ಹಾಕಿ:ಭಾರತ “ಎ’ ವನಿತೆಯರ ಸರಣಿ ಪರಾಕ್ರಮ

Team Udayavani, Feb 15, 2019, 5:27 AM IST

india-womens-tea.jpg

ಲಕ್ನೊ: ಪ್ರವಾಸಿ ಫ್ರಾನ್ಸ್‌ “ಎ’ ತಂಡವನ್ನು 4ನೇ ಹಾಕಿ ಪಂದ್ಯದಲ್ಲೂ ಮಣಿಸಿದ ಭಾರತದ ವನಿತಾ “ಎ’ ತಂಡ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲ ಮುಖಾಮುಖೀಯನ್ನು ಕಳೆದುಕೊಂಡ ಬಳಿಕ ತಿರುಗಿ ಬಿದ್ದ ಆತಿಥೇಯ ವನಿತೆಯರು ಗೆಲುವಿನ ಹ್ಯಾಟ್ರಿಕ್‌ನೊಂದಿಗೆ ಸರಣಿ ಮೇಲೆ ಹಕ್ಕು ಚಲಾಯಿಸಿದರು.

ಭಾರತದ ಪರ 19ರ ಯುವ ಆಟಗಾರ್ತಿ ಜ್ಯೋತಿ 26ನೇ ನಿಮಿಷದಲ್ಲಿ ಹಾಗೂ ಗಗನ್‌ದೀಪ್‌ ಕೌರ್‌ 32ನೇ ನಿಮಿಷದಲ್ಲಿ ಗೋಲು ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೂಟದ ಮೊದಲ ಪಂದ್ಯವನ್ನು 0-1 ಅಂತರದಿಂದ ಕಳೆದುಕೊಂಡಿದ್ದ ಭಾರತ, ಅನಂತರದ ಎಲ್ಲ ಪಂದ್ಯಗಳಲ್ಲೂ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ಮೇಲೆ ಸವಾರಿ ಮಾಡಿತು. ದ್ವಿತೀಯ ಪಂದ್ಯವನ್ನು 3-2 ಗೋಲುಗಳಿಂದ ಗೆದ್ದರೆ, ತೃತೀಯ ಮುಖಾಮುಖೀಯಲ್ಲಿ 2-0 ಜಯ ಸಾಧಿಸಿತು.

ಭಾರತದ ಆಕ್ರಮಣಕಾರಿ ಆಟ ಅಂತಿಮ ಪಂದ್ಯದ ಮೊದಲ ಕ್ವಾರ್ಟರ್‌ ಗೋಲ್‌ ಲೆಸ್‌ ಆಗಿ ಮುಗಿದ ಬಳಿಕ ಫ್ರಾನ್ಸ್‌ ವನಿತೆಯರು ಭಾರತದ ಮೇಲೆ ಸತತವಾಗಿ ಒತ್ತಡ ಹೇರಲು ಪ್ರಯತ್ನಿಸಿದರು. ಆದರೆ ಆತಿಥೇಯರ ಆಕ್ರಮಣಕಾರಿ
ಆಟದ ಮುಂದೆ ಫ್ರೆಂಚ್‌ ವನಿತೆಯರಿಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಅಲ್ಲದೇ 26ನೇ ನಿಮಿಷದ ಗೋಲು ಭಾರತದ ಪಾಳೆಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿತು.

ವಿರಾಮದ ವೇಳೆ ಕೋಚ್‌ ಬಲ್ಜೀತ್‌ ಸಿಂಗ್‌ ನೀಡಿದ ಸಲಹೆಯನ್ನು ತಪ್ಪದೇ ಪಾಲಿಸಿದವನಿತೆಯರು, ಎರಡೇ ನಿಮಿಷದಲ್ಲಿ ಫ್ರೆಂಚರ ಮೇಲೇರಿ ಹೋದರು. ಕೌರ್‌ ಸಿಡಿಸಿದ ಗೋಲಿನ ಸ್ಫೂರ್ತಿಯಿಂದ ಭಾರತ ಇನ್ನಷ್ಟು ಬಿರುಸಿನ ಆಟಕ್ಕಿಳಿಯಿತು. ಎದುರಾಳಿಯ ಆಕ್ರಮಣಕ್ಕೆ ಭಾರತದ ರಕ್ಷಣಾ ವಿಭಾಗ ತಡೆಯೊಡ್ಡಿತು. ಭಾರತ “ಎ’ 2-0 ಮುನ್ನಡೆ ಕಾಯ್ದುಕೊಂಡಿತು.

ಟಾಪ್ ನ್ಯೂಸ್

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ ಹೇಳಿಕೆ

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

mugilpete

ಸಂಬಂಧಗಳ ಸುತ್ತ ಮುಗಿಲ್‌ಪೇಟೆ

71aaa

ಅಲ್ಪಸಂಖ್ಯಾತ ಬಾಂಧವರೇ ಕಾಂಗ್ರೆಸ್ ಗೆ ಒಮ್ಮೆ ಪಾಠ ಕಲಿಸಿ:ಹಾನಗಲ್ ನಲ್ಲಿ ಸಿಎಂ

1-wqq

ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬ ಪತ್ತೆಗಾಗಿ 8 ಪೊಲೀಸ್ ತಂಡ

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಎತ್ತಿನಭುಜದ ಬಳಿ ಕಾಡಾನೆಗಳ ಹಿಂಡು : ಕಾಡು ಪ್ರಾಣಿಗಳ ಹಾವಳಿಗೆ ಬೆಚ್ಚಿದ ಗ್ರಾಮಸ್ಥರು

ಎತ್ತಿನಭುಜದ ಬಳಿ ಕಾಡಾನೆಗಳ ಹಿಂಡು : ಕಾಡು ಪ್ರಾಣಿಗಳ ಹಾವಳಿಗೆ ಬೆಚ್ಚಿದ ಗ್ರಾಮಸ್ಥರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1333

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗೆ ದ್ರಾವಿಡ್‌ ಅರ್ಜಿ

ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗೆ ದ್ರಾವಿಡ್‌ ಅರ್ಜಿ

ಬಾಂಗ್ಲಾವನ್ನು ಬಲೆಗೆ ಬೀಳಿಸೀತೇ ಇಂಗ್ಲೆಂಡ್‌?

ಬಾಂಗ್ಲಾವನ್ನು ಬಲೆಗೆ ಬೀಳಿಸೀತೇ ಇಂಗ್ಲೆಂಡ್‌?

ಜನಾಂಗೀಯ ನಿಂದನೆ: ಮಂಡಿಯೂರಲು ಡಿ ಕಾಕ್‌ ನಕಾರ!

ಜನಾಂಗೀಯ ನಿಂದನೆ: ಮಂಡಿಯೂರಲು ಡಿ ಕಾಕ್‌ ನಕಾರ!

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

18anganavadi

ಅಂಗನವಾಡಿ ಆವರಣದಲ್ಲಿ ಕಂಗೊಳಿಸುತ್ತಿದೆ ಕೈತೋಟ

KRS

ಜೀವನಾಡಿ ಕೆಆರ್‌ಎಸ್‌ ಡ್ಯಾಂ ಅಂತೂ ಭರ್ತಿ

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ ಹೇಳಿಕೆ

17sugarcane

ಬೈಪಾಸ್‌ ರಸ್ತೆ ನಿರ್ಮಾಣ: ಸುಗಮ ಸಂಚಾರಕ್ಕೆ ಕ್ಷಣಗಣನೆ

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.