ಭಾರತ- ಆಸೀಸ್‌ 2ನೇ ಟೆಸ್ಟ್‌: ತನ್ನದೇ ಉರುಳಿಗೆ ಭಾರತ ಬಲಿ


Team Udayavani, Mar 5, 2017, 3:45 AM IST

PTI0149A.jpg

ಬೆಂಗಳೂರು: ನಥನ್‌ ಲಿಯೋನ್‌ (50ಕ್ಕೆ8) ವಿಕೆಟ್‌ ಮಾರಕ ಸ್ಪಿನ್‌ ಬೌಲಿಂಗ್‌ ದಾಳಿಗೆ ಸಿಲುಕಿದ ಆತಿಥೇಯ ಭಾರತ, ಆಸ್ಟ್ರೇಲಿಯಾದ ವಿರುದ್ಧದ ಬೆಂಗಳೂರು 2ನೇ ಟೆಸ್ಟ್‌ ಪಂದ್ಯದ ಮೊದಲ ದಿನವೇ ಗಡಗಡ ನಡುಗಿದೆ.

ಪುಣೆಯಲ್ಲಾದ ತಪ್ಪುಗಳಿಂದ ತಿದ್ದಿಕೊಳ್ಳದ ಕೊಹ್ಲಿ ಪಡೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಅದೇ ತಪ್ಪುಗಳ ಪುನರಾವರ್ತನೆ ಮಾಡಿದೆ. ಇಲ್ಲಿಯೂ ಭಾರತಕ್ಕೆ ಮತ್ತೆ ಕಂಟಕವಾಗಿದ್ದು ಸ್ಪಿನ್‌ ದಾಳಿ. ಈ ಬಾರಿ ಕೀಫ್‌ ಅಲ್ಲ.. ನಥನ್‌ ಲಿಯೋನ್‌!. ಹೌದು, ಇವರು ಇನ್ನಿಲ್ಲದಂತೆ ಕೊಹ್ಲಿ ಪಡೆಯನ್ನು ಕಾಡಿದರು. ಆರಂಭದಲ್ಲಿ ವೇಗಕ್ಕೆ 1 ವಿಕೆಟ್‌ ಬಿದ್ದರೂ ನಂತರ ನಡೆದದ್ದೆಲ್ಲ ಲಿಯೋನ್‌ ಮ್ಯಾಜಿಕ್‌. ಹೀಗಾಗಿ 1ನೇ ಇನಿಂಗ್ಸ್‌ನಲ್ಲಿ ಕೇವಲ 189 ರನ್‌ಗೆ ಆತಿಥೇಯ ತಂಡ ಸರ್ವಪತನ ಕಂಡಿತು.

ಭಾರತದ 1ನೇ ಇನಿಂಗ್ಸ್‌ಗೆ ಉತ್ತರವಾಗಿ ಬ್ಯಾಟಿಂಗ್‌ ಆರಂಭಿಸಿರುವ ಆಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 40 ರನ್‌ ಗಳಿಸಿದೆ. ಡೇವಿಡ್‌ ವಾರ್ನರ್‌ (ಅಜೇಯ 23), ರೆನ್‌ಶಾ (ಅಜೇಯ 15 ರನ್‌)ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಕಾಂಗರೂ ಪಡೆಗೆ 1ನೇ ಇನಿಂಗ್ಸ್‌ ಮುನ್ನಡೆ ಪಡೆಯಲು ಇನ್ನೂ 149 ರನ್‌ ಬೇಕಿದೆ. ಕೈಯಲ್ಲಿ 10 ವಿಕೆಟ್‌ ಉಳಿದಿದೆ.

ರಾಜ್ಯದ ರಾಹುಲ್‌ ಏಕೈಕ ಹೋರಾಟ: ಭಾರತದ ಪರ ರಾಜ್ಯದ ಕೆ.ಎಲ್‌.ರಾಹುಲ್‌ (90 ರನ್‌)ಗಳಿಸಿದ್ದೇ ವೈಯಕ್ತಿಕ ಗರಿಷ್ಠ. ಉಳಿದಂತೆ ಕೊಹ್ಲಿ ಸೇರಿದಂತೆ ಭಾರತದ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಮತ್ತೂಮ್ಮೆ ವಿಫಲರಾದರು. ಇದು ದಿನದ ಪ್ರಮುಖ ಹೈಲೈಟ್ಸ್‌. ಒಂದು ಕಡೆ ಪಟಪಟನೆ ವಿಕೆಟ್‌ ಉರುಳುತ್ತಿದ್ದರೂ ರಾಹುಲ್‌ ಮಾತ್ರ ತಾಳ್ಮೆಯ ಆಟ ಪ್ರದರ್ಶಿಸಿದರು. ಒಟ್ಟು 205 ಎಸೆತ ಎದುರಿಸಿದ ರಾಹುಲ್‌ 43.90 ಸ್ಟ್ರೆçಕ್‌ ರೇಟ್‌ನಲ್ಲಿ ರನ್‌ಗಳಿಸಿದರು. ಇವರ ಇನಿಂಗ್ಸ್‌ನಲ್ಲಿ 9 ಆಕರ್ಷಕ ಬೌಂಡರಿ ಒಳಗೊಂಡಿತ್ತು. ಪುಣೆ ಮೊದಲ ಟೆಸ್ಟ್‌ನಲ್ಲೂ ರಾಹುಲ್‌ ಅರ್ಧಶತಕಗಳಿಸಿದ್ದನ್ನು ಸ್ಮರಿಸಬಹುದು.

ಕೈಕೊಟ್ಟ ಬ್ಯಾಟಿಂಗ್‌ ನಿರ್ಧಾರ: ಟಾಸ್‌ ಗೆದ್ದ ಕೊಹ್ಲಿ ಮೊದಲು ಬ್ಯಾಟಿಂಗ್‌ ಮಾಡುವ ನಿರ್ಧಾರಕ್ಕೆ ಬಂದರು. ತಪ್ಪು ಹೆಜ್ಜೆ ಇಟ್ಟದ್ದು ಇಲ್ಲಿಯೆ. ಪಿಚ್‌ ಸೂಕ್ಷ್ಮವನ್ನು ಅರಿಯದೇ ಕೊಹ್ಲಿ ನಿರ್ಧಾರ ತೆಗೆದುಕೊಂಡಂತಿತ್ತು. ಮುರಳಿ ವಿಜಯ್‌ ಬದಲಿಗೆ ಕೆ.ಎಲ್‌. ರಾಹುಲ್‌ ಜತೆ ಇನಿಂಗ್ಸ್‌ ಆರಂಭಿಸಲು ಬಂದ ಅಭಿನವ್‌ ಮುಕುಂದ್‌ ಖಾತೆ ತೆರೆಯುವ ಮುನ್ನ ವೇಗಿ ಸ್ಟಾರ್ಕ್‌ಗೆ ಎಲ್‌ಬಿ ಆಗಿ ಹೊರ ನಡೆದರು. ಆಗ ತಂಡದ ಮೊತ್ತ 11 ರನ್‌ಗೆ 1 ವಿಕೆಟ್‌ ಆಗಿತ್ತು. 2ನೇ ವಿಕೆಟ್‌ಗೆ ಬಂದ ಚೇತೇಶ್ವರ ಪೂಜಾರ (17 ರನ್‌) ರಾಹುಲ್‌ ಜತೆಗೂಡಿ ತಂಡದ ಮೊತ್ತವನ್ನು 72 ರನ್‌ಗೆ ಏರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಲಿಯೋನ್‌ ಕ್ಷಿಪ್ರಗತಿಯಲ್ಲಿ ಪೂಜಾರರನ್ನು ಪೆವಿಲಿಯನ್‌ಗೆ ಅಟ್ಟಿದರು. ಔಟಾಗುವ ಮೊದಲು ಪೂಜಾರ 2ನೇ ವಿಕೆಟ್‌ಗೆ ರಾಹುಲ್‌ ಜತೆಗೂಡಿ 61 ರನ್‌ ಜತೆಯಾಟದಲ್ಲಿ ಭಾಗಿಯಾಗಿದ್ದರು.

ಮತ್ತೆ ಕೊಹ್ಲಿ ವೈಫಲ್ಯ: 3ನೇ ವಿಕೆಟ್‌ಗೆ ಬಂದ ವಿರಾಟ್‌ ಕೊಹ್ಲಿ (12 ರನ್‌) ನಿರಾಸೆ ಮೂಡಿಸಿದರು. ತಂಡದ ಒಟ್ಟು ರನ್‌ 88 ರನ್‌ ಆಗಿದ್ದಾಗ ಲಿಯೋನ್‌ ಜಾದೂ ಸ್ಪಿನ್‌ನ ಒಳಸುಳಿ ಅರಿಯದೆ ಅಚ್ಚರಿಯ ಎಲ್‌ಬಿ ಆಗಿ ಔಟಾದರು. ಅಲ್ಲಿಗೆ ತಂಡ 88 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತು. ಕೊಹ್ಲಿ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್‌ನ 1ನೇ ಇನಿಂಗ್ಸ್‌ನಲ್ಲಿ ಶೂನ್ಯ, 2ನೇ ಇನಿಂಗ್ಸ್‌ನಲ್ಲಿ 13 ರನ್‌ ಸಂಪಾದಿಸಲಷ್ಟೇ ಶಕ್ತರಾಗಿದ್ದರು.
ಲಿಯೋನ್‌ ಸ್ಪಿನ್‌ಗೆ ಮಧ್ಯಮ ಕ್ರಮಾಂಕ ಚಿತ್‌: ಕೊಹ್ಲಿ ಔಟಾದ ಬಳಿಕ ಭಾರತ ತಂಡವನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆಧರಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಂತಹ ಯಾವುದೇ ಪವಾಡಗಳು ನಡೆಯಲಿಲ್ಲ. ಲಿಯೋನ್‌ ಚುರುಕಿನ ದಾಳಿಯಿಂದ ರಹಾನೆ (17 ರನ್‌), ಅಶ್ವಿ‌ನ್‌ (7 ರನ್‌), ಸಹಾ (1 ರನ್‌) ಹಾಗೂ ಜಡೇಜ (3 ರನ್‌) ಪೆವಿಲಿಯನ್‌ಗೆ ಅಟ್ಟಿದರು. ಕರುಣ್‌ ನಾಯರ್‌ ವಿಕೆಟ್‌ ಅನ್ನು ಕೀಫ್‌ ಕಿತ್ತರು. ಅಲ್ಲಿಗೆ ಭಾರತದ ದೊಡ್ಡ ಮೊತ್ತದ ಕನಸು ಭಗ್ನಗೊಂಡಿತು.

ಸ್ಕೋರ್‌ ವಿವರ
ಭಾರತ 1ನೇ ಇನಿಂಗ್ಸ್‌ 189/10
ಕೆ.ಎಲ್‌. ರಾಹುಲ್‌ ಸಿ ರೆನ್‌ಶಾ ಬಿ ಲಿಯೋನ್‌    90
ಅಭಿನವ್‌ ಮುಕುಂದ್‌ ಎಲ್‌ಬಿ ಸ್ಟಾರ್ಕ್‌    0
ಚೇàತೇಶ್ವರ ಸಿ ಹ್ಯಾಂಡ್ಸ್‌ಕಾಂಬ್‌ ಬಿ ಲಿಯೋನ್‌    17
ವಿರಾಟ್‌ ಕೊಹ್ಲಿ ಎಲ್‌ಬಿ ಲಿಯೋನ್‌ 12
ಅಜಿಂಕ್ಯ ರಹಾನೆ ಸ್ಟಂಪ್‌ ವೇಡ್‌ ಬಿ ಲಿಯೋನ್‌ 17
ಕರುಣ್‌ ನಾಯರ್‌ ಸ್ಟಂಪ್‌ ವೇಡ್‌ ಬಿ ಕೀಫ್‌    26
ಅಶ್ವಿ‌ನ್‌ ಸಿ ವಾರ್ನರ್‌ ಬಿ ಲಿಯೋನ್‌    7
ವೃದ್ದಿಮಾನ್‌ ಸಹಾ ಸಿ ಸ್ಮಿತ್‌ ಬಿ ಲಿಯೋನ್‌    1
ರವೀಂದ್ರ ಜಡೇಜ ಸಿ ಸ್ಮಿತ್‌ ಬಿ ಲಿಯೋನ್‌    3
ರಮೇಶ್‌ ಯಾದವ್‌ ಅಜೇಯ    0
ಇಶಾಂತ್‌ ಶರ್ಮಾ ಸಿ ಹ್ಯಾಂಡ್ಸ್‌ಕಾಂಬ್‌ ಬಿ ಲಿಯೋನ್‌ 0
ಇತರೆ: 16
ವಿಕೆಟ್‌ ಪತನ: 1-11, 2-72, 3-88, 4-118, 5-156, 6-174, 7-178, 8-188, 9-189, 10-189
ಬೌಲಿಂಗ್‌
ಮಿಚೆಲ್‌ ಸ್ಟಾರ್ಕ್‌ 15    5    39    1
ಹೇಜಲ್‌ವುಡ್‌ 11    2    42    0
ಕೀಫ್‌ 21    5    40    1
ಮಾರ್ಶ್‌ 2    0    2    0
ಲಿಯೋನ್‌ 22.2    4    50    8

ಆಸ್ಟ್ರೇಲಿಯಾ 1ನೇ ಇನಿಂಗ್ಸ್‌ 40/0 (1ನೇ ದಿನದ ಅಂತ್ಯಕ್ಕೆ)
ಡೇವಿಡ್‌ ವಾರ್ನರ್‌ ಅಜೇಯ    23
ರೆನ್‌ಶಾ ಅಜೇಯ 15
ಇತರೆ: 2
ಬೌಲಿಂಗ್‌
ಇಶಾಂತ್‌ ಶರ್ಮಾ 5    0    8    0
ಉಮೇಶ್‌ ಯಾದವ್‌ 4    1    16    0
ಆರ್‌. ಅಶ್ವಿ‌ನ್‌ 6    0    11    0
ರವೀಂದ್ರ ಜಡೇಜ 1    0    5    0

– ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.