ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಅಭ್ಯಾಸ ಪಂದ್ಯದಲ್ಲಿ 9 ವಿಕೆಟ್‌ ಜಯಭೇರಿ; ಪಾಕ್‌ ಎದುರಿನ ಪಂದ್ಯಕ್ಕೆ ಟೀಮ್‌ ಇಂಡಿಯಾ ಭರ್ಜರಿ ತಾಲೀಮು

Team Udayavani, Oct 20, 2021, 11:10 PM IST

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ದುಬಾೖ: ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಜಯಭೇರಿ ಮೊಳಗಿಸಿದ ಭಾರತ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಭರ್ಜರಿ ತಾಲೀಮು ನಡೆಸಿದೆ. ರವಿವಾರ ನಡೆಯುವ ಪಾಕಿಸ್ಥಾನ ವಿರುದ್ಧದ ಮುಖಾಮುಖಿಗೆ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಬುಧವಾರದ ದ್ವಿತೀಯ ಹಾಗೂ ಕೊನೆಯ ಅಭ್ಯಾಸ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಆರನ್‌ ಫಿಂಚ್‌ ಪಡೆಗೆ ಪಂಚ್‌ ಕೊಟ್ಟಿತು. ಆಸ್ಟ್ರೇಲಿಯ 5 ವಿಕೆಟಿಗೆ 152 ರನ್‌ ಮಾಡಿ ಸವಾಲೊಡ್ಡಿದರೆ, ಭಾರತ 17.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ ಗುರಿ ಮುಟ್ಟಿತು. ಮೊದಲ ಪ್ರ್ಯಾಕ್ಟೀಸ್‌ ಗೇಮ್‌ನಲ್ಲಿ ಟೀಮ್‌ ಇಂಡಿಯಾ ಇಂಗ್ಲೆಂಡನ್ನು ಪರಾಭವಗೊಳಿಸಿತ್ತು.

ರೋಹಿತ್‌ ಕಪ್ತಾನನ ಆಟ
ಇಂಗ್ಲೆಂಡ್‌ ವಿರುದ್ಧ ಸಿಡಿದು ನಿಂತ ಕೆ.ಎಲ್‌. ರಾಹುಲ್‌ ಆಸ್ಟ್ರೇಲಿಯದ ಬೌಲರ್‌ಗಳ ಮೇಲೂ ದಂಡೆತ್ತಿ ಹೋದರು. ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ ರೋಹಿತ್‌ ಶರ್ಮ ಕಪ್ತಾನನ ಆಟವಾಡಿದರು. ಸೂರ್ಯಕುಮಾರ್‌ ಯಾದವ್‌ ಕೂಡ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿ ಸಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ ಸಿಕ್ಸರ್‌ ಸಿಡಿಸಿ ಭಾರತದ ಗೆಲುವನ್ನು ಸಾರಿದರು.

ರೋಹಿತ್‌ ಶರ್ಮ ಸೊಗಸಾದ ಬ್ಯಾಟಿಂಗ್‌ ಮೂಲಕ ಪಂದ್ಯದಲ್ಲೇ ಸರ್ವಾಧಿಕ 60 ರನ್‌ ಮಾಡಿ ಚುಟುಕು ವಿಶ್ವ ಸಮರಕ್ಕೆ ಸಜ್ಜಾಗಿರುವುದನ್ನು ಸಾರಿದರು. 41 ಎಸೆತಗಳ ಈ ಆಟದ ವೇಳೆ 5 ಬೌಂಡರಿ, 3 ಸಿಕ್ಸರ್‌ ಸಿಡಿಯಲ್ಪಟ್ಟಿತು. ರಾಹುಲ್‌ ಕೊಡುಗೆ 31 ಎಸೆತಗಳಿಂದ 39 ರನ್‌. ಸಿಡಿಸಿದ್ದು 2 ಫೋರ್‌, 3 ಸಿಕ್ಸರ್‌. ರೋಹಿತ್‌-ರಾಹುಲ್‌ 9.2 ಓವರ್‌ ಜತೆಯಾಟ ನಿಭಾಯಿಸಿ 68 ರನ್‌ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರು. ಸೂರ್ಯಕುಮಾರ್‌ 27 ಎಸೆತಗಳಿಂದ ಅಜೇಯ 38 ರನ್‌ ಹೊಡೆದರು (5 ಬೌಂಡರಿ, 1 ಸಿಕ್ಸರ್‌).

ಆಸ್ಟ್ರೇಲಿಯ ಕಡೆಯಿಂದ 8 ಮಂದಿ ಬೌಲಿಂಗ್‌ ದಾಳಿಗಿಳಿದರೂ ಯಶಸ್ಸು ಗಳಿಸಿದವರು ಆ್ಯಶನ್‌ ಅಗರ್‌ ಮಾತ್ರ. ಸ್ಟಾರ್ಕ್‌, ಕಮಿನ್ಸ್‌, ಝಂಪ, ರಿಚರ್ಡ್‌ಸನ್‌, ಸ್ಟೋಯಿನಿಸ್‌, ಮ್ಯಾಕ್ಸ್‌ವೆಲ್‌ ಎಲ್ಲರೂ “ವಿಕೆಟ್‌ ಲೆಸ್‌’ ಎನಿಸಿದರು.

ಇದನ್ನೂ ಓದಿ:ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಅಶ್ವಿ‌ನ್‌ಗೆ ಅಂಜಿದ ಆಸೀಸ್‌
ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯದ ಆರಂಭ ಅತ್ಯಂತ ಶೋಚನೀಯ ವಾಗಿತ್ತು. 11 ರನ್‌ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್‌ ಸೇರಿ ಯಾಗಿತ್ತು. ಆರ್‌. ಅಶ್ವಿ‌ನ್‌ ತಮ್ಮ ಮೊದಲ ಓವರ್‌ನ ಸತತ ಎಸೆತಗಳಲ್ಲಿ ಡೇವಿಡ್‌ ವಾರ್ನರ್‌ (1) ಮತ್ತು ಮಿಚೆಲ್‌ ಮಾರ್ಷ್‌ (0) ಅವರನ್ನು ಔಟ್‌ ಮಾಡಿ ಘಾತಕವಾಗಿ ಗೋಚರಿಸಿದರು. ರವೀಂದ್ರ ಜಡೇಜ ತಮ್ಮ ಮೊದಲ ಎಸೆತದಲ್ಲೇ ನಾಯಕ ಆರನ್‌ ಫಿಂಚ್‌ (8) ಆಟ ಮುಗಿಸಿದರು.

ಆದರೆ ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ಅವರ ದಿಟ್ಟ ಬ್ಯಾಟಿಂಗ್‌ ಹೋರಾಟದಿಂದ ಆಸೀಸ್‌ ಚೇತರಿಕೆ ಕಂಡಿತು. ಅಂತಿಮ 5 ಎಸೆತಗಳಲ್ಲಿ 58 ರನ್‌ ಬಾರಿಸುವುದರೊಂದಿಗೆ ಕಾಂಗರೂ ಪಡೆಯ ಮೊತ್ತ ನೂರೈವತ್ತರ ಗಡಿ ದಾಟಿತು.

57 ರನ್‌ ಬಾರಿಸಿದ ಸ್ಮಿತ್‌ ಆಸೀಸ್‌ ಸರದಿಯ ಟಾಪ್‌ ಸ್ಕೋರರ್‌ (48 ಎಸೆತ, 7 ಬೌಂಡರಿ). ಐಪಿಎಲ್‌ ಫಾರ್ಮನ್ನೇ ಮುಂದುವರಿಸಿದ ಮ್ಯಾಕ್ಸ್‌ವೆಲ್‌ 28 ಎಸೆತಗಳಿಂದ 37 ರನ್‌ ಬಾರಿಸಿದರು (4 ಬೌಂಡರಿ). ಸ್ಟೋಯಿನಿಸ್‌ 25 ಎಸೆತ ನಿಭಾಯಿಸಿ ಅಜೇಯ 41 ರನ್‌ ಮಾಡಿದರು. ಇದರಲ್ಲಿ 4 ಫೋರ್‌ ಹಾಗೂ ಆಸೀಸ್‌ ಸರದಿಯ ಏಕೈಕ ಸಿಕ್ಸರ್‌ ಒಳಗೊಂಡಿತ್ತು.

ಬೌಲಿಂಗ್‌ ನಡೆಸಿದ ಕೊಹ್ಲಿ
ವಿರಾಟ್‌ ಕೊಹ್ಲಿ ಸೇರಿದಂತೆ ಭಾರತದ 7 ಮಂದಿ ಬೌಲಿಂಗ್‌ ನಡೆಸಿದರು. ಅಶ್ವಿ‌ನ್‌ 8 ರನ್ನಿತ್ತು 2 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಭುವನೇಶ್ವರ್‌, ಜಡೇಜ ಮತ್ತು ಚಹರ್‌ ಒಂದೊಂದು ವಿಕೆಟ್‌ ಕಿತ್ತರು. ಕೊಹ್ಲಿ 2 ಓವರ್‌ಗಳಲ್ಲಿ 12 ರನ್‌ ನೀಡಿದರು.

ಕೊಹ್ಲಿ ಬದಲು ರೋಹಿತ್‌ ಶರ್ಮ ನಾಯಕ
ದ್ವಿತೀಯ ಅಭ್ಯಾಸ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಸಂಭವಿಸಿತು. ವಿರಾಟ್‌ ಕೊಹ್ಲಿ ಬದಲು ರೋಹಿತ್‌ ಶರ್ಮ ತಂಡವನ್ನು ಮುನ್ನಡೆಸಿದರು. ಆದರೆ ಕೊಹ್ಲಿ ಬೌಲಿಂಗಿಗೆ ಇಳಿದದ್ದು ಕುತೂಹಲವೆನಿಸಿತು. ಅವರು ಭಾರತದ 6ನೇ ಬೌಲರ್‌ ಆಗಿದ್ದರು. ಆದರೆ ಬ್ಯಾಟಿಂಗ್‌ ಯಾದಿಯಲ್ಲಿ ಕೊಹ್ಲಿ ಹೆಸರಿರಲಿಲ್ಲ. ರೋಹಿತ್‌ ಶರ್ಮ ಇಂಗ್ಲೆಂಡ್‌ ಎದುರಿನ ಮೊದಲ ಅಭ್ಯಾಸ ಪಂದ್ಯ ಆಡಿರಲಿಲ್ಲ.ಪೇಸ್‌ ಬೌಲರ್‌ಗಳಾದ ಜಸ್‌ಪ್ರೀತ್‌ ಬುಮ್ರಾ ಮತ್ತು ಮೊಹಮ್ಮದ್‌ ಶಮಿ ಅವರಿಗೂ ವಿಶ್ರಾಂತಿ ನೀಡಲಾಯಿತು. ಇವರ ಬದಲು  ಶಾರ್ದೂಲ್  ಠಾಕೂರ್‌ ಮತ್ತು ವರುಣ್‌ ಚಕ್ರವರ್ತಿ ಆಡಲಿಳಿದರು. ರಿಷಭ್‌ ಪಂತ್‌ ಬದಲು ಇಶಾನ್‌ ಕಿಶನ್‌ ಕೀಪಿಂಗ್‌ ನಡೆಸಿದರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-5 ವಿಕೆಟಿಗೆ 152 (ಸ್ಮಿತ್‌ 57, ಸ್ಟೋಯಿನಿಸ್‌ ಔಟಾಗದೆ 41, ಮ್ಯಾಕ್ಸ್‌ವೆಲ್‌ 37, ಅಶ್ವಿ‌ನ್‌ 8ಕ್ಕೆ 2). ಭಾರತ-17.5 ಓವರ್‌ಗಳಲ್ಲಿ ಒಂದು ವಿಕೆಟಿಗೆ 153 (ರೋಹಿತ್‌ 60, ರಾಹುಲ್‌ 39, ಸೂರ್ಯಕುಮಾರ್‌ ಔಟಾಗದೆ 38, ಪಾಂಡ್ಯ ಔಟಾಗದೆ 14, ಅಗರ್‌ 14ಕ್ಕೆ 1).

ಟಾಪ್ ನ್ಯೂಸ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ದೆಹಲಿ ಬೈಕ್‌ ಮಾಲೀಕರಿಗೆ “ಸೆಕ್ಸ್‌’ ಸಮಸ್ಯೆ

ದೆಹಲಿ ಬೈಕ್ ಮಾಲೀಕರಿಗೆ ಶುರುವಾದ “ಸೆಕ್ಸ್” ಸಮಸ್ಯೆ

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

bommai

ಬೂಸ್ಟರ್ ಡೋಸ್ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸುತ್ತೇವೆ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

MUST WATCH

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

ಹೊಸ ಸೇರ್ಪಡೆ

ಗುಂಡಿನ ದಾಳಿ ನಡೆಸಿದ ಹೈಸ್ಕೂಲ್ ವಿದ್ಯಾರ್ಥಿ; ಮೂವರು ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ

ಗುಂಡಿನ ದಾಳಿ ನಡೆಸಿದ ಹೈಸ್ಕೂಲ್ ವಿದ್ಯಾರ್ಥಿ; ಮೂವರು ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ

ಅಜ್ಜಿ

ಬಸ್ ನಿಲ್ದಾಣದಲ್ಲಿ ಮನೆ ಮಂದಿ ಬರುವಿಕೆಗಾಗಿ ಕಾಯುತ್ತಿರುವ ವಯೋವೃದ್ದೆ..!

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

high court

ಸಿಡಿ ತನಿಖಾ ವರದಿ ಅನುಮೋದಿಸಿದ ಎಸ್‌ಐಟಿ

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.