ್ನಿಗೆ ಅಟ್ಟಿದರು. 2ಕ್ಕೆ 64ರಲ್ಲಿದ್ದ ಭಾರತ 72ಕ್ಕೆ ತಲಪುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು.

ಕೊಹ್ಲಿ ಗಳಿಕೆ ಕೇವಲ 13 ರನ್‌. ಎರಡೂ ಇನ್ನಿಂಗ್ಸ್‌ಗಳಲ್ಲಿ ಇವರ ವಿಕೆಟ್‌ ಜಾಮೀಸನ್‌ ಪಾಲಾಯಿತು. ಅಂತಿಮ ದಿನ ಕ್ರೀಸಿಗೆ ಬರುವ ಮುನ್ನ ಕೀಪರ್‌ ವಾಟಿÉಂಗ್‌ಗೆ ಶೇಕ್‌ಹ್ಯಾಂಡ್‌ ಮಾಡಿದ್ದ ಕೊಹ್ಲಿ, ತಮ್ಮ ಕ್ಯಾಚನ್ನೂ ವಾಟಿÉಂಗ್‌ಗೇ ನೀಡಿ ವಾಪಸಾದರು. 29 ಎಸೆತ ಎದುರಿಸಿದ ಕೊಹ್ಲಿ ಒಂದೂ ಬೌಂಡರಿ ಶಾಟ್‌ ಬಾರಿಸಲಿಲ್ಲ. ಪೂಜಾರ 80 ಎಸೆತ ನಿಭಾಯಿಸಿದರೂ ಮತ್ತೆ ನಿಧಾನ ಗತಿಯ ಬ್ಯಾಟಿಂಗ್‌ಗೆ ಮೊರೆಹೋದರು. 15 ರನ್ನಿಗೆ 80 ಎಸೆತ ವ್ಯಯಿಸಿದರು. ಹೊಡೆದದ್ದು 2 ಫೋರ್‌.

ಉಪನಾಯಕ ಅಜಿಂಕ್ಯ ರಹಾನೆ ಕೂಡ ರಕ್ಷಣೆಗೆ ನಿಲ್ಲುವಲ್ಲಿ ವಿಫ‌ಲರಾದರು. 40 ಎಸೆತಗಳಿಂದ 15 ರನ್‌ ಮಾಡಿದ ಅವರು ಬೌಲ್ಟ್ ಬಲೆಗೆ ಬಿದ್ದರು. ಆಗ ಭರ್ತಿ 50 ಓವರ್‌ಗಳ ಆಟ ಮುಗಿದಿತ್ತು; ಸ್ಕೋರ್‌ 109 ರನ್‌ ಆಗಿತ್ತು. ಲಂಚ್‌ ವೇಳೆ ಭಾರತ 130ಕ್ಕೆ 5 ವಿಕೆಟ್‌ ಕಳೆದುಕೊಂಡು ಅಪಾಯದ ಸುಳಿಗೆ ಸಿಲುಕಿತ್ತು.

ಆಲ್‌ರೌಂಡರ್‌ ರಿಷಭ್‌ ಪಂತ್‌ ಮತ್ತು ಆಲ್‌ರೌಂಡರ್‌ ರವೀಂದ್ರ ಜಡೇಜ ಒಂದಿಷ್ಟು ಭರವಸೆ ಮೂಡಿಸಿದರು. ಭಾರತ ಕನಿಷ್ಠ 200 ರನ್ನುಗಳ ಗಡಿಯನ್ನಾದರೂ ತಲುಪೀತು ಎಂಬ ನಿರೀಕ್ಷೆ ಹುಟ್ಟುಹಾಕಿದರು. ಪಂತ್‌ ಎಂದಿನ ಬೀಸು ಹೊಡೆತಗಳಿಗೆ ಬದಲಾಗಿ ಕ್ರೀಸ್‌ ಆಕ್ರಮಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಇದರಲ್ಲಿ ಬಹುತೇಕ ಯಶಸ್ವಿಯೂ ಆದರು. 88 ಎಸೆತಗಳಿಂದ 41 ರನ್‌ (4 ಬೌಂಡರಿ) ಮಾಡಿದ ಪಂತ್‌ ಅವರೇ ಭಾರತದ ಟಾಪ್‌ ಸ್ಕೋರರ್‌ ಆಗಿದ್ದರು. ಇಂಥದೊಂದು ಮಹತ್ವದ ಪಂದ್ಯದಲ್ಲಿ ಭಾರತದ ಸರದಿಯಲ್ಲಿ ಒಂದೂ ಅರ್ಧ ಶತಕ ದಾಖಲಾಗದಿದ್ದುದೊಂದು ದುರಂತ.

ಸೌಥಿ 4, ಬೌಲ್ಟ್ 3, ಜಾಮೀಸನ್‌ 2 ಹಾಗೂ ವ್ಯಾಗ್ನರ್‌ ಒಂದು ವಿಕೆಟ್‌ ಕೆಡವಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-217 ಮತ್ತು 170. ನ್ಯೂಜಿಲ್ಯಾಂಡ್‌-249 ಮತ್ತು 2 ವಿಕೆಟಿಗೆ 140

ಟಾಪ್ ನ್ಯೂಸ್

ft44

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

Why is there a COVID-19 spike in Kerala?

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

fgdfgergr

ಕಿರುತೆರೆ ನಟನಿಂದ ಯುವತಿಗೆ ಮೋಸ: ಕೈಗೆ ಮಗು ಕೊಟ್ಟು ಪರಾರಿಯಾದ ‘ವಿಲನ್’

3ನೇ ಅಲೆ ಭೀತಿ: ಆಗಸ್ಟ್ 31ರವರೆಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧ ವಿಸ್ತರಣೆ

3ನೇ ಅಲೆ ಭೀತಿ: ಆಗಸ್ಟ್ 31ರವರೆಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧ ವಿಸ್ತರಣೆ

ಜಾಗತಿಕ ಷೇರುಪೇಟೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಇಳಿಕೆ

ಜಾಗತಿಕ ಷೇರುಪೇಟೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಇಳಿಕೆ

Udayavani Gouribidanur News Chikkaballapura

ತಾಲ್ಲೂಕು ಮಟ್ಟದ ಅಧಿಕಾರಿಗಳ ದಲಿತ ವಿರೋಧಿ ಧೋರಣೆ : ದಲಿತ ಮುಖಂಡರ ಆಕ್ರೋಶ

fgrww

‘ಶಿಲ್ಪಾ ಶೆಟ್ಟಿಗೆ ಮಾನನಷ್ಟವಾಗಲು ಕಾರಣವೇನು?: ನಟಿ ಪರ ವಕೀಲರಿಗೆ ಪ್ರಶ್ನೆಗಳ ಸುರಿಮಳೆ  ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತಕ್ಕೆ ಮತ್ತೊಂದು ಪದಕ ಖಚಿತ: ಸೆಮಿ ಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು

ಭಾರತಕ್ಕೆ ಮತ್ತೊಂದು ಪದಕದ ಭರವಸೆ: ಸೆಮಿ ಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು

ಸಂಕಷ್ಟ ತಂದಿತ್ತ ಲಂಕಾ ಸರಣಿ: ಕೃನಾಲ್ ಪಾಂಡ್ಯ ಬಳಿಕ ಮತ್ತಿಬ್ಬರಿಗೆ ಕೋವಿಡ್ ಸೋಂಕು ದೃಢ

ಸಂಕಷ್ಟ ತಂದಿತ್ತ ಲಂಕಾ ಸರಣಿ: ಕೃನಾಲ್ ಪಾಂಡ್ಯ ಬಳಿಕ ಮತ್ತಿಬ್ಬರಿಗೆ ಕೋವಿಡ್ ಸೋಂಕು ದೃಢ

ಹಾಕಿ: ಗೆಲ್ಲಲೇಬೇಕಾದ ಪಂದ್ಯದಲ್ಲಿ ಗೆದ್ದು ಬೀಗಿದ ವನಿತೆಯರು, ಒಲಿಂಪಿಕ್ ಕನಸು ಜೀವಂತ

ಹಾಕಿ: ಗೆಲ್ಲಲೇಬೇಕಾದ ಪಂದ್ಯದಲ್ಲಿ ಗೆದ್ದು ಬೀಗಿದ ವನಿತೆಯರು, ಒಲಿಂಪಿಕ್ ಕನಸು ಜೀವಂತ

ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿದ ದೀಪಿಕಾ ಕುಮಾರಿಗೆ ಸೋಲು!

ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿದ ದೀಪಿಕಾ ಕುಮಾರಿಗೆ ಸೋಲು!

lovlina borgohain

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಖಚಿತ: ಸೆಮಿ ಫೈನಲ್ ಗೆ ಲವ್ಲೀನಾ

MUST WATCH

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

ಹೊಸ ಸೇರ್ಪಡೆ

ft44

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

ಕೃಷಿಹೊಂಡ, ಗೋಕಟ್ಟೆಯಿಂದ ನೀರು ಸಂರಕ್ಷಣೆ

ಕೃಷಿಹೊಂಡ, ಗೋಕಟ್ಟೆಯಿಂದ ನೀರು ಸಂರಕ್ಷಣೆ

ಕೃಷ್ಣೆ ಅಚ್ಚಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ; ಜಲಾಶಯದಿಂದ 4 ಲಕ್ಷ ಕ್ಯೂಸೆಕ್‌ ನೀರು

ಕೃಷ್ಣೆ ಅಚ್ಚಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ; ಜಲಾಶಯದಿಂದ 4 ಲಕ್ಷ ಕ್ಯೂಸೆಕ್‌ ನೀರು

Why is there a COVID-19 spike in Kerala?

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

ಮೌಲಾನಾ ಆಜಾದ್‌ ಶಾಲೆ ನಿರ್ಮಾಣಕ್ಕೆ ಸರ್ಕಾರ ಸಮ್ಮತಿ

ಮೌಲಾನಾ ಆಜಾದ್‌ ಶಾಲೆ ನಿರ್ಮಾಣಕ್ಕೆ ಸರ್ಕಾರ ಸಮ್ಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.