ಶಾಬಾಜ್ ಸ್ಪಿನ್ನಿಗೆ ಕುಸಿದ ವೆಸ್ಟ್ ಇಂಡೀಸ್
ಶಾಬಾಜ್ ನದೀಂ-62ಕ್ಕೆ 5; ವಿಂಡೀಸ್ 228
Team Udayavani, Jul 26, 2019, 5:00 AM IST
ನಾರ್ತ್ ಸೌಂಡ್ (ಆ್ಯಂಟಿಗುವಾ): ಎಡಗೈ ಸ್ಪಿನ್ನರ್ ಶಾಬಾಜ್ ನದೀಂ ದಾಳಿಗೆ ಕುಸಿತ ಕಂಡ ಆತಿಥೇಯ ವೆಸ್ಟ್ ಇಂಡೀಸ್ “ಎ’ ತಂಡ ಪ್ರವಾಸಿ ಭಾರತ “ಎ’ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನ 228 ರನ್ನಿಗೆ ಆಲೌಟ್ ಆಗಿದೆ. ಜವಾಬಿತ್ತ ಭಾರತ ಒಂದು ವಿಕೆಟಿಗೆ 70 ರನ್ ಗಳಿಸಿದೆ.
ಆರಂಭದಲ್ಲಿ ಮೊಹಮ್ಮದ್ ಸಿರಾಜ್ ಕೆರಿಬಿಯನ್ನರಿಗೆ ಬಿಸಿ ಮುಟ್ಟಿ ಸಿದರು. ಆರಂಭಿಕರಾದ ಮಾಂಟ್ಸೆನ್ ಹಾಜ್ (16) ಮತ್ತು ಜೆರೆಮಿ ಸೊಲೊಜಾನೊ (9) ವಿಕೆಟ್ ಸಿರಾಜ್ ಪಾಲಾಯಿತು. ಬಳಿಕ ನದೀಂ ಮಧ್ಯಮ ಕ್ರಮಾಂಕದ ಮೇಲೆ ಘಾತ ಕವಾಗಿ ಎರಗಿದರು. ಉಳಿದಂತೆ ಮಾಯಾಂಕ್ ಮಾರ್ಕಂಡೆ 2 ವಿಕೆಟ್, ಶಿವಂ ದುಬೆ ಒಂದು ವಿಕೆಟ್ ಉರುಳಿಸಿದರು.
ರಖೀಮ್ ಕಾರ್ನ್ವಾಲ್ (59) ಮತ್ತು ಜರ್ಮೈನ್ ಬ್ಲ್ಯಾಕ್ವುಡ್ (53) ಅರ್ಧ ಶತಕ ದಾಖಲಿಸಿ ವಿಂಡೀಸ್ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ಭಾರತ “ಎ’ ಅಭಿಮನ್ಯು ಈಶ್ವರನ್ (28) ವಿಕೆಟ್ ಕಳೆದುಕೊಂಡಿದೆ. ಪ್ರಿಯಾಂಕ್ ಪಾಂಚಾಲ್ (31) ಮತ್ತು ಶುಭಮನ್ ಗಿಲ್ (9) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್