ಲಂಕೆ ಎದುರಿನ ಮೊದಲ ಟೆಸ್ಟ್ ಮೊದಲ ದಿನ: ಭಾರತ 17/3
Team Udayavani, Nov 16, 2017, 7:36 PM IST
ಕೋಲ್ಕತ : ಮಳೆಯಿಂದ ಬಾಧಿತವಾಗಿ ಕೇವಲ 11.5 ಓವರ್ಗಳ ಎಸೆತವನ್ನು ಕಂಡ ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿನ ಪ್ರವಾಸಿ ಲಂಕೆಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಆಟದಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ ಕೇವಲ 17 ರನ್ ಬಾರಿಸಿ ಸಂಕಷ್ಟಕ್ಕೆ ಬಿತ್ತು.
ಭಾರತದ ಬ್ಯಾಟ್ಸಮನ್ಗಳಾದ ಲೋಕೇಶ್ ರಾಹುಲ್ 1 ಬಾಲ್ ಎದುರಿಸಿ ಶೂನ್ಯಕ್ಕೆ ಔಟಾದರು. ಶಿಖರ್ ಧವನ್ 11 ಬಾಲ್ ಎದುರಿಸಿ 8 ರನ್ ಗಳಿಸಿ ಔಟಾದರು.
ನಾಯಕ ವಿರಾಟ್ ಕೊಹ್ಲಿ 11 ಬಾಲ್ ಎದುರಿಸಿ ಶೂನ್ಯಕ್ಕೆ ಮರಳಿದರು.
ಈಗ ಕ್ರೀಸಿನಲ್ಲಿ ಚೇತೇಶ್ವರ್ ಪೂಜಾರ 8 ರನ್ ಗಳೊಂದಿಗೆ ಅಜಿಂಕ್ಯ ರಹಾನೆ 0 ರನ್ ನೊಂದಿಗೆ ಉಳಿದಿದ್ದಾರೆ.
ಭಾರತದ ಎಲ್ಲ ಮೂರು ವಿಕೆಟ್ಗಳನ್ನು ಸುರಂಗಾ ಲಕ್ಮಲ್ ಕಿತ್ತುಕೊಂಡರು.