ಕ್ರೀಡಾಪಟುಗಳ ನೋವಿಗೆ ಸ್ಪಂದಿಸಿದ ಕ್ರೀಡಾ ಸಚಿವರು


Team Udayavani, Feb 1, 2017, 3:45 AM IST

31-SPO-5.jpg

ಬೆಂಗಳೂರು: ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಗೆದ್ದಿರುವ ರಾಜ್ಯದ ಕ್ರೀಡಾಪಟುಗಳಿಗೊಂದು ಸಿಹಿ ಸುದ್ದಿ. ಕಳೆದ 3 ವರ್ಷಗಳಿಂದ ಸಿಗದಿರುವ ನಗದು ಪುರಸ್ಕಾರ ಇನ್ನೆರಡು ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ.

“ಪದಕ ಗೆದ್ದರೂ ರಾಜ್ಯದ ಕ್ರೀಡಾಪಟುಗಳಿಗೆ ಸಿಕ್ಕಿಲ್ಲ ಕಾಸು!’ ಎನ್ನುವ ಶೀರ್ಷಿಕೆಯಡಿ ಉದಯವಾಣಿ ಪ್ರಕಟಿಸಿದ್ದ ವಿಶೇಷ ವರದಿಗೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಕ್ಷಿಪ್ರಗತಿಯಲ್ಲಿ ಸ್ಪಂದಿಸಿದ್ದು, ಹಣ ಬಿಡುಗಡೆ ಕುರಿತಂತೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್‌.ಎಸ್‌. ಪ್ರಸಾದ್‌ ಜತೆಗೆ ತುರ್ತು ಸಭೆ ನಡೆಸಿದ್ದಾರೆ.

ಕ್ರೀಡಾಪಟುಗಳಿಗೆ ಬಾಕಿ ಉಳಿದಿರುವ ಕೋಟ್ಯಂತರ ರೂ. ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಸಚಿವರು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿರುವ ಐ.ಎನ್‌.ಎಸ್‌. ಪ್ರಸಾದ್‌ ಅವರು, ಕ್ರೀಡಾಪಟುಗಳಿಗೆ ನೀಡಬೇಕಿರುವ ಹಣವನ್ನು ಮುಂದಿನ ಎರಡು ತಿಂಗಳೊಳಗೆ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.

ಕ್ರೀಡಾಳುಗಳ ಪಟ್ಟಿ ಹಣಕಾಸು ಇಲಾಖೆಗೆ
ಈ ಹಿನ್ನೆಲೆಯಲ್ಲಿ ಪದಕ ವಿಜೇತ ಕ್ರೀಡಾಪಟುಗಳ ಪಟ್ಟಿಯನ್ನು ಎರಡು ದಿನಗಳಲ್ಲಿ ಹಣಕಾಸು ಇಲಾಖೆಗೆ ಕ್ರೀಡಾ ಇಲಾಖೆ ಕಳುಹಿಸಿ ಕೊಡಲಿದೆ. ಪಟ್ಟಿಯಲ್ಲಿರುವ ಅರ್ಹ ಕ್ರೀಡಾಪಟುಗಳ ಸಾಧನೆಯನ್ನು ಹಣಕಾಸು ಇಲಾಖೆ ಪರಿಶೀಲನೆ ನಡೆಸಲಿದೆ. ಬಳಿಕ ಫೆಬ್ರವರಿಯಲ್ಲಿ ಅನುದಾನ ನೀಡುವ ಕುರಿತು ಹಣಕಾಸು ಇಲಾಖೆ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉದಯವಾಣಿಗೆ ಮಾಹಿತಿ ನೀಡಿದ್ದು, ಮುಂದಿನ ಎರಡು ತಿಂಗಳ ಒಳಗೆ ಹಣ ಬಿಡುಗಡೆಯಾಗುವುದು ಖಚಿತ ಎಂದಿದ್ದಾರೆ.

ಬಾಕಿ ಇರುವುದು 14.50 ಕೋಟಿ ರೂ.
2014ನೇ ಸಾಲಿನಿಂದ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಕ್ರೀಡಾ ಇಲಾಖೆ ಯಿಂದ ಸಿಕ್ಕಿರಲಿಲ್ಲ. ಅಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಇಲಾಖೆ ಬಳಿ ಅನುದಾನ ಇರಲಿಲ್ಲ. ಈ ಬಗ್ಗೆ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಕಳೆದ ವರ್ಷವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ್ದರು. ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು. ಆದರೆ ಅದು ಪ್ರಗತಿಯಲ್ಲಿ ಇರಲಿಲ್ಲ. ಇದರಿಂದ ಸಾಕಷ್ಟು ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಡಕಾಗಿತ್ತು.

ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜತೆ ತುರ್ತು ಸಭೆ ನಡೆಸಿ ಕ್ರೀಡಾಪಟುಗಳಿಗೆ ನೀಡಲು ಬಾಕಿ ಇರುವ 14.50 ಕೋಟಿ ರೂ. ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ.  ಅವರೂ ಮನವಿಗೆ ಸ್ಪಂದಿಸಿದ್ದು, ಕ್ರೀಡಾ ಇಲಾಖೆಯಿಂದ ಪದಕ ವಿಜೇತ ಅಥ್ಲೀಟ್‌ಗಳ ಪಟ್ಟಿಯನ್ನು ಎರಡು ದಿನಗಳ ಒಳಗಾಗಿ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ. ಮುಂದಿನ ಎರಡು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಯಲಿದೆ.
ಪ್ರಮೋದ್‌ ಮಧ್ವರಾಜ್‌, ಯುವಜನ ಮತ್ತು ಕ್ರೀಡಾ ಸಚಿವ

ಟಾಪ್ ನ್ಯೂಸ್

cm-bommai

ಬೆಂಗಳೂರು; ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶವಿಲ್ಲ : ಸಿಎಂ ಬೊಮ್ಮಾಯಿ

1-ddsad

ಮಳೆಯ ಆರ್ಭಟ : ತೀರ್ಥಹಳ್ಳಿ ಗದ್ದೆಯ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು

cm-@-3

ಸಿಎಂ ದಾವೋಸ್ ಪ್ರವಾಸ ಡೌಟು?; ಇಂದು ದಿಲ್ಲಿಗೆ ಹಠಾತ್ ಭೇಟಿ!

ಭಾರತದಲ್ಲಿ 24 ಗಂಟೆಯಲ್ಲಿ 2,259 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ 15,044ಕ್ಕೆ ಇಳಿಕೆ

ಭಾರತದಲ್ಲಿ 24 ಗಂಟೆಯಲ್ಲಿ 2,259 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ 15,044ಕ್ಕೆ ಇಳಿಕೆ

shobha-karandlaje

ಇಡೀ ದೇಶದಲ್ಲಿ ಕೃಷಿ ಭೂಮಿ ಸೈಟ್ ಗಳಾಗುತ್ತಿದೆ : ಸಚಿವೆ ಶೋಭಾ ಕರಂದ್ಲಾಜೆ ಆತಂಕ

1-adasda

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ : ಮೂರೂವರೆ ಗಂಟೆಗಳ ಹುಡುಕಾಟ

thumb 6

ಎಲ್ಲಾದರು ಇರು…ಕೆನಡಾ ಸಂಸತ್ ನಲ್ಲಿ ಕನ್ನಡ ಕಲರವ; ವಿಡಿಯೋ ವೈರಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಪ್ರೊ ಲೀಗ್‌ ಹಾಕಿ : ಅಮಿತ್‌ ರೋಹಿದಾಸ್‌ ನಾಯಕ

ಪ್ರೊ ಲೀಗ್‌ ಹಾಕಿ : ಅಮಿತ್‌ ರೋಹಿದಾಸ್‌ ನಾಯಕ

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಮಾಳವಿಕಾಗೆ ಸೋಲು

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಮಾಳವಿಕಾಗೆ ಸೋಲು

ಜೂ. ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

ಜೂ. ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

ಮೆಕಲಮ್‌ಗೆ ಸೋಲಿನ ವಿದಾಯ

ಮೆಕಲಮ್‌ಗೆ ಸೋಲಿನ ವಿದಾಯ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

rain

ಕೊಪ್ಪಳ, ಗದಗದಲ್ಲಿ ನಿರಂತರ ಮಳೆ: ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

cm-bommai

ಬೆಂಗಳೂರು; ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶವಿಲ್ಲ : ಸಿಎಂ ಬೊಮ್ಮಾಯಿ

1-ddsad

ಮಳೆಯ ಆರ್ಭಟ : ತೀರ್ಥಹಳ್ಳಿ ಗದ್ದೆಯ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು

9

ಕನ್ನಡ ಸಾಹಿತ್ಯ ಪರಿಷತ್‌ ಸಂಸ್ಥಾಪನೆ ದಿನಾಚರಣೆ

charand

ಕಾರ್ಕಳ: ಮಳೆಗೆ ಕೃತಕ ನೆರೆ ಸೃಷ್ಟಿ; ಮನೆಗೆ ನುಗ್ಗಿದ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.