ಏಕದಿನ: ಭಾರತ “ಎ’ ಕ್ಲೀನ್ಸ್ವೀಪ್ ಸಾಹಸ
Team Udayavani, Dec 12, 2018, 6:00 AM IST
ಮೌಂಟ್ ಮೌಂಗನುಯಿ: ಆತಿಥೇಯ ನ್ಯೂಜಿಲ್ಯಾಂಡ್ “ಎ’ ತಂಡವನ್ನು ಮೂರನೇ ಪಂದ್ಯದಲ್ಲೂ ಉರುಳಿಸಿದ ಭಾರತ “ಎ’ ಪಡೆ ಏಕದಿನ ಸರಣಿಯನ್ನು 3-0 ಕ್ಲೀನ್ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ಮಂಗಳವಾರ ನಡೆದ ಮುಖಾಮುಖೀಯಲ್ಲಿ ಮನೀಷ್ ಪಾಂಡೆ ಬಳಗ 75 ರನ್ನುಗಳ ಜಯ ಸಾಧಿಸಿತು. ಸತತ 2 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡ ಸಂಭ್ರಮದಲ್ಲಿದ್ದ ಭಾರತ, ಮೂರನೇ ಮುಖಾಮುಖೀಯಲ್ಲೂ ಪಾರಮ್ಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 8 ವಿಕೆಟಿಗೆ 275 ರನ್ ಪೇರಿಸಿದರೆ, ನ್ಯೂಜಿಲ್ಯಾಂಡ್ 44.2 ಓವರ್ಗಳಲ್ಲಿ ಸರಿಯಾಗಿ 200 ರನ್ನಿಗೆ ಆಲೌಟ್ ಆಯಿತು.
ಅನ್ಮೋಲ್ ಅಮೋಘ ಆಟ
ಆರಂಭಕಾರ ಅನ್ಮೋಲ್ಪ್ರೀತ್ ಸಿಂಗ್ ಮತ್ತು ಬೌಲರ್ ಸಿದ್ಧಾರ್ಥ್ ಕೌಲ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರಂಭಕಾರನಾಗಿ ಇಳಿದ ಅನ್ಮೋಲ್ಪ್ರೀತ್ ಪಂದ್ಯದಲ್ಲೇ ಸರ್ವಾಧಿಕ 71 ರನ್ ಹೊಡೆದರೆ (141 ಎಸೆತ, 8 ಬೌಂಡರಿ, 1 ಸಿಕ್ಸರ್), ಕೌಲ್ 37 ರನ್ ವೆಚ್ಚದಲ್ಲಿ 4 ವಿಕೆಟ್ ಉರುಳಿಸಿದರು.
ಅನ್ಮೋಲ್ಪ್ರೀತ್ ಮತ್ತು ಇಶಾನ್ ಕಿಶನ್ (39) ಮೊದಲ ವಿಕೆಟಿಗೆ 13.5 ಓವರ್ಗಳಿಂದ 68 ರನ್ ಪೇರಿಸಿದರು. ಆದರೆ ನಾಯಕ ಮನೀಷ್ ಪಾಂಡೆ (5) ಕ್ಲಿಕ್ ಆಗಲಿಲ್ಲ. ಕೆಳ ಕ್ರಮಾಂಕದಲ್ಲಿ ಅಂಕಿತ್ ಬವೆ° (48) ಮತ್ತು ವಿಜಯ್ ಶಂಕರ್ (42) ತಂಡದ ಮೊತ್ತ ಏರಿಸುವಲ್ಲಿ ನೆರವಾದರು.
ಸಂಕ್ಷಿಪ್ತ ಸ್ಕೋರ್
ಭಾರತ “ಎ’-8 ವಿಕೆಟಿಗೆ 275 (ಅನ್ಮೋಲ್ಪ್ರೀತ್ 71, ಬವೆ° 48, ವಿಜಯ್ ಶಂಕರ್ 42, ಇಶಾನ್ ಕಿಶನ್ 39, ರ್ಯಾನ್ಸ್ 49ಕ್ಕೆ 3, ಫರ್ಗ್ಯುಸನ್ 20ಕ್ಕೆ 2). ನ್ಯೂಜಿಲ್ಯಾಂಡ್ “ಎ’-44.2 ಓವರ್ಗಳಲ್ಲಿ ಆಲೌಟ್ 200 (ಸೀಫರ್ಟ್ 55, ರುದರ್ಫೋರ್ಡ್ 27, ಕೌಲ್ 37ಕ್ಕೆ 4, ಕೆ. ಗೌತಮ್ 40ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ