ನಾಲ್ಕನೇ ಟೆಸ್ಟ್ ಪಂದ್ಯ: ಆಸ್ಟ್ರೇಲಿಯಾ 369ಕ್ಕೆ ಆಲೌಟ್; ಭಾರತಕ್ಕೆ ಆರಂಭಿಕ ಆಘಾತ
Team Udayavani, Jan 16, 2021, 8:52 AM IST
ಬ್ರಿಸ್ಬೇನ್: ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ 369 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.
ನಿನ್ನೆ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಇಂದು ಕೂಡ ಉತ್ತಮ ಆಟ ಪ್ರದರ್ಶಿಸಿತ್ತು. ನಾಯಕ ಟಿಮ್ ಪೆನ್ 50 ರನ್ ಗಳಿಸಿದರೆ, ಕೆಮರೂನ್ ಗ್ರೀನ್ 47, ನಾಥನ್ ಲಯೋನ್ 22, ಸ್ಟಾರ್ಕ್ 22 ರನ್ ಗಳಿಸಿದರು.
ಭಾರತದ ಪರ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 3 ವಿಕೆಟ್ ಪಡೆದರು. ಟಿ. ನಟರಾಜನ್ ಕೂಡ 3 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ಚಿನ್ನದ ಸರ ಕಳ್ಳತನವಾಗಿದೆ ಎಂದ ಅಜ್ಜಿ:ಪೊಲೀಸರ ತನಿಖೆಯ ವೇಳೆ ಬಯಲಾಯ್ತು ಬೆಚ್ಚಿ ಬೀಳುವ ರಹಸ್ಯ
ವಿರಾಮದ ನಂತರ ಆಡಲಿಳಿದ ಭಾರತಕ್ಕೆ ಆರಂಭದಲ್ಲೆ ಆಘಾತ ಎದುರಾಗಿದೆ. 1 ಬೌಂಡರಿ ಸಿಡಿಸಿ ಲಯ ಕಂಡುಕೊಳ್ಳುವ ಮೊದಲೇ ಶುಭ್ ಮನ್ ಗಿಲ್ ಸ್ಟೀವನ್ ಸ್ಮಿತ್ ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ. ರೋಹಿತ್ ಶರ್ಮಾ ಹಾಗೂ ಚೇತೇಶ್ವರ ಪೂಜಾರ ಕ್ರೀಸ್ ನಲ್ಲಿದ್ದಾರೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಲಸಿಕೆ ಆಂದೋಲನಕ್ಕೆ ಮೋದಿ ಚಾಲನೆ:10:30ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್.ಶೆಟ್ಟಿ
30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ಹೊಸ ಸೇರ್ಪಡೆ
ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣ, ನಿರಂತರ ಧನಾಗಮನ: ಹೇಗಿದೆ ಇಂದಿನ ಗ್ರಹಬಲ ?
ಸಿಇಟಿಗೆ ಪಠ್ಯಕಡಿತ, ನೀಟ್ಗೇಕಿಲ್ಲ? ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಆತಂಕ
ದಾವೂದ್ ಆಸ್ತಿ ಜಪ್ತಿಗೆ ಆದೇಶ : ಎಫ್ಎಟಿಎಫ್ ಕಪ್ಪುಪಟ್ಟಿಗೆ ತಪ್ಪಿಸಿಕೊಳ್ಳಲು ಪಾಕ್ ಉಪಾಯ
ಸಂಗೀತ ಇಲ್ಲದ ಸಿನೆಮಾ ಊಹಿಸಲಸಾಧ್ಯ
ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ಗೆ 1 ವರ್ಷ ಜೈಲು ಶಿಕ್ಷೆ