
ಟೆಸ್ಟ್ ಪಂದ್ಯ: ರಜತ್ ಪಾಟೀದಾರ್ ಶತಕ: ಗೆಲುವಿನತ್ತ ಭಾರತ “ಎ’
Team Udayavani, Sep 17, 2022, 11:50 PM IST

ಬೆಂಗಳೂರು: “ಎ’ ತಂಡಗಳ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನ ಸಾಧ್ಯತೆ ಹೆಚ್ಚಿದೆ. 416 ರನ್ನುಗಳ ಗುರಿ ಪಡೆದಿರುವ ನ್ಯೂಜಿಲ್ಯಾಂಡ್ “ಎ’, ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 20 ರನ್ ಮಾಡಿದೆ.
ರಜತ್ ಪಾಟೀದಾರ್ ಅವರ ಅಜೇಯ ಶತಕ ಭಾರತ “ಎ’ ತಂಡದ ದ್ವಿತೀಯ ಸರದಿಯ ಆಕರ್ಷಣೆ ಆಗಿತ್ತು. ಅವರು 135 ಎಸೆತಗಳಿಂದ ಅಜೇಯ 109 ರನ್ ಬಾರಿಸಿದರು (13 ಬೌಂಡರಿ, 2 ಸಿಕ್ಸರ್). ಇದು ಪ್ರಸಕ್ತ ಸರಣಿಯಲ್ಲಿ ಪಾಟೀದಾರ್ ಬಾರಿಸಿದ 2ನೇ ಸೆಂಚುರಿ. ಇದರೊಂದಿಗೆ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಮತ್ತು ಪಾಟೀದಾರ್ ಅವರ ನಂಟು ಇನ್ನಷ್ಟು ಬಿಗಿಗೊಂಡಿತು. ಕಳೆದ 3 ತಿಂಗಳ ಅವಧಿಯಲ್ಲಿ ಅವರು ಈ ಅಂಗಳದಲ್ಲಿ ಬಾರಿಸಿದ 3ನೇ ಶತಕ ಇದಾಗಿದೆ. ರಣಜಿ ಟ್ರೋಫಿ ಫೈನಲ್ ಹಾಗೂ ಪ್ರಸಕ್ತ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಟೀದರ್ ಸೆಂಚುರಿ ಸಿಡಿಸಿದ್ದರು.
ಆದರೆ ಋತುರಾಜ್ ಗಾಯಕ್ವಾಡ್ ಕೇವಲ 6 ರನ್ನಿನಿಂದ ಸತತ 2 ಶತಕಗಳ ಅವಕಾಶ ಕಳೆದುಕೊಂಡರು (94). ಮೊದಲ ಇನ್ನಿಂಗ್ಸ್‌ನಲ್ಲಿ ಗಾಯಕ್ವಾಡ್ 108 ರನ್ ಹೊಡೆದಿದ್ದರು.
ಭಾರತದ ಸರದಿಯಲ್ಲಿ ಮಿಂಚಿದ ಮತ್ತಿಬ್ಬರೆಂದರೆ ಸಫìರಾಜ್ ಖಾನ್ (63) ಮತ್ತು ನಾಯಕ ಪ್ರಿಯಾಂಕ್ ಪಾಂಚಾಲ್ (62). ನ್ಯೂಜಿಲ್ಯಾಂಡ್ 8 ಮಂದಿಯನ್ನು ಬೌಲಿಂಗ್‌ಗೆ ಇಳಿಸಿತಾದರೂ ಪ್ರಯೋಜನವಾಗಲಿಲ್ಲ. ಭಾರತ “ಎ’ 7ಕ್ಕೆ 359 ರನ್ ಮಾಡಿ ಡಿಕ್ಲೇರ್ ಮಾಡಿತು.
ಸಂಕ್ಷಿಪ್ತ ಸ್ಕೋರ್: ಭಾರತ “ಎ’-293 ಮತ್ತು 7 ವಿಕೆಟಿಗೆ 359 ಡಿಕ್ಲೇರ್ (ಪಾಟೀದಾರ್ 109, ಗಾಯಕ್ವಾಡ್ 94, ಸಫìರಾಜ್ 63, ಪಾಂಚಾಲ್ 62, ರಚಿನ್ ರವೀಂದ್ರ 65ಕ್ಕೆ 3). ನ್ಯೂಜಿಲ್ಯಾಂಡ್ “ಎ’-237 ಮತ್ತು ಒಂದು ವಿಕೆಟಿಗೆ 20.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
