ಐಪಿಎಲ್ ಮೇಲೆ ಹತೋಟಿಗೆ ಐಸಿಸಿ ಯತ್ನ?

ದೇಶಿ ಕ್ರಿಕೆಟ್ ಲೀಗ್‌ ನಡೆಸಲು ಇನ್ನು ಐಸಿಸಿ ಅನುಮತಿ ಅಗತ್ಯ

Team Udayavani, Aug 12, 2019, 5:24 AM IST

ಹೊಸದಿಲ್ಲಿ: ಬಿಸಿಸಿಐ ಮತ್ತು ಐಸಿಸಿ ನಡುವೆ ಇನ್ನೊಂದು ಸುತ್ತಿನ ತಿಕ್ಕಾಟಕ್ಕೆ ವೇದಿಕೆ ಸಜ್ಜಾಗಿದೆ. ಟಿ20 ಸೇರಿದಂತೆ ಇನ್ನಿತರ ಕ್ರಿಕೆಟ್ ಪಂದ್ಯಾವಳಿ ನಡೆಸಲು, ಇದರಲ್ಲಿ ಪಾಲ್ಗೊಳ್ಳಲು ಆಟಗಾರರಿಗೆ ಅನುಮತಿ ನೀಡಲು ಬಿಸಿಸಿಐನಂತಹ ದೇಶಿ ಕ್ರಿಕೆಟ್ ಸಂಸ್ಥೆ ಗಳು ಇನ್ನು ಐಸಿಸಿ ಒಪ್ಪಿಗೆ ಪಡೆಯಬೇಕೆನ್ನುವ ನಿಯಮವೇ ಇದಕ್ಕೆ ಕಾರಣ.

ಇದು ಜಾರಿಗೆ ಬಂದರೆ ಬಿಸಿಸಿಐ ನಡೆಸುವ ಐಪಿಎಲ್, ಇಂಗ್ಲೆಂಡ್‌ ನಡೆಸುವ ದಿ ಹಂಡ್ರೆಡ್‌, ಆಸ್ಟ್ರೇಲಿಯದ ಬಿಗ್‌ ಬಾಶ್‌ ಕೂಟಗಳ ಮೇಲೆ ಹೊಡೆತ ಬೀಳಲಿದೆ. ಈ ಕೂಟಗಳಲ್ಲಿ ಬೇರೆ ದೇಶಗಳ ಕ್ರಿಕೆಟಿಗರಿಗೆ ಮೊದಲಿನಂತೆ ಸುಲಭವಾಗಿರುವುದಿಲ್ಲ.

ಏನಿದು ವಿವಾದ?
ಐಸಿಸಿ ಕಾರ್ಯಕಾರಿ ಸಮಿತಿ ಮಾರ್ಗ ದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದೆ. ಆಪ್ರಕಾರ ತನ್ನ ದೇಶ ಆಯೋಜಿಸುವ ಐಪಿಎಲ್, ಬಿಗ್‌ಬಾಶ್‌ ಮಾದರಿಯ ಟಿ20 ಕ್ರೀಡಾಕೂಟಗಳಲ್ಲಿ ಆಡುವ ಅಂತಾರಾಷ್ಟ್ರೀಯ ಕ್ರಿಕೆಟಿಗ, ಇನ್ನೊಂದು ದೇಶದ ಟಿ20 ಲೀಗ್‌ನಲ್ಲಿ ಮಾತ್ರ ಆಡಬಹುದು! ಆದ್ದರಿಂದ ಬಿಸಿಸಿಐ ಮತ್ತಿತರ ದೇಶಗಳು ತಾವು ನಡೆಸುವ ಟಿ20 ಲೀಗ್‌, ರಣಜಿಯಂತಹ ಇನ್ನಿತರ ದೇಶಿ ಕ್ರೀಡಾಕೂಟದ ವೇಳಾಪಟ್ಟಿಯನ್ನು ಐಸಿಸಿಗೆ ಮೊದಲೇ ನೀಡಿ ಅನುಮತಿ ಪಡೆಯಬೇಕು. ಜತೆಗೆ ಆಟಗಾರರು ಕೂಟದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವುದಕ್ಕೂ ಐಸಿಸಿಯಿಂದ ಅನುಮೋದನೆ ಪಡೆಯಬೇಕು.

ಇದು ಆಯಾದೇಶಗಳ ಸ್ವಾಯುತ್ತತೆಯನ್ನು ಐಸಿಸಿ ಉಲ್ಲಂಘಿಸಿದಂತೆ ಆಗಿದೆ. ಐಸಿಸಿಯ ಒಪ್ಪಿಗೆ ಪಡೆದು ದೇಶಿ ಕ್ರೀಡಾಕೂಟ ನಡೆಸಬೇಕಾದ ಅಗತ್ಯ ಬಿಸಿಸಿಐಗಿಲ್ಲ. ಆಸ್ಟ್ರೇಲಿಯ, ಇಂಗ್ಲೆಂಡ್‌ ಕ್ರಿಕೆಟ್ ಸಂಸ್ಥೆಗಳು ಕೂಡ ಇದನ್ನು ವಿರೋಧಿಸಿವೆ ಎಂದು ಮೂಲಗಳು ಪ್ರತಿಕ್ರಿಯಿಸಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ